ರೈತರಿಗೆ ಬರ ಪರಿಹಾರ ನೀಡಿರುವುದು ಕೇಂದ್ರ ಸರಕಾರದ್ದು, ರಾಜ್ಯ ಸರ್ಕಾರ ನಯಾಪೈಸೆ ನೀಡಿಲ್ಲ, ತಪ್ಪೋಪಿಕೊಂಡ ಕಾಂಗ್ರೆಸ್ ಸಚಿವ

06 Oct 2017 1:47 PM | Politics
1097 Report

ಕಳೆದ ವರ್ಷ ಬರ ಪರಿಹಾರ ಸಂಬಂಧ ರಾಜ್ಯ ಸರಕಾರ ಹಣ ನೀಡಿಲ್ಲ, ಬದಲಾಗಿ ಕೇಂದ್ರ ಸರಕಾರ ನೀಡಿದ್ದ ಅನುದಾನದಲ್ಲಿ ಹೊಂದಿಸಿಕೊಂಡು ಪರಿಹಾರ ನೀಡಲಾಗಿದೆ ಎಂದು ಖುದ್ದಾಗಿ ಕಾಗೋಡು ತಿಮ್ಮಪ್ಪ ತಪ್ಪೊಪ್ಪಿಕೊಂಡಿದ್ದಾರೆ….

ಸಿದ್ದರಾಮಯ್ಯ ರೈತರಿಗೆ ಬರ ಪರಿಹಾರ ನೀಡಿರುವುದು ಯಾರ ಹಣ ಎಂಬುವುದರ ಸ್ಫೋಟಕ ಮಾಹಿತಿಯೊಂದು ಬಯಲಾಗಿದೆ. ಕೇಂದ್ರ ಸರಕಾರದ ಹಣದಿಂದ ರೈತರಿಗೆ ಬರ ಪರಿಹಾರ ನೀಡಿ, ತನ್ನ ಜೇಬಿನಿಂದ ತೆಗೆದುಕೊಟ್ಟಂತೆ ಬೀಗುತ್ತಿದ್ದ ಸಿಎಂ. ಹೇಳಿಕೆಯೊಂದನ್ನು ನೀಡುತ್ತಾ ಕೇಂದ್ರ ರೈತರ ಬರ ಪರಿಹಾರಕ್ಕಾಗಿ ನಯಾಪೈಸೆ ನೀಡಿಲ್ಲ ರಾಜ್ಯ ಸರಕಾರದ ವತಿಯಿಂದ 300 ಕೋಟಿ ಹಣವನ್ನು ಬರ ಪರಿಹಾರ ವಿತರಿಸಲಾಗಿದೆ ಎಂದು ಹಸಿ ಹಸಿ ಸುಳ್ಳು ಹೇಳಿದ್ದರು. 

ರಾಜ್ಯ ಸರಕಾರದಿಂದ ರೈತರಿಗೆ ನಯಾಪೈಸೆ ಕೊಡಲಾಗಲಿಲ್ಲ. ಯಾರದ್ದೋ ದೊಡ್ಡು ಎಲ್ಲಮ್ಮನ ಜಾತ್ರೆ ಎಂಬಂತೆ ಕೇಂದ್ರದ ಹಣವನ್ನು ರಾಜ್ಯ ಸರಕಾರದ ಹಣವೆಂದು ಬಿಂಬಿಸುತ್ತಿದ್ದಾರೆ.ಸಿದ್ದರಾಮಯ್ಯ, ಮೋದಿ ಬಗ್ಗೆ ಮಾತಾಡಲು ಯಾವ ಹಕ್ಕಿದೆ ನಿಮಗೆ ? ಮೋದಿ ಸರಕಾರ ನೀಡಿದ ಹಣದಿಂದ ರೈತರಿಗೆ ಪರಿಹಾರ ನೀಡಿ ತನ್ನದೇ ಹಣ ಎಂದು ಬಿಂಬಿಸಿ ಮುಂದಿನ ಬಾರಿ ಎಲೆಕ್ಷನ್ ಗೆಲ್ಲಲು ತಯಾರಿ ನಡೆಸುತ್ತಿರುವ ಸಿಎಂ  ರಾಜ್ಯ ಸರಕಾರದಿಂದ ರೈತರಿಗೆ ನಯಾಪೈಸೆ ಕೊಡಲಾಗಲಿಲ್ಲ. ಕಳೆದ ವರ್ಷ ಮುಂಗಾರಿನ ಬೆಳೆ ನಷ್ಟಕ್ಕೆ ಸಂಬಂಧಿಸಿ ಕೇಂದ್ರದಿಂದ 1700 ಕೋಟಿ ರೂ ನೆರವಿನಲ್ಲಿ 1635 ಕೋಟಿ ರೂ ಹಣವನ್ನು 23.31 ಲಕ್ಷ ರೈತರಿಗೆ ಪರಿಹಾರ ನೀಡಲಾಗಿದೆ. ಅಷ್ಟೇ   ಅಲ್ಲದೆ ಹಿಂಗಾರು ಬೆಳೆ ನಷ್ಟಕ್ಕೆ 700 ಕೋಟಿ ರೂ. ಕೇಂದ್ರದ ನೆರವಿನಲ್ಲಿ 639 ಕೋಟಿ ರೂ.ಗಳನ್ನು 8.98 ಲಕ್ಷ ರೈತರಿಗೆ ಪರಿಹಾರ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಈ ಹಣ ನಿಜವಾಗಿಯೂ ರೈತರಿಗೆ ಸಿಕ್ಕಿದೆಯೋ ಅಥವಾ ಎಷ್ಟು ಹಣ ಕಾಂಗ್ರೆಸಿಗರ ಹೊಟ್ಟೆ ಸೇರಿದೆಯೋ ಆ ದೇವರಿಗೇ ಗೊತ್ತು ಎಂದು ಕಾಗೋಡು ತಿಮ್ಮಪ್ಪ ಹೇಳಿದರು.

Edited By

Suresh M

Reported By

Suresh M

Comments