ಮಳೆಯಿಂದ ಆಗಿರುವ ಬೆಳೆ ಹಾನಿ ಪರಿಶೀಲನೆ ನಡೆಸಿರುವ ದೇವೇಗೌಡರು

23 Oct 2017 1:38 PM | Politics
530 Report

ಮಳೆಯಿಂದ ಹಾನಿಗೀಡಾಗಿರುವ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಹಾವೇರಿ ಜಿಲ್ಲೆಗಳಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಇಂದು ಮತ್ತು ನಾಳೆ ಅಧ್ಯಯನ ನಡೆಸಲಿದ್ದಾರೆ. ಈ ಜಿಲ್ಲೆಗಳಲ್ಲಿ ಹಾನಿಗೀಡಾಗಿರುವ ಮೆಕ್ಕೆಜೋಳ ಬೆಳೆಯನ್ನು ಖುದ್ದು ವೀಕ್ಷಣೆ ಮಾಡಲಿದ್ದಾರೆ.

ಜೊತೆಗೆ ಬೆಳೆಗಾರರಿಂದ ಮಾಹಿತಿ ಪಡೆಯಲಿದ್ದಾರೆ. ಮೆಕ್ಕೆಜೋಳ ಬೆಳೆಹಾನಿಗೆ ಒಳಗಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಧಾವಿಸುವಂತೆ ಪ್ರಧಾನಿ ನರೇಂದ್ರಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೌಡರು ಪತ್ರ ಬರೆಯಲಿದ್ದಾರೆ. ಪ್ರಧಾನಮಂತ್ರಿಯವರ ಖುದ್ದು ಭೇಟಿಗೂ ಕೂಡ ಪ್ರಯತ್ನ ನಡೆಸಲಿರುವ ಗೌಡರು, ರೈತರ ಸಮಸ್ಯೆಯನ್ನು ಮನವರಿಕೆ ಮಾಡಿಕೊಡಲಿದ್ದಾರೆ.ಇಂದು ದಾವಣಗೆರೆ ಜಿಲ್ಲೆಯ ದೇವಿಕೆರೆ, ಗಾಂಧಿನಗರ, ಹರಪನಹಳ್ಳಿ ತಾಲೂಕಿನ ಅರಸಿಕೆರೆ, ಕಮ್ಮತಹಳ್ಳಿ, ಹಡಗಲಿ ಮೊದಲಾದ ಪ್ರದೇಶಗಳಿಗೆ ಭೇಟಿ ನೀಡಿ ಮೆಕ್ಕೆಜೋಳ ಹಾನಿ ಗೀಡಾಗಿರುವುದನ್ನು ಖುದ್ದು ವೀಕ್ಷಿಸಿದರು. ನಾಳೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮುಂಡರಗಿ, ಜಾಲಿಗೆರೆ, ಹಾವೇರಿ ಜಿಲ್ಲೆಯ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲನೆ ನಡೆಸಲಿದ್ದಾರೆ ಎಂದು ಗೌಡರ ಆಪ್ತ ವಲಯ ತಿಳಿಸಿದೆ.

Edited By

Shruthi G

Reported By

Madhu shree

Comments