ಕೊರಟಗೆರೆ ಚುನಾವಣಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರಂತೆ ಪರಮೇಶ್ವರ್

04 Oct 2017 2:12 PM | Politics
381 Report

ಕೊರಟಗೆರೆ ಕ್ಷೇತ್ರದ ಮುಖಂಡರು ಪರಮೇಶ್ವರ್ ಅವರ ಬೆನ್ನು ಹತ್ತಿದ್ದು, ಕ್ಷೇತ್ರ ಬಿಟ್ಟು ಹೋಗದಂತೆ ಮನವಿ ಮಾಡಿದ್ದಾರೆ.ಕಳೆದ ಬಾರಿ ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ಪರಮೇಶ್ವರ್ ಅವರು ಪುನಃ ಕೊರಟಗೆರೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾತನಾಡಿದ್ದರು. ಆದರೆ, ಅವರನ್ನು ಮನವೊಲಿಸುವಲ್ಲಿ ಮುಖಂಡರು ಯಶಸ್ವಿಯಾಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಈ ಬಾರಿ ಕೊರಟಗೆರೆ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಕೊರಟಗೆರೆ ಕ್ಷೇತ್ರದ ಮುಖಂಡರು ವಿಜಯದಶಮಿಯಂದು ಪರಮೇಶ್ವರ್ ಅವರನ್ನು ಭೇಟಿ ಮಾಡಿ ಕ್ಷೇತ್ರ ಬಿಟ್ಟು ಹೋಗದಂತೆ ಮನವಿ ಮಾಡಿದ್ದರು. ಪರಮೇಶ್ವರ್ ಕೂಡ 2018ರ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಹುಡುಕಾಟದಲ್ಲಿದ್ದರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಬೆಂಗಳೂರಿನ ಮಹದೇವಪುರ ಅಥವಾ ಪುಲಿಕೇಶಿನಗರ ಮತ್ತು ಗ್ರಾಮಾಂತರ ಜಿಲ್ಲೆ ನೆಲಮಂಗಲ ಕ್ಷೇತ್ರದಲ್ಲಿ ಸ್ಪರ್ಧೆ ಕುರಿತು ಪರಿಶೀಲನೆ ನಡೆಸಿದರು. ಮೂಡಿಗೆರೆ ಕ್ಷೇತ್ರದಲ್ಲಿ ಮಾಜಿ ಸಚಿವೆ ಮೋಟಮ್ಮ ಅವರು ಪ್ರಬಲ ಅಭ್ಯರ್ಥಿಯಾಗಿದ್ದು, ಹೈಕಮಾಂಡ್‍ನಿಂದಲೇ ಟಿಕೆಟ್ ತಂದು ಸ್ಪರ್ಧಿಸುವ ಸಾಮಥ್ರ್ಯವಿರುವವರು ಚುನಾವಣೆ ಸಮೀಪಿಸುತ್ತಿದ್ದಂತೆ ಮೋಟಮ್ಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಹೀಗಾಗಿ ಮೂಡಿಗೆರೆ ಕ್ಷೇತ್ರದಿಂದ ಸ್ಪರ್ಧಿಸುವ ಆಲೋಚನೆ ಮೋಟಮ್ಮ ಅವರು ಕೈಬಿಟ್ಟಿದ್ದಾರೆ. ಮಹದೇವಪುರ ಸುರಕ್ಷಿತ ಎಂದು ಭಾವಿಸಲಾಗಿದ್ದು, ಅಲ್ಲಿಂದಲೇ ಕಣಕ್ಕಿಳಿಯುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದರು. ಆದರೆ, ಈಗ ಕೊರಟಗೆರೆ ಕ್ಷೇತ್ರದ ಮುಖಂಡರು ವಿಜಯದಶಮಿಯಂದು ಪರಮೇಶ್ವರ್ ಅವರನ್ನು ಭೇಟಿ ಮಾಡಿ ಕ್ಷೇತ್ರ ಬಿಟ್ಟು ಹೋಗದಂತೆ ಮನವಿ ಮಾಡಿ ಮನವೊಲಿಸುವಲ್ಲಿ ಮುಖಂಡರು ಯಶಸ್ವಿಯಾಗಿದ್ದಾರೆ.

Edited By

Suresh M

Reported By

Madhu shree

Comments