ಸಚಿವ ಜಾರ್ಜ್ ರಾಜೀನಾಮೆಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

27 Oct 2017 3:58 PM | Politics
389 Report

ಕೇಂದ್ರ ಸರ್ಕಾರದ 20 ಜನ ಸಚಿವರ ವಿರುದ್ದ ಹಾಗೂ 8 ಜನರ ವಿರುದ್ದ ಗಂಭೀರ ಕೇಸ್ ಗಳು ದಾಖಲಾಗಿದೆ, ಇದರ ಜೊತೆಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿಯವರ ವಿರುದ್ದ ಕೂಡ ಕೊಲೆ ಯತ್ನ ಕೇಸ್ ಪ್ರಕರಣ ಕೂಡ ಇದೇ ಮೊದಲು ಅವರು ರಾಜೀನಾಮೆ ನೀಡಲಿ, ನಂತರ ನಾವು ಕೆ.ಜೆ. ಜಾರ್ಜ್​ ಅವರ ರಾಜೀನಾಮೆ ಬಗ್ಗೆ ಯೋಚಿಸುವೆವು ಅಂತಾ ಹೇಳಿದರು.

ಪೊಲೀಸ್ ಅಧಿಕಾರಿ ಗಣಪತಿ ಸಾವಿನ ಕುರಿತಾದ ಸಿಬಿಐ ತನಿಖೆ ಬಗ್ಗೆ ಕೆ.ಜೆ. ಜಾರ್ಜ್​ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಇದೇ ವೇಳೆ ಅವರು ಈ ಹಿಂದೆ ಇಂತಹುದೇ ಸಂದರ್ಭ ಬಂದಾಗ ಕೆ.ಜೆ. ಜಾರ್ಜ್​ ಅವರೇ ರಾಜೀನಾಮೆ ನೀಡಿದ್ದರು. ತದನಂತರ ಬಿ ರಿಪೋರ್ಟ್ ಸಲ್ಲಿಕೆಯಾದ ಬಳಿಕ ಅವರನ್ನು ಪುನಃ ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಇನ್ನು ಗಣಪತಿ ಆತ್ಮಹತ್ಯೆಯಾದ ಬಳಿಕ ಅವರ ತಂದೆ ರಿಟ್ ಪಿಟೀಶನ್ ಹಾಕಿ ಪ್ರಕರಣವನ್ನು ಸಿಬಿಐ ಗೆ ಕೊಡುವಂತೆ ಹಾಕಿದ ಅರ್ಜಿ ಹೈಕೋರ್ಟ್ ನಲ್ಲಿ ವಜಾ ಆಗಿತ್ತು ಸುಪ್ರೀಂ ಕೋರ್ಟ್ ನಲ್ಲಿ ಗಣಪತಿ ತಂದೆ ಕುಶಾಲಪ್ಪ ಎಸ್ ಎಲ್ ಪಿ ಹಾಕಿದ್ದಾರೆ ಅದರಂತೆ ಸುಪ್ರೀಂ ಕೋರ್ಟ್ ತನಿಖೆಗೆ ಸೂಚಿಸಿದೆ, ಆದರೆ ಆದರೆ ಎಲ್ಲೂ ಜಾರ್ಜ್ ಹೆಸರು ಪ್ರಸ್ತಾಪ ಆಗಿಲ್ಲ ಅಂತಾ ಹೇಳಿದರು. ತನಿಖಾ ಏಜೆನ್ಸಿಗೆ ಜಾರ್ಜ್ ಪರ ಶಿಫಾರಸ್ಸು ಮಾಡ್ತಾರೆ ಅಂತಾರೆ, ಸಿಬಿಐ ಇರೋದು ಯಾರ ಹತ್ರ, ತನಿಖಾ ಏಜೆನ್ಸಿಗೆ ಶಿಫಾರಸ್ಸು ಮಾಡುವ ಅವಶ್ಯಕತೆಯೇನಿಲ್ಲ, ಜಾರ್ಜ್ ಮತ್ತು ರಾಜ್ಯ ಸರ್ಕಾರಕ್ಕೆ ಧಕ್ಕೆ ತರುವ ಆಟವನ್ನು ಬಿಜೆಪಿ ಆಡ್ತಿದೆ, ಚುನಾವಣಾ ಹಿನ್ನೆಲೆ ಬಿಜೆಪಿ.ರಾಜಕೀಯ ದುರುದ್ದೇಶದಿಂದ ಇಂಥ ಆಟಗಳನ್ನು ಆಡ್ತಿದೆ  ಅಂತ ಕಿಡಿ ಕಾರಿದರು.

Edited By

Shruthi G

Reported By

Madhu shree

Comments