ಮೇಕ್ ಇನ್ ಇಂಡಿಯಾ ಯೋಜನೆ ಸೂಕ್ತ ಜನರಿಗೆ ತಲುಪುತ್ತಿಲ್ಲ : ರಾಹುಲ್ ಗಾಂಧಿ

20 Sep 2017 12:42 PM | Politics
367 Report

ಮೇಕ್ ಇನ್ ಇಂಡಿಯಾದ ಪ್ರಾಮುಖ್ಯತೆ ಹಾಗೂ ಅದರ ಪರಿಕಲ್ಪನೆ ವಿಭಿನ್ನತೆಯನ್ನು ಹೊಂದಿರಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಗುರಿ ಶ್ರೀಮಂತರ ಮೇಲಿದೆ. ಆದರೆ, ನನ್ನ ಪ್ರಕಾರ ಮೇಕ್ ಇನ್ ಇಂಡಿಯಾದ ಗುರಿ ಸಣ್ಣ ಉದ್ಯಮಿಗಳ ಮೇಲಿರಬೇಕು ಎಂದು ಮೋದಿ ವಿರುದ್ದ ರಾಹುಲ್ ವಾಗ್ದಾಳಿ ನಡೆಸಿದ್ದಾರೆ .

ಕೇಂದ್ರದ ಆಡಳಿತಾರೂಢ ಮೋದಿ ಸರ್ಕಾರ ಜಾರಿಗೆ ತಂದಿರುವ 'ಮೇಕ್ ಇನ್ ಇಂಡಿಯಾ' ಯೋಜನೆ ಸೂಕ್ತ ಜನರಿಗೆ ತಲುಪುತ್ತಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಹೇಳಿದ್ದಾರೆ. ಪ್ರಿನ್ಸ್ ಟನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಮೋದಿ ಸರ್ಕಾರ ಮೇಕ್ ಇನ್ ಇಂಡಿಯಾ ಮೂಲಕ ಶ್ರೀಮಂತ ವರ್ಗದವರಿಗೆ ಮಾತ್ರ ನೆರವಾಗುತ್ತಿದೆ. ಸರಕು ಮತ್ತು ಸೇವಾ ತೆರಿಗೆ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಗಳು ಒಳ್ಳೆಯದೇ. ಆದರೆ, ಇದು ಸಣ್ಣ ಉದ್ಯಮಿಗಳಿಗೆ ನೆರವಾಗುವ ಹಾಗಿರಬೇಕು ಎಂದು ಹೇಳಿದ್ದಾರೆ. ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಇದು ಆಗುತ್ತಿಲ್ಲ. ನಮ್ಮ ಗುರಿಗಳು ಈ ನಿಟ್ಟಿನಲ್ಲಿದ್ದಾಗ ಮಾತ್ರ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ತಿಳಿಸಿದ್ದಾರೆ. ಕೃಷಿ ಕ್ಷೇತ್ರದ ಕಡೆಗೂ ಹೆಚ್ಚಿನ ಗಮನ ಕೊಡುವ ಅಗತ್ಯವಿದೆ. ಕೃಷಿ ಕ್ಷೇತ್ರದತ್ತ ಗಮನಸಿದ್ದೇ ಆದರೆ, ಈ ಕ್ಷೇತ್ರದಲ್ಲೂ ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು. ನಿರುದ್ಯೋಗ ಎಬುದು ದೇಶದ ಬೆಳವಣಿಗೆಯ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ಬಡವರಾಗಲೀ ಅಥವಾ ಶ್ರೀಮಂತರೇ ಆಗಿರಲಿ ಕೇಂದ್ರ ಸರ್ಕಾರ ಶಿಕ್ಷಣ, ಆರೋಗ್ಯ ವ್ಯವಸ್ಥೆಗಳನ್ನು ಜನರಿಗೆ ನೀಡಬೇಕು ಎಂದಿದ್ದಾರೆ.

Courtesy: Dailyhunt

Comments