ಸಿಎಂ, ನಾನು ಇಬ್ಬರು ಒಟ್ಟಾಗಿ ಕೆಲಸ ಮಾಡಿದ್ದೇವೆ, ಇಬ್ಬರ ಮಧ್ಯೆ ಮುನಿಸು ಇಲ್ಲ- ಜಿ ಪರಮೇಶ್ವರ್

03 Sep 2017 11:45 PM | Politics
279 Report

ಬೆಂಗಳೂರು: ಕೆಲ ದಿನಗಳಿಂದ ಸಿಎಂ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಮಧ್ಯೆ ಭಿನ್ನಾಭಿಪ್ರಾಯಗಳಿವೆ ಇಬ್ಬರ ಮಧ್ಯೆ ಮುನಿಸು ಏರ್ಪಟ್ಟಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಈಗ ಖುದ್ದು ಜಿ. ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು: ಕೆಲ ದಿನಗಳಿಂದ ಸಿಎಂ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಮಧ್ಯೆ ಭಿನ್ನಾಭಿಪ್ರಾಯಗಳಿವೆ ಇಬ್ಬರ ಮಧ್ಯೆ ಮುನಿಸು ಏರ್ಪಟ್ಟಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಈಗ ಖುದ್ದು ಜಿ. ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ನನಗೆ ಜ್ವರ ಇದ್ದ ಕಾರಣ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಇದು ಬಿಟ್ಟು ಬೇರೆ ಯಾವುದೇ ಕಾರಣಗಳಿಲ್ಲ ಎಂದು ತಿಳಿಸಿದ್ದಾರೆ.

ಕಳೆದ ಆರುವರೆ ವರ್ಷಗಳಿಂದ ನಾವಿಬ್ಬರು ಒಟ್ಟಾಗಿ ಕೆಲಸ ಮಾಡಿದ್ದೇವೆ. ಅವರೊಂದಿಗೆ ಗೃಹ ಸಚಿವರಾಗಿ ಕೆಲಸಮಾಡಿದ್ದ ಆ ಸಂದರ್ಭದಲ್ಲಿಯೂ ನಮ್ಮ ನಡುವೆ ಭಿನ್ನಾಭಿಪ್ರಾಯವಿರಲಿಲ್ಲ, ಸಿಎಂ ಮತ್ತು ನನ್ನ ಮಧ್ಯೆ ಕೋಲ್ಡ್ ವಾರ್ ಅಥವಾ ಕೋಲ್ಡ್- ಹಾಟ್ ಯಾವ ಮನಸ್ತಾಪವೂ ಇಲ್ಲ. ಇದೆಲ್ಲಾ ವಿಪಕ್ಷಗಳು ಹರಡಿಸುತ್ತಿರುವ ಉಹಾಪೋಹ ವರದಿಗಳು ಎಂದು ತಿರುಗೇಟು ನೀಡಿದ್ದಾರೆ.

ಸಚಿವರ ಪಟ್ಟಿಗೆ ನಾನು ಮತ್ತು ಸಿಎಂ ಬೇರೆ ಬೇರೆ ಹೆಸರು ಸೂಚಿಸಿರಬಹಹುದು ಆದರೆ, ಕೊನೆಗೆ ನಾವಿಬ್ಬರು ಒಟ್ಟಾಗಿ ತೀರ್ಮಾನ ತೆಗೆದುಕೊಂಡಿದ್ದೇವೆ. ಭಿನ್ನಾಭಿಪ್ರಾಯದ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ತಿಳಿಸಿದ್ದಾರೆ.

Edited By

Shruthi G

Reported By

Sudha Ujja

Comments