ರಾಜ್ಯದಲ್ಲಿ ಪ್ರಜಾಕೀಯವೆಂಬ ಬೆಳಕಿನ ಭರವಸೆ ಮೂಡಿಸುತ್ತಿರುವ ಉಪೇಂದ್ರ

04 Nov 2017 3:49 PM | Politics
623 Report

ಉಪೇಂದ್ರ ಅವರ ಮಾತುಗಳಲ್ಲಿ ಭರವಸೆ ಇಟ್ಟು ನಡೆಯುವುದಾದರೆ ಏನೆಲ್ಲ ಬದಲಾವಣೆಗಳು ಆಗಬಹುದು ಎಂಬ ಬಗ್ಗೆಯೂ ಸಕಾರಾತ್ಮಕವಾಗಿ ಯೋಚಿಸಿ ನೋಡೋಣ ಎಂಬ ಪ್ರೇರಣೆಯೊಂದು ಮನಸ್ಸಿನೊಳಗಿನಿಂದ ಗುದ್ದಿಕೊಂಡು ಬರುತ್ತಿದೆ.

ಕಾರ್ಮಿಕರು ಬೇಕು ಭಾರತದಲ್ಲೇ ರಾಜಕಾರಣ ಅಂದರೆ ಜನ ಸೇವಕರು, ಸಮಾಜ ಸೇವಕರು, ಜನ ನಾಯಕರು ಕಾಣುತ್ತಾರೆ. ಅಂತಹವರ ಬಟ್ಟೆ ಚೂರು ಅಲುಗಾಡದೆ ಗರಿಗರಿಯಾಗಿರುತ್ತದೆ. ಜನರ ಮಧ್ಯೆ ಅಷ್ಟಾಗಿ ಕಾಣಿಸಿಕೊಳ್ಳದ, ಹಲವು ಬಾರಿ ಫೋನಿನ ಸಂಪರ್ಕಕ್ಕೂ ಸಿಗದ ಜನ ಸೇವಕರು- ಜನ ನಾಯಕರಿಗಿಂತ ತಮ್ಮ ಕರ್ತವ್ಯ ಅರಿತ, ಅದಕ್ಕಾಗಿ ಸಂಬಳ ಪಡೆವ ಕಾರ್ಮಿಕರು ಬೇಕು. ಜನರ ಮಧ್ಯೆಯೇ ಅವರಿರಬೇಕು ಎಂಬ ಆಲೋಚನೆ ಚೆನ್ನಾಗಿದೆ. ಸರಕಾರದ ಯೋಜನೆಗಳು ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮುಖ್ಯ ಸರಕಾರದ ಯೋಜನೆಗಳು ಜಾರಿಗೆ ಬಂದ ಮೇಲಷ್ಟೇ ಜನರ ಗಮನಕ್ಕೆ ಬರುತ್ತದೆ. ಈ ವಿಚಾರದಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಎಂಬುದೇ ಕಡಿಮೆ ಆಗಿದೆ. ಆದರೆ ಉಪೇಂದ್ರ ಅವರು ಸಾರ್ವಜನಿಕರು ಸರಕಾರದ ನಿರ್ಧಾರದಲ್ಲಿ ಪಾಲ್ಗೊಳ್ಳುವ ಬಗ್ಗೆ ಗಂಭೀರವಾಗಿ ಮಾತನಾಡುತ್ತಿದ್ದಾರೆ.


