ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ: ಸಚಿವ ಹೆಚ್.ಸಿ. ಮಹದೇವಪ್ಪ

09 Sep 2017 4:06 PM | Politics
433 Report

ನಂಜನಗೂಡು : ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ನೀಡಿದ್ದ 165 ಭರವಸೆಗಳಲ್ಲಿ ಬಹುತೇಕ ಭರವಸೆಗಳನ್ನು ಈಡೇರಿಸಿದ್ದು ಉಳಿದ 8 ತಿಂಗಳ ಅವಧಿಯಲ್ಲಿ ಸಂಪೂರ್ಣ ಅಭಿವೃದ್ದಿ ಕಾಣಲಿದ್ದು , ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಭವಿಷ್ಯ ನುಡಿದರು.

ನಂಜನಗೂಡು, ಹುಲ್ಲಹಳ್ಳಿ ಹಾಗೂ ತಗಡೂರು ಬ್ಲಾಕ್ ಸಮಿತಿಯ ಬೃಹತ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ವಿವಿಧತೆಯಲ್ಲಿ ಐಕ್ಯತೆಯನ್ನು ಸಾಧಿಸಿರುವ ಬಹುದೊಡ್ಡ ಜಾತ್ಯಾತೀತವಾದ ಪಕ್ಷವಾಗಿದ್ದು ಈ ಪಕ್ಷವನ್ನು ದೇಶದಲ್ಲಿ ಮುಕ್ತಿಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ದೇಶದಲ್ಲಿ ಬಿಜೆಪಿಗೆ ಶೇ.30ರಷ್ಟು ಮತದಾರರು ಒಲವು ಇದ್ದರೆ ನಮ್ಮ ಪಕ್ಷಕ್ಕೆ ಶೇ.64ರಷ್ಟು ಮತದಾರರು ಕಾಂಗ್ರೆಸ್ ಪಕ್ಷ ಪರವಿದ್ದು ಇಲ್ಲಿ ಎಲ್ಲಾ ನಾಯಕರುಗಳಿಗು ಅವಕಾಶವಿದೆ ಎಂದರು.

ಸಂಸದ ಆರ್.ಧ್ರುವನಾರಯಣ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ವರಿಷ್ಠರು 4 ಕಾರ್ಯದರ್ಶಿಗಳನ್ನು 4 ವಿಭಾಗಗಳಲ್ಲಿ ನೇಮಕ ಮಾಡಿ ಒಬ್ಬ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‍ರವರನ್ನು ರಾಜ್ಯದ ಉಸ್ತುವಾರಿಗೆ ನೇಮಿಸಿ ಎಲ್ಲೆಡೆ ಕಾಂಗ್ರೇಸ್ ಪಕ್ಷ ಸಂಘಟನೆಯಾಗುವ ರೀತಿ ಪಕ್ಷವನ್ನು ಬಲಗೊಳಿಸಲಿದ್ದಾರೆ ಎಂದರು. ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕ್ಷೇತ್ರದ ಅಭಿವೃದ್ದಿಗಾಗಿ ನೂರಾರು ಕೋಟಿ ರೂಗಳನ್ನು ಬಿಡುಗೊಳಿಸಿದ್ದಾರೆ. ನಗರ ಹಾಗೂ ಕ್ಷೇತ್ರಾದ್ಯಾಂತ ಅಭಿವೃದ್ದಿ ಕಾವiಗಾರಿಗಳು ಸಮಾರೋಪಾದಿಯಲ್ಲಿ ನಡೆಯುತ್ತಿದ್ದ ಇನ್ನೂ ಕೆಲವೇ ತಿಂಗಳುಗಳಲ್ಲಿ ಅಭಿವೃದ್ದಿ ಪರ್ವವನ್ನೆ ಕಾಣಬಹುದಾಗಿದೆ ಎಂದರು.

ಎ.ಐ.ಸಿ.ಸಿ ಕಾರ್ಯದರ್ಶಿ ವಿಷ್ಣು ನಾದನ್, ಡಾ.ಯತೀಂದ್ರ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಡಾ. ವಿಜಯ್ ಕುಮಾರ್, ರಾಜ್ಯ ಆಹಾರ ನಿಗಮದ ನಿರ್ದೇಶಕ ಕೆ.ತಮ್ಮಣ್ಣೆಗೌಡ, ಕೆ.ಪಿ.ಸಿ.ಸಿ ಕಾರ್ಯದರ್ಶಿ ಎಸ್.ಸಿ. ಬಸವರಾಜು, ಮಾಜಿ ಜಿ.ಪಂ ಸದಸ್ಯ ಮಾರುತಿ, ಜಿ.ಪಂ ಸದಸ್ಯೆರಾದ ಲತಾಸಿದ್ದಶೆಟ್ಟಿ, ಪುಪ್ಷನಾಗೇಶ್‍ರಾಜ್, ತಾ.ಪಂ ಉಪಾಧ್ಯಕ್ಷ ಗೋವಿಂದರಾಜನ್ ಮತ್ತಿತರರಿದ್ದರು.

Courtesy: eesanje

Comments