ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಸಮಾಧಾನ

24 Oct 2017 4:18 PM | Politics
221 Report

ಮಕ್ಕೆಜೋಳ ಹಾನಿ ಪರಿಶೀಲನೆ ಮಾಡಲು ಇಂದು ಜಿಲ್ಲೆಯ ಹೂವಿನ ಹಡಗಲಿಗೆ ದೇವೇಗೌಡರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು, ಸಂಸತ್‍ನಲ್ಲಿ ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಕಳೆದ ವರ್ಷ ಸರ್ಕಾರದ ಬಜೆಟ್ ಮೇಲೆ ನಾನು ಮಾತನಾಡಿದ್ದೇನೆ ಎಂದು ಹೇಳಿದರು.

ಸಂಸತ್ ನಲ್ಲಿ ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕಠಿಣವಾಗಿ ಮಾತನಾಡುತ್ತಿದ್ದೆ. ಆದರೆ ಈಗ ಸಂಖ್ಯಾಬಲದ ಆಧಾರವೆಂದು ಹೊಸ ನಿಯಮ ಜಾರಿಗೆ ತಂದು ನನ್ನ ಭಾಷಣವನ್ನು ಹತ್ತಿಕ್ಕಲಾಗುತ್ತಿದೆ ಎಂದು ಕೋಪಗೊಂಡು ಹೇಳಿದ್ದಾರೆ. ಮಾತನ್ನು ಮುಂದುವರೆಸಿ, ಸೈನಿಕ ಹುಳಕಾಟದಿಂದ ಮೆಕ್ಕೆಜೋಳ ಎಲ್ಲಾವೂ ಹಾಳಾಗಿದೆ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಅತಿಯಾದ ಮಳೆಯಿಂದ ಕೂಡಾ ಬೆಳೆಹಾನಿಯಾಗಿದೆ. ಪರಿಹಾರ ನೀಡಬೇಕಾದ ಎರಡು ಸರ್ಕಾರಗಳು ರೈತರ ಬಗ್ಗೆ ತಾತ್ಸಾರ ಮನೋಭಾವನೆ ಹೊಂದಿವೆ. ಅಷ್ಟೇ ಅಲ್ಲದೇ ಟಿಪ್ಪು ಜಯಂತಿ ವಿವಾದದಿಂದ ಕಾಂಗ್ರೆಸ್-ಬಿಜೆಪಿ ಒಬ್ಬರಿಗೊಬ್ಬರು ಪೈಪೋಟಿ ನಡೆಸುತ್ತಿದ್ದಾರೆ. ಈ ರೀತಿಯ ಪರವಿರೋಧ ಚರ್ಚೆಗೆ ಅರ್ಥವಿಲ್ಲ. ಬಿಜೆಪಿ ಅತಿರೇಕಕ್ಕೆ ಹೋಗಬಾರದು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

 

Edited By

Shruthi G

Reported By

Madhu shree

Comments