ರಸ್ತೆ ಗುಂಡಿ ಮುಚ್ಚಿ ಮಾನವೀಯತೆ ಮೆರೆದ ಜೆಡಿಎಸ್‌ ಕಾರ್ಯಕರ್ತರು

31 Oct 2017 11:14 AM | Politics
2258 Report

ಪಟ್ಟಣದ ಹೃದಯ ಭಾಗದ ಮೂಲಕ ಹಾದುಹೋಗಿರುವ ಪಾವಗಡ-ಕೋಳ್ಳೆಗಾಲ ಮತ್ತು ಬೆಂಗಳೂರು ರಾಜ್ಯ ಹೆದ್ದಾರಿ ರಸ್ತೆಯ ಮಧ್ಯದಲ್ಲಿಯೇ ಗುಂಡಿಗಳು ಬಿದ್ದಿದ್ದು, ಜೆಡಿಎಸ್‌ ಕಾರ್ಯಕರ್ತರು ತಾವೇ ಸ್ವತಹ ರಸ್ತೆ ಗುಂಡಿ ಮುಚ್ಚುವ ಕೆಲಸ ಪ್ರಾರಂಭಿಸಿ ಪ್ರಧಾನ ರಸ್ತೆಯಲ್ಲಿನ ಗುಂಡಿಗಳನ್ನು ಮುಚುವಕಾರ್ಯ ಕೈಗೊಂಡಿದ್ದಾರೆ.

ಈ ರಸ್ತೆಯಲ್ಲಿಯೇ ಸಾರ್ವಜನಿಕರಿಗೆ ಅಗತ್ಯ ಸಾಮಗ್ರಿಗಳು ದೊರೆಯುವ ಎಲ್ಲಾ ತರದ ಅಂಗಡಿಗಳು, ಬ್ಯಾಂಕ್‌ಗಳು, ಆಸ್ಪತ್ರೆ, ಶಾಲಾ ಕಾಲೇಜುಗಳು ಸೇರಿದಂತೆ ಇನ್ನಿತರ ಸಾರ್ವಜನಿಕರು ವಹಿವಾಟು ನಡೆಯುತ್ತದೆ. ಈ ರಸ್ತೆಯಲ್ಲಿ ಓಡಾಡುವ ಜನರು ಯಾವಕಡೆಯಿಂದ ವಾಹನಗಳು ತಮ್ಮ ಮೇಲೆ ಬರುವುದೋ ಎಂದು ತಮ್ಮ ಪ್ರಾಣವನ್ನು ಅಂಗೈಯಲ್ಲಿಟ್ಟು ಕೊಂಡು ಒಡಾಡುವ ಪರಿಸ್ಥಿತಿ ಬಂದಿದೆ. 

ರಸ್ತೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪಟ್ಟಣ ಪಂಚಾಯ್ತಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೇಳಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ರಸ್ತೆ ರೀಪೇರಿಗೆ ಕ್ಷೇತ್ರದ ಶಾಸಕ ಪಿ.ಆರ್‌.ಸುಧಾಕರಲಾಲ್‌ ಮತ್ತು ವಿಧಾನ ಪರಿಷತ್‌ ಸದಸ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ರಸ್ತೆಯನ್ನು ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದರೂ ಅತಿಯಾದ ಮಳೆ ಕಾರಣ ರಸ್ತೆ ದುರಸ್ತಿಯಾಗಿರಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಕಾರ್ಯಕರ್ತರ ಹಾಗೂ ಜನತೆಯ ಮನವಿಗೆ ಸ್ಪಂದಿಸಿ ಇಲಾಖೆಯ ಅಧಿಕಾರಿಗೆ ಕೂಡಲೆ ರಸ್ತೆ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಜೆಡಿಎಸ್‌ ಕಾರ್ಯಕರ್ತರು ತಾವೇ ಸ್ವತಹ ರಸ್ತೆ ಗುಂಡಿ ಮುಚ್ಚುವ ಕೆಲಸ ಪ್ರಾರಂಭಿಸಿ ಪ್ರಧಾನ ರಸ್ತೆಯಲ್ಲಿನ ಗುಂಡಿಗಳನ್ನು ಮುಚುವಕಾರ್ಯ ಕೈಗೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ತಾಲೂಕು ಜೆಡಿಎಸ್‌ ಕಾರ್ಯಾಧ್ಯಕ್ಷ ನರಸಿಂಹರಾಜು ಹಾಗೂ ಪ್ರಾಧಾನ ಕಾರ್ಯದರ್ಶಿ ಲಕ್ಷ್ಮಣ್‌ ರಸ್ತೆ ದುರಸ್ತಿಗೆ ಅಧಿಕಾರಿಗಳು ಮೀನ ಮೇಷ ಎಣಿಸುತ್ತಿರುವುದನ್ನು ಖಂಡಿಸಿ ನಾವೇ ಕಾರ್ಯಕರ್ತರೊಂದಿಗೆ ರಸ್ತೆ ದುರಸ್ತಿ ಮಾಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಪಪಂ ಮಾಜಿ ಅಧ್ಯಕ್ಷ ಶಂಕರಪ್ಪ, ಕಾರ್ಯದರ್ಶಿ ಲಕ್ಷ್ಮಣ್‌, ಗುತ್ತಿಗೆದಾರರಾದ ಎ.ಪಿ.ಲಕ್ಷ್ಮೀಶ, ಲಕ್ಷ್ಮೀನಾರಾಯಣ್‌, ದೊಡ್ಡಯ್ಯ, ಕೆ.ಆರ್‌.ನಾಗೇಂದ್ರ, ಹೂಲಿಕುಂಟೆ ಶ್ರೀಧರ್‌, ಗಿರೀಶ್‌ರಾವ್‌, ಕೇಬಲ್‌ ಸೈಯದ್‌ಸೈಪುಲ್ಲಾ, ಕಾಕಿಮಲ್ಲಯ್ಯ ಸೇರಿದಂತೆ ಕಾರ್ಯಕರ್ತರು ಇನ್ನಿತರರು ಹಾಜರಿದ್ದರು.



Edited By

Suresh M

Reported By

Madhu shree

Comments