ಹೊಸ ರಾಜಕೀಯ ಪಕ್ಷ ರಚಿಸುವ ನಿಟ್ಟಿನಲ್ಲಿ ಕಮಲ್‍ ಹಾಸನ್

15 Sep 2017 5:59 PM | Politics
230 Report

ಕಮಲ್‍ಹಾಸನ್ ಕೊನೆಗೂ ರಾಜಕೀಯ ಪ್ರವೇಶದ ಸೂಚನೆ ಕೊಟ್ಟಿದ್ದಾರೆ. ರಾಜಕೀಯ ಪಾರ್ಟಿ ಎಂದರೆ ಒಂದು ಸಿದ್ಧಾಂತವಾಗಿದೆ. ಆದರೆ, ನನ್ನ ಗುರಿ ಯಾವುದಾದರೂ ರಾಜಕೀಯ ಪಾರ್ಟಿಯ ಸಿದ್ಧಾಂತಕ್ಕೆ ಹೊಂದಿಕೊಳ್ಳುತ್ತದೆ ಎಂದು ಅನಿಸುವುದಿಲ್ಲ ಎಂದು 'ದಕ್ಯೂಂಟ್' ಎನ್ನುವ ಆನ್‍ಲೈನ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಾನು ರಾಜಕೀಯ ಪಕ್ಷ ರೂಪಿಸುವ ಮತ್ತು ತಮ್ಮ ರಾಜಕೀಯ ನಿಲುವನ್ನು ಕುರಿತು ಕಮಲ್ ತಿಳಿಸಿದ್ದಾರೆ.

ಪಿಣರಾಯಿ ವಿಜಯನ್‍ರನ್ನು ಕಮಲ್‍ಹಾಸನ್ ಭೇಟಿಯಾಗಿದ್ದರು. ಕಮ್ಯೂನಿಸ್ಟ್ ನೊಂದಿಗೆ ಇಷ್ಟವಿದೆ. ಕೊಟ್ಟ ಭರವಸೆಯನ್ನು ಈಡೇರಿಸಲು ಸಾಧ್ಯವಾಗದಿರುವ ಜನಪ್ರತಿನಿಧಿಗಳನ್ನು ಹೊರಗೆ ಹಾಕುವ ವ್ಯವಸ್ಥೆ ಇದ್ದರೆ ಮಾತ್ರವೇ ಭಾರತದ ರಾಜಕೀಯ ಉತ್ತಮಗೊಳ್ಳಬಹುದು. ಚುನಾವಣೆಯಲ್ಲಿ ಗೆದ್ದವರು ಸಮರ್ಪಕವಾಗಿದ್ದರೆ ಹೊರಗೆ ಹಾಕಲು ಐದು ವರ್ಷ ಕಾಯಬೇಕಾದ ರೀತಿಯಲ್ಲಿ ಬದಲಾವಣೆ ಆಗಬೇಕಾಗಿದೆ. ನನ್ನ ಮನೆಯನ್ನು ಮೊದಲು ಶುಚಿಗೊಳಿಸಬೇಕಾಗಿದೆ. ನಂತರ ನೆರೆಯವರ ಮನೆಯನ್ನು ಹೇಳಬೇಕು. ಶಶಿಕಲಾರನ್ನು ಅಣ್ಣಾ ಡಿಎಂಕೆಯಿಂದ ಹೊರದಬ್ಬಿದ್ದು ಸರಿಯಾದ ಕ್ರಮವಾಗಿದೆ. ರಾಜ್ಯದ ರಾಜಕೀಯದಲ್ಲಿ ಬದಲಾವಣೆ ತರಬಹುದು ಎನ್ನುವ ವಿಶ್ವಾಸ ನನಗಿದೆ. ಎಷ್ಟೇ ನಿಧಾನವಾದರೂ ಆ ಬದಲಾವಣೆ ತಂದೇ ತರುವೆನೆಂದು ಕಮಲ್ ಹೇಳಿದ್ದಾರೆ.

Courtesy: Dailyhunt

Comments