ಚಿನ್ನ ಜಪ್ತಿ ಮಾಡಿ ಜಾಗ ಕೊಂಡವರಿಗೆ ತನಿಖೆಯ ನೇತೃತ್ವ- ಕುಮಾರಸ್ವಾಮಿ ಆರೋಪ

09 Sep 2017 12:09 AM | Politics
354 Report

ಬೆಂಗಳೂರು: 1.5 ಕೆ.ಜಿ ಚಿನ್ನ ಜಪ್ತಿ ಮಾಡಿ ಬಾಣಸವಾಡಿಯಲ್ಲಿ ಜಾಗ ಖರೀದಿಸಿದ ವ್ಯಕ್ತಿಗೆ ರಾಜ್ಯ ಸರ್ಕಾರ ಎಸ್ ಐಟಿ ನೇತೃತ್ವ ವಹಿಸಿರುವುದಾಗಿ ಗಂಭೀರವಾಗಿ ಆರೋಪಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ, ಇಂಥವರಿಂದ ಹತ್ಯೆ ಕೇಸ್ ನ ತನಿಖೆ ನಡೆಸುವುದು ಸರಿನಾ ? ಎಂದು ಪ್ರಶ್ನೆ ಮಾಡಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಬಿಕೆ ಸಿಂಗ್ ನೇತೃತ್ವದಲ್ಲಿ 21 ಸದಸ್ಯರ ಎಸ್ ಐಟಿ ತಂಡವನ್ನು ರಚಿಸಿತ್ತು. ಈ ಬಗ್ಗೆ ಕುಮಾರಸ್ವಾಮಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

 

Edited By

Shruthi G

Reported By

Sudha Ujja

Comments