ತಾಕತ್ತಿದ್ದರೆ ಹಂದಿ ತಿಂದು ಮಸೀದಿಗೆ ಪ್ರವೇಶ ಮಾಡಿ ಸಿಎಂಗೆ ,ಶಿವಣ್ಣ ಟೀಕೆ

24 Oct 2017 3:39 PM | Politics
626 Report

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಂಸದೂಟ ಮಾಡಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಅದು ಆಹಾರ ಪದ್ಧತಿ ಎಂದು ಸಮರ್ಥನೆ ಮಾಡಿಕೊಂಡಿರುವುದು ಭಕ್ತರ ಭಾವನೆಗೆ ವಿರುದ್ಧವಾಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬೇಡರ ಕಣ್ಣಪ್ಪನನ್ನು ಉದಾಹರಣೆಗೆ ತೆಗೆದುಕೊಂಡಿರುವ ಸಿದ್ದರಾಮಯ್ಯನವರಿಗೆ ತಾಕತ್ತಿದ್ದರೆ ಹಂದಿ ತಿಂದು ಮಸೀದಿಗೆ ಪ್ರವೇಶ ಮಾಡಿ ಇದೂ ಕೂಡಾ ಆಹಾರ ಪದ್ಧತಿ ಎಂದು ಸಮರ್ಥನೆ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದರು. ನೂರಾರು ವರ್ಷ ಇತಿಹಾಸವಿರುವ ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ರಾಜ್ಯ, ರಾಷ್ಟ್ರಾದ್ಯಂತ ಕೋಟಿ ಕೋಟಿ ಭಕ್ತರಿದ್ದಾರೆ. ಅವರ ಭಾವನೆಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡು ಮಾಂಸದೂಟ ಮಾಡಿ ದೇವಾಲಯ ಪ್ರವೇಶಿಸಿರುವುದು ತೀವ್ರ ಆಕ್ರೋಶ ತರುತ್ತಿದೆ ಎಂದು ಹೇಳಿದರು. ಸಿದ್ದರಾಮಯ್ಯ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಜಾತಿ ಜಾತಿಗಳ ನಡುವೆ ಒಡಕು ಮೂಡಿಸುವುದು ಯಾವ ಲಾಭಕ್ಕಾಗಿ. ಇವರು ರಾಜಕೀಯ ಲಾಭಕ್ಕಾಗಿ ಯಾರನ್ನು ಬೇಕಾದರೂ ನಿರ್ನಾಮ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತುಮಕೂರು ನಗರ ಶಾಸಕ ರಫೀಕ್ ಅಹಮದ್ ಅವರ ಕರ್ಮಕಾಂಡವನ್ನು ಹಂತ ಹಂತವಾಗಿ ಬಹಿರಂಗಪಡಿಸುತ್ತೇನೆ ಎಂದು ಸೊಗಡು ಶಿವಣ್ಣ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಕೆ.ಪಿ.ಮಹೇಶ್, ನಂದೀಶ್, ನಂಜುಂಡಪ್ಪ, ಶಾಂತರಾಜ್, ಬನಶಂಕರಿಬಾಬು, ನವೀನ್, ಕಾಂತರಾಜು ಮತ್ತಿತರರಿದ್ದರು.

Edited By

Hema Latha

Reported By

Madhu shree

Comments