ನನ್ನ ಕರ್ಮ ಭೂಮಿ ರಾಮನಗರ, ನನ್ನ ಜನರು ಇಲ್ಲಿಂದ ಬಿಟ್ಟು ಕೊಡುವುದಿಲ್ಲ: ಕುಮಾರಸ್ವಾಮಿ

19 Sep 2017 4:50 PM | Politics
240 Report

ಮುಂದಿನ ವಿಧಾನಸಭೆ ಚುನಾವಣೆ ಉದ್ದೇಶದಿಂದ ನನಗೆ ಉತ್ತರ ಕರ್ನಾಟಕದ ಜನರು ನೀವು ಇಲ್ಲಿಯೇ ಸ್ಪರ್ಧಿಸುವುದರಿಂದ ನಿಮ್ಮ ಪಕ್ಷಕ್ಕೆ ಬಲಸಿಗುವುದು ಎಂದು ಹೇಳಿದ್ಧಾರೆ. ಆದರೆ ನನಗೆ ನನ್ನ ಕರ್ಮ ಭೂಮಿ ರಾಮನಗರ ಆಗಿರುವುದರಿಂದ ನನ್ನ ಜನರು ಇಲ್ಲಿಂದ ಬಿಟ್ಟು ಕೊಡುವುದಿಲ್ಲ ,ಇಲ್ಲಿಂದಲೇ ನಾನು ಸ್ಪರ್ಧಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು .

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಯವರು ಇಂದು ರಾಮನಗರದ ರಾಯರ್ ದೊಡ್ಡಿಯ ತಮ್ಮ ಆಪ್ತ ಸಹಾಯಕ ವೈ ಟಿ ಸೋಮಶೇಖರ್ ನಿಧನದಿಂದ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮಾಜಿ ಸಚಿವರಾದ  ಖಮರುಲ್ ಇಸ್ಲಾಂ ರವರು ಅಲ್ಪಸಂಖ್ಯಾತರ  ಉತ್ತಮ ನಾಯಕರು  ಹಾಗೂ ಹಿರಿಯರು, ನಮ್ಮ ರಾಜ್ಯಕ್ಕೆ ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆ ಅವರ ಆತ್ಮಕ್ಕೆ ಶಾಂತಿಸಿಗಲಿ, ಅವರ ಕುಟುಂಬಕ್ಕೆ ನೋವನ್ನು ಬರಿಸಲು  ಆತ್ಮಸ್ಥೈರ್ಯ  ಸಿಗಲಿ ಎಂದು ಸಂತಾಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತಾವು ಗಂಟಲು ನೋವಿನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ದಿನಾಂಕ 23 ರಂದು ಚಿಕಿತ್ಸೆಗೆ ದಾಖಲಾಗುವೆ ಎಂದು ಹೇಳಿದರಲ್ಲದೆ, ನನ್ನ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಆತಂಕಕ್ಕೆ ಒಳಗಾಗಬಾರದೆಂದು ಕರೆಕೊಟ್ಟರು. ಚಿಕಿತ್ಸೆಯ ನಂತರ 15 ದಿನಗಳ ಕಾಲ ವಿಶ್ರಾಂತಿ ಪಡೆದು ತದನಂತರ ಮೊದಲಿನ ಹಾಗೆ ಕಾರ್ಯಕರ್ತರ ಜೊತೆ ಇರುವುದಾಗಿ ತಿಳಿಸಿದರು. ಯಡಿಯೂರಪ್ಪ ನವರು ಕಾಂಗ್ರೆಸ್ ಪಕ್ಷದ10 ನಾಯಕರು ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ವಿರುದ್ಧ 3 ಮತ್ತು 4 ದಿನಗಳಲ್ಲಿ ಭ್ರಷ್ಟಾಚಾರವನ್ನು ಹೊರಹಾಕುತ್ತೇನೆ ಎಂದು ಹೇಳುವುದನ್ನು ಕೇಳಿದ್ದೆನೆ, ರಾಜ್ಯದ ಜನರ ಸಮಸ್ಯೆಗಳನ್ನು ಪರಿಹರಿಸದೆ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲಾ ಎಂದು ಹೇಳಿದರು. ಮುಂದಿನ ವಿಧಾನಸಭೆ ಚುನಾವಣೆ ಉದ್ದೇಶದಿಂದ ಯಡಿಯೂರಪ್ಪ ನವರು ಉತ್ತರ ಕರ್ನಾಟಕದಿಂದ ಸ್ಪರ್ಧಿಸಲು ನಿರ್ಧರಿಸಿದರೆ ಹಾಗೆಯೇ ಸಿದ್ದರಾಮಯ್ಯನವರು ಚಾಮುಂಡಿ ಕ್ಷೇತ್ರದಲ್ಲಿ ತಮ್ಮ ಮಗನಿಗೆ ಸ್ಥಾನ ನೀಡಿ ಅವರು ಉತ್ತರ ಕರ್ನಾಟಕದಲ್ಲಿ ಸ್ಪರ್ಧೆ ಮಾಡಲಿದ್ದಾರೆ.

Courtesy: BP9news

Comments