ಕುಮಾರಸ್ವಾಮಿಯನ್ನು ಮುಂದಿನ ಸಿಎಂ ಮಾಡುವ ಪಟ್ಟು ಹಿಡಿಯಿರಿ : ನಸಿಮೊದ್ದಿನ್‌

03 Nov 2017 10:52 AM | Politics
464 Report

ಪಕ್ಷದ ಕಾರ್ಯಕರ್ತರು ಪ್ರತಿಯೊಬ್ಬ ಮತದಾರರ ಮನೆಗಳಿಗೆ ತೆರಳಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯ ಅನೇಕ ಜನಪರ ಯೋಜನೆಗಳ ಕುರಿತು ಮಾಹಿತಿ ನೀಡಬೇಕು. ಪ್ರತಿಯೊಬ್ಬ ಮತದಾರರೊಂದಿಗೆ ಉತ್ತಮ ಬಾಂಧ್ಯವ ಹೊಂದಿ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸುವ ಕಾರ್ಯ ಮಾಡಬೇಕು ಎಂದರು.

ಶಾಂತಕುಮಾರ ಜನ್ನ ಮಾತನಾಡಿ, ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡಬೇಕು. ಜನಪರ ಹೋರಾಟ ಮಾಡಬೇಕು. ಗಡವಂತಿ, ಮಾಣಿಕನಗರ ಗ್ರಾಮಸ್ಥರು ಶುದ್ಧ ನೀರಿನ ಬದಲಿಗೆ ರಾಸಾಯನಿಕ ಮಿಶ್ರಿತ ನೀರು ಕುಡಿಯುತ್ತಿದ್ದರೂ ಯಾರೊಬ್ಬ ರಾಜಕಾರಣಿಗಳು ಗ್ರಾಮಗಳತ್ತ ಮುಖ ಮಾಡುತ್ತಿಲ್ಲ ಎಂದರು. ಜೆಡಿಎಸ್‌ ರಾಜ್ಯ ಕಾರ್ಯಕಾರಣಿ ಸದಸ್ಯ ಶಿವರಾಜ ಹುಲಿ ಮಾತನಾಡಿ, ಹುಮನಾಬಾದ ಕ್ಷೇತ್ರದಿಂದ ನಸೀಮೊದ್ದಿನ್‌ ಪಟೇಲ್‌, ಬೀದರ ದಕ್ಷಿಣದಿಂದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ, ಬಸವಕಲ್ಯಾಣದಿಂದ ಮಲ್ಲಿಕಾರ್ಜುನ ಖೂಬಾ ಸ್ಪರ್ಧೆ ನಡೆಸುವ ಕುರಿತು ಈಗಾಗಲೇ ರಾಜ್ಯಮಟ್ಟದ ಮುಖಂಡರೊಂದಿಗೆ ಚರ್ಚೆ ನಡೆದಿವೆ ಎಂದರು.

ಜೆಡಿಎಸ್‌ ಯುವ ಮೋರ್ಚಾ ಅಧ್ಯಕ್ಷ ಮುಜಿಬೋದ್ದಿನ್‌ ಪಟೇಲ್‌ ಮಾತನಾಡಿ, ಜೆಡಿಎಸ್‌ ಬಸವ ತತ್ವದ ಆಧಾರದಲ್ಲಿ ನಡೆಯುವ ಪಕ್ಷ. ಪಕ್ಷದಲ್ಲಿ ಜಾತಿ, ಧರ್ಮಗಳಿಗೆ ಅವಕಾಶವಿಲ್ಲ. ಈ ಹಿಂದೆ ಆಡಳಿತ ನಡೆಸಿದ್ದ ಮಿರಾಜೊದ್ದಿನ್‌ ಪಟೇಲರು ಬಡವ ಹಾಗೂ ಶೋಷಿತರಿಗಾಗಿ ಶ್ರಮಿಸಿದ್ದಾರೆ. ಈ ಭಾಗದ ಜನರು ಇಂದಿಗೂ ಪಟೇಲರನ್ನು ಸ್ಮರಿಸುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸದೇ ಸರ್ಕಾರಿ ಕಾಲೇಜುಗಳನ್ನು ಪ್ರಾರಂಭಿಸಿ ಬಡವರಿಗೆ ಉನ್ನತ ಶಿಕ್ಷಣ ಸಿಗುವಂತೆ ಮಾಡಿದ ಕೀರ್ತಿ ಪಟೇಲರಿಗೆ ಸಲ್ಲುತ್ತದೆ ಎಂದರು. ಈ ಭಾಗದ ಕಬ್ಬು ಬೆಳೆಗಾರರ ಸಮಸ್ಯೆ ಅರಿತು ಅವರು ಖುದ್ದು ಸಕ್ಕರೆ ಕಾರ್ಖಾನೆ ಸ್ಥಾಪಿಸುವ ನಿಟ್ಟಿಲ್ಲಿ ಅನೇಕ ಪ್ರಯತ್ನಗಳನ್ನು ಮಾಡಿ ತಳಪಾಯ ಹಾಕಿದ್ದರು. ಅವರ ನಿಧನದ ನಂತರ ಎಲ್ಲಾ ಸಹೋದರರು ಸೇರಿ ಕಾರ್ಖಾನೆ ಪ್ರಾರಂಭಿಸಿ ಕಬ್ಬು ಬೆಳೆಗಾರರಿಗೆ ನೆರವು ಹಾಗೂ ನೂರಾರು ಜನರಿಗೆ ಉದ್ಯೋಗ ನೀಡುವ ಕಾರ್ಯ ಮಾಡುತ್ತಿದ್ದಾರೆ
ಎಂದು ಹೇಳಿದರು.



Edited By

Suresh M

Reported By

Madhu shree

Comments