ದೂರವೇ ಉಳಿದ ಜಿ ಪರಮೇಶ್ವರ್, ಸದಾಶಿವ ನಗರದಲ್ಲಿದ್ದರು ಪ್ರಮಾಣ ವಚನಕ್ಕೆ ಹಾಜರಾಗಲಿಲ್ಲ !

02 Sep 2017 3:27 AM | Politics
312 Report

ಬೆಂಗಳೂರು: ಪಕ್ಷದ ರಾಜ್ಯಾಧ್ಯಕ್ಷರಾಗಿ ಸಚಿವರ ಪದಗ್ರಹಣ ಸಮಾರಂಭದಲ್ಲಿ ಪರಮೇಶ್ವರ್ ಇರಲೇಬೇಕಿತ್ತು. ವೇದಿಕೆ ಮೇಲೆ ಕೂರಬೇಕಿತ್ತು. ಆದರೆ ಬೇಸರಗೊಂಡಿರುವ ಜಿ. ಪರಮೇಶ್ವರ್ ಸಮಾರಂಭಕ್ಕೆ ಹಾಜರಾಗದೇ ದೂರವೇ ಉಳಿದು ಬಿಟ್ಟಿರು. ಸಭೆ- ಸಮಾರಂಭದಲ್ಲಿ ನೆರೆದಿದ್ದವರಿಗೆ ಕೌತುಕ ಮೂಡಿಸುವಂತಿತ್ತು. ಕಡೆಯ ಕ್ಷಣದವರೆಗೆ ಪರಮೇಶ್ವರ್ ಬರುತ್ತಾರೆ ಎನ್ನುತ್ತಲೇ ಇದ್ದ ಆಯೋಜಕರು, ಸಮಾರಂಭ ಮುಗಿದರು ಪರಮೇಶ್ವರ್ ಕಾಣದಿದ್ದಾಗ ಹಲವರು ಮಾತನಾಡುತ್ತಿ

ಬೆಂಗಳೂರು: ಪಕ್ಷದ ರಾಜ್ಯಾಧ್ಯಕ್ಷರಾಗಿ ಸಚಿವರ ಪದಗ್ರಹಣ ಸಮಾರಂಭದಲ್ಲಿ ಪರಮೇಶ್ವರ್ ಇರಲೇಬೇಕಿತ್ತು. ವೇದಿಕೆ ಮೇಲೆ ಕೂರಬೇಕಿತ್ತು. ಆದರೆ ಬೇಸರಗೊಂಡಿರುವ ಜಿ. ಪರಮೇಶ್ವರ್ ಸಮಾರಂಭಕ್ಕೆ ಹಾಜರಾಗದೇ ದೂರವೇ ಉಳಿದು ಬಿಟ್ಟಿರು. ಸಭೆ- ಸಮಾರಂಭದಲ್ಲಿ ನೆರೆದಿದ್ದವರಿಗೆ ಕೌತುಕ ಮೂಡಿಸುವಂತಿತ್ತು. ಕಡೆಯ ಕ್ಷಣದವರೆಗೆ ಪರಮೇಶ್ವರ್ ಬರುತ್ತಾರೆ ಎನ್ನುತ್ತಲೇ ಇದ್ದ ಆಯೋಜಕರು, ಸಮಾರಂಭ ಮುಗಿದರು ಪರಮೇಶ್ವರ್ ಕಾಣದಿದ್ದಾಗ ಹಲವರು ಮಾತನಾಡುತ್ತಿದ್ದುದ್ದು ಕಂಡು ಬಂತು.
ಸಚಿವರೊಬ್ಬರಿಗೆ ಸ್ಥಾನ ಸೀಗುತ್ತೆ ಎಂದು ಆಶಯ ಹೊಂದಿದ್ದ ಜಿ. ಪರಮೇಶ್ವರ್ ಗೆ ನಿರಾಶೆ ತಂದಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ನಗರದ ಸದಾಶಿನಗರ ನಿವಾಸದಲ್ಲಿಯೇ ಇದ್ದರು ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ನೂತನ ಸಚಿವರ ಪ್ರಮಾಣ ವಚನಕ್ಕೆ ಗೈರು ಹಾಜರಾಗಿರುವುದು ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಮಧ್ಯದ ಮುನಿಸು ಮತ್ತೆ ಕಂಡು ಬಂದಿದೆ.

ಮತ್ತೆ ಇಬ್ಬರ ಮಧ್ಯೆ ಅಸಮಾಧಾನ ಸ್ಫೋಟಗೊಂಡಿದೆ. ಆಪ್ತ. ಕೆ, ಷಡಕ್ಷರಿಯನ್ನು ಸಚಿವರನ್ನಾಗಿ ಆಶಯ ಹೊಂದಿದ್ದ ಪರಮೇಶ್ವರ್ ಗೆ ಸಿಎಂ ಸಿದ್ದರಾಮಯ್ಯ ಕಡೆಯ ಕ್ಷಣದಲ್ಲಿ ನಿರಾಸೆ ಮೂಡಿಸಿದ್ದಾರೆ. ಉದ್ದೇಶಪೂರ್ವಕವಾಗಿಯೇ ಷಯಕ್ಷರಿ ಹೆಸರು ಕಿತ್ತು ಹಾಕಿ ಅದಕ್ಕೆ ಸ್ಪಷ್ಟ ಕಾರಣ ಕೂಡ ನೀಡಿಲ್ಲ, ಹಳೆ ಮೈಸೂರು ಭಾಗದಲ್ಲಿ ಲಿಂಗಾಯತ ಮತದಾರರನ್ನುಸೆಳೆಯಲು ಗೀತಾ ಮಹಾದೇವಪ್ರಸಾದ್ ಗೆ ಅವಕಾಶ ನೀಡುತ್ತಿರುವುದಾಗಿ ಸಿಎಂ ತಿಳಿಸಿದ್ದಾರೆ. ಇದು ಪರಮೇಶ್ವರ್ ಅವರಿಗೆ ಬೇಸರ ತಂದಿದೆ. ಈ ಮೂಲಕ ತಮ್ಮ ಅಸಮಾಧಾನವನ್ನು ಪರಮೇಶ್ವರ್ ರಾಜಭವನ ದಿಂದ ದೂರವೇ ಇದ್ದು ತೋರಿಸಿದ್ದಾರೆ ಎನ್ನುತ್ತಿದೆ ಮೂಲಗಳು.

Edited By

Shruthi G

Reported By

Sudha Ujja

Comments