ಸಿಪಿಐ-ಎಂ ಕಾರ್ಯಕರ್ತರು ದೌರ್ಜನ್ಯವೆಸಗಿದ್ರೆ ಅವರ ಕಣ್ಣನ್ನು ತೆಗೆದುಹಾಗುತ್ತೇವೆ, ಬಿಜೆಪಿ ನಾಯಕಿ ಸರೋಜ್

16 Oct 2017 10:34 PM | Politics
249 Report

ಸಿಪಿಐ-ಎಂ ಕಾರ್ಯಕರ್ತರು ಮತ್ತೆ ದೌರ್ಜನ್ಯಕ್ಕೆ ಮುಂದಾದಲ್ಲಿ ನಾವು ಅವರ ಮನೆಗಳಿಗೆ ನುಗ್ಗಿ ಅವರ ಕಣ್ಣನ್ನು ತೆಗೆದುಹಾಕುತ್ತೇವೆ ಎಂದು ಎಚ್ಚರಿಸಿದ್ದಾರೆ.

 ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಲ್ಲೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿಪಿಐ-ಎಂ ಕಾರ್ಯಕರ್ತರು ಮತ್ತೆ ದೌರ್ಜನ್ಯಕ್ಕೆ ಮುಂದಾದಲ್ಲಿ ನಾವು ಅವರ ಮನೆಗಳಿಗೆ ನುಗ್ಗಿ ಅವರ ಕಣ್ಣನ್ನು ತೆಗೆದುಹಾಕುತ್ತೇವೆ ಎಂದು ಎಚ್ಚರಿಸಿದ್ದಾರೆ.
 
"ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತವೂ ನಾವು 11 ಕೋಟಿ ಸದಸ್ಯರನ್ನು ಹೊಂದಿದ್ದೇವೆ ಮತ್ತು ಕೇರಳದಲ್ಲಿ ವಿವಿಧ ವಯೋಮಾನದ ನಮ್ಮ 300 ಕ್ಕೂ ಹೆಚ್ಚು ಸದಸ್ಯರು ಹತ್ಯೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
 
ಪ್ರಜಾಪ್ರಭುತ್ವದ ಹತ್ಯೆಯಾದರೆ ಅದು ನಮಗೆ ದೊಡ್ಡ ವಿಷಯವಲ್ಲ. ನಾವು ದೇಶವನ್ನು ಆಳುತ್ತಿದ್ದೇವೆ. ಮತ್ತು ನಾವು ಬಯಸಿದರೆ ಕೇರಳ ಸರಕಾರವನ್ನು ವಜಾ ಮಾಡಬಹುದು. ಆದರೆ, ಪ್ರಜಾಪ್ರಭುತ್ವ ಮತ್ತು ಕೇರಳದ ಸರ್ಕಾರದ ಮೇಲೆ ನಂಬಿಕೆ ಹೊಂದಿದ್ದೇವೆ. ಪಶ್ಚಿಮ ಬಂಗಾಳವು ಅದಕ್ಕೆ ಅನುಗುಣವಾಗಿ ಕೆಲಸ ಮಾಡಬೇಕು, ಮಮತಾ ಬ್ಯಾನರ್ಜಿ ಯಾವುದೇ ರಾಜಕೀಯ ಪಕ್ಷಪಾತದಿಂದ ಕೆಲಸ ಮಾಡಬಾರದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸರೋಜ್ ಪಾಂಡೆ ಹೇಳಿದ್ದಾರೆ.
 

Edited By

venki swamy

Reported By

Sudha Ujja

Comments