ಬಿಜೆಪಿ ಚುನಾವಣಾ ಪ್ರಣಾಳಿಕೆ ರಚನೆಗೆ ನಿಮ್ಮ ಸಲಹೆಯನ್ನು ಕಳಿಸಬಹುದು

05 Oct 2017 12:22 PM | Politics
763 Report

ಕರ್ನಾಟಕ ಬಿಜೆಪಿ ಮುಂದಿನ ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆ ತಯಾರಿಸಲು ಸಮಿತಿಯನ್ನು ರಚನೆ ಮಾಡಿದೆ. ಮಾಜಿ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ 17 ಸದಸ್ಯರ ಸಮಿತಿ ರಚಿಸಲಾಗಿದೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮಿತಿಗೆ ಸದಸ್ಯರನ್ನು ನೇಮಕ ಮಾಡಿ ಮಂಗಳವಾರ ಆದೇಶ ಹೊರಡಿಸಿದ್ದಾರೆ….

ಪ್ರಣಾಳಿಕೆಗೆ ಜನರಿಂದಲೂ ಸಹ ಸಲಹೆಗಳನ್ನು ಆಹ್ವಾನಿಸಲಾಗಿದೆ. ಯಡಿಯೂರಪ್ಪ ಅವರದು ಕೇರಂ ಆಟದ ತಂತ್ರ: ಸುರೇಶ್ ಕುಮಾರ್ ಸಂದರ್ಶನ 'ಈ ಪ್ರಣಾಳಿಕೆಗೆ ನೀವೆಲ್ಲಾ ನಿಮ್ಮ ಕೊಡುಗೆಯನ್ನು ಸಲಹೆಗಳ ಮೂಲಕ ನೀಡಬೇಕೆನ್ನುವುದು ನಮ್ಮ ಮನವಿ' ಎಂದು ಸುರೇಶ್ ಕುಮಾರ್ ಅವರು ಫೇಸ್‌ ಬುಕ್‌ನಲ್ಲಿ ಬರೆದಿದ್ದಾರೆ. ಸುರೇಶ್ ಕುಮಾರ್ ಅವರು ಹಾಕಿರುವ ಪೋಸ್ಟ್‌ ನ ವಿವರ ಇಲ್ಲಿದೆ....
ಚುನಾವಣೆಗೆ ಸುಮಾರು 6-7 ತಿಂಗಳಿಗೆ ಮುನ್ನವೇ ಈ ಪ್ರಣಾಳಿಕೆ ಸಮಿತಿ ರಚಿಸಿರುವುದು ಅತ್ಯಂತ ಸ್ವಾಗತಾರ್ಹ. ನಮ್ಮ ಪಕ್ಷದ ಗುರಿಯಾದ "ಮಿಷನ್ 150" ಸಾಧಿಸಿ, "ನವಕರ್ನಾಟಕ" ನಿರ್ಮಿಸುವ ದಿಕ್ಕಿನಲ್ಲಿ ಅತ್ಯಂತ ಪೂರಕ ಕ್ರಮಗಳಲ್ಲಿ ಇದೂ ಒಂದು. ಕರ್ನಾಟಕ ಬಿಜೆಪಿ ಪ್ರಣಾಳಿಕೆ ಸಮಿತಿಗೆ ಸದಸ್ಯರ ನೇಮಕ ನಮ್ಮ ಸಮಿತಿಯಲ್ಲಿ ಅತ್ಯಂತ ಅನುಭವಿಗಳು, ಪರಿಣಿತರಿದ್ದಾರೆ. ಅತ್ಯಂತ ಹಿರಿಯರಾದ ಮತ್ತು ದೀರ್ಘ ಕಾಲದ ಆಡಳಿತದ ಅನುಭವವುಳ್ಳ ಶ್ರೀ ಶ್ರೀನಿವಾಸ ಪ್ರಸಾದ್, ಜಲ ಸಂಪನ್ಮೂಲ ಮತ್ತು ಅನೇಕ ಕ್ಷೇತ್ರಗಳ ಬಗ್ಗೆ ಅಧ್ಯಯನ ಮಾಡಿ ಅಧಿಕೃತವಾಗಿ ಮಾತನಾಡಬಲ್ಲ ಬಸವರಾಜ್ ಬೊಮ್ಮಾಯಿ, ಸಹಕಾರಿ ಕ್ಷೇತ್ರವನ್ನು ಸಂಪೂರ್ಣವಾಗಿ ಬಲ್ಲ ಹಾಗೂ ಸಾಮಾನ್ಯ ವ್ಯಕ್ತಿಯ ನಾಡಿ ಮಿಡಿತವನ್ನು ಬಲ್ಲ ಲಕ್ಷ್ಮಣ ಸವದಿ ಅವರು ಇದ್ದಾರೆ

ಈ ಪ್ರಣಾಳಿಕೆಗೆ ನೀವೆಲ್ಲಾ ನಿಮ್ಮ ಕೊಡುಗೆಯನ್ನು ಸಲಹೆಗಳ ಮೂಲಕ ನೀಡಬೇಕೆನ್ನುವುದು ನಮ್ಮ ಮನವಿ. ನಿಮ್ಮ ಸಲಹೆಗಳನ್ನು ನನ್ನ [email protected] ಗೆ "Elections 2018" ಎಂದು ಬರೆದು ಕಳಿಸಿ.

Edited By

Suresh M

Reported By

Suresh M

Comments