ನೆ.ಲ ನರೇಂದ್ರಬಾಬು ಬಿಜೆಪಿ ಸೇರ್ಪಡೆ

02 Oct 2017 10:07 AM | Politics
398 Report

ಬೆಂಗಳೂರು, ಮಾಜಿ ಕಾಂಗ್ರೆಸ್ ಮುಖಂಡ ನೆ.ಲ ನರೇಂದ್ರಬಾಬು ಇಂದು ಬೆಂಗಳೂರಿನಲ್ಲಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ನರೇಂದ್ರಬಾಬು ಬಿಜೆಪಿಗೆ ಸೇರ್ಪಡೆಗೊಂಡರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪಾ , ರಾಜ್ಯ ಉಸ್ತುವಾರಿ ಸಚಿವ ಮುರುಳೀಧರ್ ರಾವ್, ವಿಧಾನಸಭೆ ವಿಪಕ್ಷ ಉಪನಾಯಕ ಆರ್. ಅಶೋಕ್, ಸೇರಿದಂತೆ ಹಲವು ಬಿಜೆಪಿ ಮುಖಂಡರು ಈ ವೇಳೆ ಉಪಸ್ಥಿತರಿದ್ದರು. ಇದೇ ವೇಳೆ ಮಾಜಿ ರಾಜ್ಯ ಮಾಹಿತಿ ಆಯುಕ್ತ ಶಂಕರ ಆರ್. ಪಾಟೀಲ್, ನಿವೃತ್ತಿ ಡಿವೈಎಸ್ಪಿ ಸೋಮಶೇಖರ್ , ಸಾಮಾಜಿಕ ಕಾರ್ಯಕರ್ತ ಎಂ.ಜಿ ರಂಗಧಾಮಯ್ಯ ಮತ್ತು ಕೆಲವು ಕಿರುತೆರೆ ನಟಿಯರು ಮತ್ತು ವಕೀಲರು ಕೂಡಾ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

 

Edited By

Shruthi G

Reported By

Sudha Ujja

Comments