ರಾಹುಲ್ ಗೆ ಮಾತಿನ ಛಾಟಿ ನೀಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

25 Sep 2017 4:40 PM | Politics
263 Report

ನವದೆಹಲಿಯಲ್ಲಿ ನಿನ್ನೆ(ಸೆ.24)ಯಿಂದ ನಡೆಯುತ್ತಿರುವ 2 ದಿನಗಳ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಅಮೆರಿಕದ ಕ್ಯಾಲಿಫೋರ್ನಿಯಾಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ನೀಡಿದ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ಸಾಮಾನ್ಯವಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಎಂದರೆ ಬಿಜೆಪಿಯ 120 ಪ್ರಮುಖ ನಾಯಕರಷ್ಟೇ ಭಾಗವಹಿಸುತ್ತಿದ್ದರು. ಆದರೆ ಈ ಬಾರಿ ದೇಶದಾದ್ಯಂತ ಇರುವ ಬಿಜೆಪಿಯ ಎಲ್ಲಾ ನಾಯಕರನ್ನೂ ಆಹ್ವಾನಿಸಲಾಗಿದೆ, ಮಾತ್ರವಲ್ಲ ಬಿಜೆಪಿ ಅಧಿಕಾರದಲ್ಲಿರುವ 13 ರಾಜ್ಯಗಳ ಮುಖ್ಯಮಂತ್ರಿಗಳೂ ಸಭೆಯಲ್ಲಿ ಹಾಜರಿದ್ದಾರೆ. ಕುಟುಂಬದ ಹಿನ್ನೆಲೆಯಲ್ಲಿ ರಾಜಕಾರಣಕ್ಕಿಳಿಯುವ ಸಂಪ್ರದಾಯ ಕಾಂಗ್ರೆಸ್ಸಿನದ್ದೇ ಹೊರತು ಭಾರತದಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಮಾತಿನ ಛಾಟಿ ನೀಡಿದ್ದಾರೆ. ಇತ್ತೀಚೆಗೆ ಕ್ಯಾಲಿಫೋರ್ನಿಯಾದ ಬೆರ್ಕೆಲೇಯಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, 'ಭಾರತದಲ್ಲಿ ಕುಟುಂಬ ರಾಜಕಾರಣವೆಂಬುದು ಮಾಮೂಲು. ಭಾರತ ನಡೆಯುವುದೇ ಹೀಗೆ' ಎಂಬ ಹೇಳಿಕೆ ನೀಡಿದ್ದರು. ಈ ಮಾತನ್ನು ಬಿಜೆಪಿ ಕಾರ್ಯಕಾರಿಣಿಯಲ್ಲಿ ಉಲ್ಲೇಖಿಸಿದ ಶಾ, ಕುಟುಂಬ ರಾಜಕಾರಣ ಕಾಂಗ್ರೆಸ್ ನ ಸಂಪ್ರದಾಯವೇ ಹೊರತು, ಭಾರತದಲ್ಲ ಎಂದು ತಿರುಗೇಟು ನೀಡಿದರು. 

Edited By

Hema Latha

Reported By

Madhu shree

Comments