ಸಿದ್ದು ಸರ್ಕಾರದಿಂದ 93 ಖೈದಿಗಳಿಗೆ ಬಿಡುಗಡೆ ಭಾಗ್ಯ

27 Oct 2017 10:10 AM | Politics
326 Report

ಬಿಡುಗಡೆಯಾಗುವ ಖೈದಿಗಳಲ್ಲಿ 86 ಜನ ಪುರುಷರು ಹಾಗೂ 7 ಜನ ಮಹಿಳೆಯರು ಸೇರಿದ್ದಾರೆ. ಬೆಂಗಳೂರು 41, ಮೈಸೂರು 16, ಬೆಳಗಾವಿ 13, ಕಲಬುರಗಿ 4, ವಿಜಯಪುರ 7, ಬಳ್ಳಾರಿ 9, ಧಾರವಾಡದ ಮೂವರು ಕೈದಿಗಳ ಬಿಡುಗಡೆಗೆ ಸಂಪುಟ ಒಪ್ಪಿಗೆ ನೀಡಿದೆ. ಈ ಹಿಂದೆ ಸ್ವಾತಂತ್ರ್ಯೋತ್ಸದ ಅಂಗವಾಗಿ ಖೈದಿಗಳ ಬಿಡುಗಡೆಗೆ ಸಂಪುಟ ಒಪ್ಪಿಗೆ ನೀಡಿದೆ.

ಸಂಪುಟದ ಪ್ರಮುಖ ತೀರ್ಮಾನಗಳು : ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನಲ್ಲಿ 100 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣಕ್ಕೆ 18.75 ಕೋಟಿ ರೂ ಅಂದಾಜು ಮೊತ್ತಕ್ಕೆ ಅನುಮೋದನೆ.ರಾಯಚೂರಿನ ಮಾನ್ವಿ ತಾಲೂಕಿನ ಮಲ್ಲಟ್‌ ಮತ್ತು 10 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಜಾರಿಗೆ ಒಪ್ಪಿಗೆ.ಕರ್ನಾಟಕ ನಗರ ಸರಬರಾಜು ಮಂಡಳಿಯಿಂದ 13 ಯೋಜನೆಗಳಿಗೆ 398 ಕೋಟಿ ಪರಿಷ್ಕೃತ ಯೋಜನೆಗೆ ಒಪ್ಪಿಗೆ. ಮಾರ್ಚ್‌ ಅಂತ್ಯಕ್ಕೆ ಪೂರ್ಣಗೊಳಿಸಲು ಸೂಚನೆ. ಹುಬ್ಬಳ್ಳಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಟೆಂಡರ್‌ ಶ್ಯೂರ್‌ ಯೋಜನೆ ಜಾರಿಗೆ 10.35 ಕೋಟಿಗೆ ಒಪ್ಪಿಗೆ. ಬೆಂಗಳೂರಿನ ಜೀವನ್‌ ಭೀಮಾನಗರದಲ್ಲಿ 27 ಕೋಟಿ ರೂ. ವೆಚ್ಚದಲ್ಲಿ ಡಿ. ದರ್ಜೆ ನೌಕರರ ವಸತಿ ಸಮುಚ್ಚಯ ನಿರ್ಮಾಕ್ಕೆ ಒಪ್ಪಿಗೆ. ಬಿಬಿಎಂಪಿ ವ್ಯಾಪ್ತಿಗೊಳಪಡುವ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು 1886 ಕೋಟಿಯಿಂದ 1500 ಕೋಟಿಗೆ ತಗ್ಗಿಸಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ. ಬಳ್ಳಾರಿ ಜಿಲ್ಲೆ ಹೊಸಪೇಟೆ ಬಿಳಿಕಲ್‌ ಅರಣ್ಯ ಪ್ರದೇಶದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಮೃಗಾಲಯ ಸ್ಥಾಪನೆಗೆ 32 ಕೋಟಿ ರೂ. ನೀಡಲು ಒಪ್ಪಿಗೆ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ 175 ಕೋಟಿ ಯೋಜನೆಗೆ ಕಾರ್ಯಕ್ರಮ ರೂಪಿಸಲು ಮುಖ್ಯಮಂತ್ರಿಗೆ ಜವಾಬ್ದಾರಿ. ನವೆಂಬರ್‌ 4ಕ್ಕೆ ಶ್ರವಣ ಬೆಳಗೊಳದಲ್ಲಿ ಸಿಎಂ ಸಭೆ. 700 ರೂ.ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಡಾ. ಆರ್‌. ಕೆ.ಬಾಲಾಜಿಗೆ ನಿವೃತ್ತಿ ಪಡೆಯಲು ಸಂಪುಟ ಒಪ್ಪಿಗೆ ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ 371 ಜೆ ಅನ್ವಯ 126 ಪಶು ವೈದ್ಯಾಧಿಕಾರಿಗಳ ನೇಮಕಕ್ಕೆ ಅನುಮತಿ. ರಾಜ್ಯದ ಏಳು ಉಗ್ರಾಣಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಶೀತಲ ಗೃಹ ನಿರ್ಮಾಣಕ್ಕೆ ಒಪ್ಪಿಗೆ. ಕಾರ್ಮಿಕ ಇಲಾಖೆ ಅಂಬೇಡ್ಕರ್‌ ಸಹಾಯ ಹಸ್ತ ಯೋಜನೆ ಮೂಲಕ ಎಲ್ಲ ಯೋಜನೆಗಳನ್ನು ಕಾರ್ಮಿಕರಿಗೆ ತಲುಪಿಸಲು ಸಂಪುಟ ಒಪ್ಪಿಗೆ. ಕಲಬುರಗಿ ಜಿಲ್ಲೆಯಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ 9 ವಸತಿ ನಿಲಯ ಸ್ಥಾಪನೆಗೆ ಒಪ್ಪಿಗೆ. ಕಿತ್ತೂರು, ಬೈಲಹೊಂಗಲ ತಾಲೂಕಿನ 64 ಕೆರೆಗಳಿಗೆ ಮಲಪ್ರಭಾ ನದಿಯಿಂದ ನೀರು ತುಂಬಿಸಲು 440 ಕೋಟಿ ರೂ. ಯೋಜನೆಗೆ ಒಪ್ಪಿಗೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸುರತ್ಕಲ್‌ ಬಳಿ 61 ಕೋಟಿ ರೂ. ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಅನುಮತಿ.

 

Edited By

Hema Latha

Reported By

Madhu shree

Comments