ಏಕೆ ಮನದಟ್ಟಾಗಿಲ್ಲವೋ?  ಈಗಾಗಲೇ ಉಚಿತ ಶಿಕ್ಷಣ, ಆರೋಗ್ಯ ಸೌಲಭ್ಯ ಇದೆ. ಉಚಿತ ಶಿಕ್ಷಣ, ಆರೋಗ್ಯದ ಬಗ್ಗೆ ಹೇಳುತ್ತಿರುವ ಉಪೇಂದ್ರ ಅವರಿಗೆ ಈಗಾಗಲೇ ಅಂಥ ವ್ಯವಸ್ಥೆ ಇದೆ ಎಂಬುದರ ಬಗ್ಗೆ ಏಕೆ ಮನದಟ್ಟಾಗಿಲ್ಲವೋ? ಈ ವಿಚಾರದಲ್ಲಿ ವ್ಯವಸ್ಥೆ ಹೆಚ್ಚು ಪರಿಣಾಮಕಾರಿಯಾಗಬೇಕು ಹಾಗೂ ಅದಕ್ಕಾಗಿ ಸರಕಾರದಿಂದ ಹಣ ಮೀಸಲಿಟ್ಟು, ನೇಮಕಾತಿಗಳು ಆಗಬೇಕು. ಜನರ ನಂಬಿಕೆ ಹೆಚ್ಚಾಗಬೇಕು. ಈ ವಿಚಾರದಲ್ಲಿ ಆಲೋಚನೆ ಇನ್ನೂ ಪರಿಣಾಮಕಾರಿ ಆಗಬೇಕು. ಟೀಕೆಗಾಗಿಯೇ ಟೀಕೆ ಬೇಡ  ಆಲೋಚನೆ ಸ್ವೀಕರಿಸುವ ಯೋಚನೆಯೇ ದೊಡ್ಡದು. ಯಾರದೇ ಆಲೋಚನೆಯಾದರೂ ಸಮಸ್ಯೆಗೆ ಅದು ಪರಿಹಾರ ಎನಿಸುವುದಾದರೆ ಅದು ಸ್ವೀಕರಿಸಬೇಕು ಎಂಬುದೇ ತುಂಬ ದೊಡ್ಡ ಮಾರ್ಪಾಟು ಎಂಬುದರಲ್ಲಿ ಎರಡು ಮಾತಿಲ್ಲ. ವಿರೋಧ ಪಕ್ಷ ಎಂಬ ಕಾರಣಕ್ಕೆ ಟೀಕಿಸಬೇಕು ಅಂತಲೇ ಟೀಕೆ ಮಾಡುತ್ತಿರುವ ಮನಸ್ಥಿತಿ ಕಾಣುತ್ತಿರುವ ಕಾಲ ಘಟ್ಟದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಒಳ್ಳೆ ಪ್ರಯತ್ನ. ಹೆಚ್ಚು ಸ್ಪಷ್ಟತೆ ಬೇಕಿತ್ತು ಜನಪ್ರತಿನಿಧಿಗಳನ್ನು ವಾಪಸ್ ಕರೆಸಿಕೊಳ್ಳುವುದು ಹೇಗೆ? ಮತದಾರರಿಗೆ ತಾವು ಆರಿಸಿದ ಜನ ಪ್ರತಿನಿಧಿಯ ಬಗ್ಗೆ ಅಸಮಾಧಾನ ಆದರೆ ವಾಪಸ್ ಕರೆಸಿಕೊಳ್ಳುವ ಬಗ್ಗೆ ತುಂಬ ಹಿಂದಿನಿಂದಲೂ ಮಾತು ಕೇಳಿಬರುತ್ತಿದೆ. ನಮ್ಮ ಪಕ್ಷದಿಂದ ಯಾರೇ ಅಸಮಾಧಾನಕ್ಕೆ ಕಾರಣವಾದರೂ ಜನರೇ ವಿಚಾರಿಸಿಕೊಳ್ಳಿ ಎಂಬ ಉಪೇಂದ್ರರ ಮಾತು ಭರವಸೆ ಹುಟ್ಟಿಸುವಂತಿದೆ. ಆದರೆ ಇದನ್ನು ಸಾಧ್ಯ ಮಾಡುವುದು ಹೇಗೆ ಎಂಬ ಸ್ಪಷ್ಟತೆ ಇರಬೇಕಿತ್ತು.

 

Edited By

venki swamy

Reported By

Madhu shree

Comments