ಡಿಸೆಂಬರ್ ಒಳಗೆ ರಾಜ್ಯಾಂದ್ಯಂತ 500 ಇಂದಿರಾ ಕ್ಯಾಂಟೀನ್ ಪ್ರಾರಂಭ : ಸಿಎಂ ಹೇಳಿಕೆ

14 Sep 2017 3:58 PM | Politics
309 Report

ರಾಜ್ಯ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್ ನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಗರದ ಬಡವರಿಗಾಗಿ 89 ಲಕ್ಷ ರೂ. ವೆಚ್ಚದಲ್ಲಿ 198 ಸಬ್ಸಿಡಿ ಆಹಾರ ಕೇಂದ್ರಗಳನ್ನು ಕೆಲವು ತಿಂಗಳೊಳಗೆ ಸ್ಥಾಪಿಸಲಾಗುವುದು , ರೂ 5 ಕ್ಕೆಉಪಹಾರವನ್ನು , 10 ರೂ. ಗೆ ಊಟ ನೀಡಲಾಗುತ್ತಿದೆ. 500 ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್ ಅನ್ನು ರಾಜ್ಯದಲ್ಲಿ ಸ್ಥಾಪಿಸುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ.  

ಡಿಸೆಂಬರ್ ಅಂತ್ಯದ ವೇಳೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿ ಸೇರಿ, ಸುಮಾರು 101 ಇಂದಿರಾ ಕ್ಯಾಂಟೀನ್ ಗಳು ಕಾರ್ಯ ನಿರ್ವಹಿಸುತ್ತಿದೆ, ಉಳಿದ 97 ಅನ್ನು ಅಕ್ಟೋಬರ್ 2 ರೊಳಗೆ ತೆರೆಯಲಾಗುವುದು ಎಂದು ಘೋಷಿಸಿದ್ದರು. ಹೀಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಯೋಜನೆ ವ್ಯಾಪ್ತಿ ವಿಸ್ತರಣೆ ಕುರಿತು ವಿಮರ್ಶಕರು ತಿಳಿಸಿದ್ದಾರೆ. ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಅವರು ಹೇಳುವಂತೆ: ಇಂದು, 1.4 ಲಕ್ಷ ಜನರಿಗೆ ದಿನವೂ ಆಹಾರ ಸಿಗುತ್ತಿದೆ. ಎಲ್ಲಾ 198 ಕ್ಯಾಂಟೀನ್ ಗಳೂ ಪ್ರಾರಂಭವಾದರೆ ಫಲಾನುಭವಿಗಳ ಸಂಖ್ಯೆ ಮೂರು ಲಕ್ಷಕ್ಕೆ ತಲುಪುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದಕ್ಕೆ ರಾಜ್ಯ ಸರ್ಕಾರ ನೀಡಿದ ಒಟ್ಟು ಸಬ್ಸಿಡಿ ದಿನಕ್ಕೆ 32 ಲಕ್ಷ ರೂ. ತಲುಪಿದೆ ಅಲ್ಲದೆ, ಇಂದಿರಾ ಕ್ಯಾಂಟೀನ್ ಗಾಗಿ ಅಡಿಗೆ ಮನೆಗಳು ಮತ್ತು  ಕ್ಯಾಂಟೀನ್ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ರೂ 100 ಕೋಟಿ ಖರ್ಚು ಮಾಡಿದೆ.

Courtesy: Kannadaprabha

Comments