ದೆಹಲಿ ಚಲೋ ಮಾಡ್ರಪ್ಪ, ನಾವು ನಿಮ್ಮ ಜತೆಗೆ ಬರ್ತೇವೆ- ಸಿಎಂ

05 Sep 2017 2:54 PM | Politics
532 Report

ಬೆಂಗಳೂರು: ಮಂಗಳೂರು ಚಲೋ ಮಾಡುವ ಬದಲು ದೆಹಲಿ ಚಲೋ ಮಾಡ್ರಪ್ಪ. ರಾಜ್ಯದ ರೈತರಿಗೆ ಬ್ಯಾಂಕ್ ಗಳು 42,000 ಸಾವಿರ ಕೋಟಿ ಸಾಲ ನೀಡಿವೆ. ಅವುಗಳನ್ನು ಮನ್ನಾ ಮಾಡುವ ಸಲುವಾಗಿ ದೆಹಲಿ ಚಲೋ ಮಾಡಿ ನಾವು ಜತೆಗೆ ಬರ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಬಿಜೆಪಿ ಯುವ ಮೋರ್ಚಾ ನಡೆಸುತ್ತಿರುವ ಮಂಗಳೂರು ಚಲೋ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ರೈತರ ಸಾಲ ಮನ್ನಾ ಆಗ್ರಹಿಸಿ ದೆಹಲಿ ಚಲೋ ಮಾಡಲಿ ನಾವು ಜತೆಗೆ ಬರುತ್ತೇವೆ, ರ್ಯಾಲಿಯಿಂದ ಕರಾವಳಿಯಲ್ಲಿ ಸಾಮರಸ್ಯ ಹಾಳಾಗುತ್ತದೆ. ರಾಜಕೀಯ ಪಕ್ಷವಾಗಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರಬಾರದು, ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ, ಬಿಎಸ್ ವೈ ಪ್ರಚೋದನಾಕಾರಿ ಭಾಷಣ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಕಿಡಿ ಕಾರಿದರು.

ಸುದ್ದಿಗಾರರ ಜತೆಗೆ ಮಾತನಾಡಿರುವ ಅವರು, ಸಮಾವೇಶ ಜಾಥಾ ಮಾಡಲು ನಮ್ಮದೇನು ತಡೆ ಇಲ್ಲ, ನಾವು ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದೇವು. ಬಿಜೆಪಿ ಯವರು ಬೈಕ್ ರ್ಯಾಲಿ ಮಾಡುತ್ತಿದ್ದಾರೆ.ಇದರಿಂದ ಟ್ರಾಫಿಕ್ ಗೆ ತುಂಬಾ ಸಮಸ್ಯೆಯಾಗುತ್ತದೆ. ಸಾವಿರಾರು ಬೈಕ್ ಗಳು ರಸ್ತೆಯಲ್ಲಿ ಹೋದರೆ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Edited By

venki swamy

Reported By

Sudha Ujja

Comments