ರಾಹುಲ್ ಭಾಷಣ ಯಾರೂ ಕೇಳೋರಿಲ್ಲ. ದೂರದ ಅಮೆರಿಕಾಕ್ಕೆ ಹೋಗಿದ್ದಾರೆ - ಅಮಿತ್ ಶಾ

14 Sep 2017 9:50 PM | Politics
312 Report

ನವದೆಹಲಿ: ಭಾರತದಲ್ಲಿ ರಾಹುಲ್ ಗಾಂಧಿಯಂತಹ ವಿಫಲ ರಾಜಕಾರಣಿಯ ಭಾಷಣ ಯಾರೂ ಕೇಳೋರಿಲ್ಲ. ಅದಕ್ಕೇ ದೂರದ ಅಮೆರಿಕಾಕ್ಕೆ ಹೋಗಿ ಅಲ್ಲಿ ಭಾಷಣ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.

ನವದೆಹಲಿ: ಭಾರತದಲ್ಲಿ ರಾಹುಲ್ ಗಾಂಧಿಯಂತಹ ವಿಫಲ ರಾಜಕಾರಣಿಯ ಭಾಷಣ ಯಾರೂ ಕೇಳೋರಿಲ್ಲ. ಅದಕ್ಕೇ ದೂರದ ಅಮೆರಿಕಾಕ್ಕೆ ಹೋಗಿ ಅಲ್ಲಿ ಭಾಷಣ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ. ಅಮೆರಿಕಾದ ಕ್ಯಾಲಿಫೋರ್ನಿಯಾ ವಿವಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಅಮಿತ್ ಶಾ ಟಾಂಗ್ ಕೊಟ್ಟಿದ್ದಾರೆ.

ವಂಶ ರಾಜಕಾರಣದ ಬಗ್ಗೆ ಮಾತನಾಡಿರುವ ರಾಹುಲ್ ಮಾತುಗಳಿಗೆ ಟಾಂಗ್ ಕೊಟ್ಟಿರುವ ಶಾ ಬಿಜೆಪಿ ದೇಶದಲ್ಲಿ ವಂಶ ರಾಜಕಾರಣವನ್ನು ಕಿತ್ತು ಹಾಕಿದೆ. ನಾವು ಕಾರ್ಯನಿರ್ವಹಣೆಯಲ್ಲಿ ವಿಶ್ವಾಸ ಹೊಂದಿದ್ದೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.

Edited By

venki swamy

Reported By

Sudha Ujja

Comments