ದಲಿತ ಕುಟುಂಬಗಳನ್ನು ಮನೆಗೆ ಊಟಕ್ಕೆ ಆಹ್ವಾನ ನೀಡಿದ ಬಿಎಸ್ ವೈ

26 Aug 2017 11:04 PM | Politics
300 Report

ಬೆಂಗಳೂರು: 'ಬಿಜೆಪಿ ನಡಿಗೆ ದಲಿತರ ಮನೆಗೆ' ಎಂಬ ಜನಸಂಪರ್ಕ ಅಭಿಯಾನ ನಡೆಸಿದ್ದ ಮಾಜಿ ಸಿಎಂ ಯಡಿಯೂರಪ್ಪ, ಈಗ ದಲಿತ ಕುಟುಂಬಗಳಿಗೆ ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದ್ದಾರೆ.

ಬೆಂಗಳೂರು: 'ಬಿಜೆಪಿ ನಡಿಗೆ ದಲಿತರ ಮನೆಗೆ' ಎಂಬ ಜನಸಂಪರ್ಕ ಅಭಿಯಾನ ನಡೆಸಿದ್ದ ಮಾಜಿ ಸಿಎಂ ಯಡಿಯೂರಪ್ಪ, ಈಗ ದಲಿತ ಕುಟುಂಬಗಳಿಗೆ ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದ್ದಾರೆ. ಈ ಹಿಂದೆ ಅಭಿಯಾನದ ಸಂದರ್ಭ ತಮಗೆ ಸತ್ಕರಿಸಿದ್ದ 33 ಕುಟುಂಬಗಳನ್ನ ಆಗಸ್ಟ್ 28ಕ್ಕೆ 33 ದಲಿತ ಕುಟುಂಬಗಳನ್ನ ಡಾಲರ್ಸ್ ಕಾಲೋನಿಯ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದಾರೆ. ಈ ವೇಳೆ ಬಿಎಸ್ ವೈ ಮನೆಯಲ್ಲಿ ವಿಶಿಷ್ಟ ಸತ್ಕಾರ ಕೂಡ ನಡೆಯಲಿದೆ. ವಿಶಿಷ್ಟ ಅಡುಗೆ ತಯಾರಿಸಿ ದಲಿತರ ಜೊತೆಯೇ ಯಡಿಯೂರಪ್ಪ ಊಟ ಮಾಡುವ ಸಾಧ್ಯತೆ ಇದೆ.

ಜನಸಂಪರ್ಕ ಸಭೆ ಸಂದರ್ಭ ಹೋಟೆಲ್`ನಿಂದ ತರಿಸಿದ ಆಹಾರವನ್ನ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಸೇವಿಸಿ ಬರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರ ಮಧ್ಯೆ, ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಲು ಯಡಿಯೂರಪ್ಪ ಈ ಔತಣಕೂಟ ಆಯೋಜಿಸಿದ್ದಾರೆ ಎನ್ನಲಾಗಿದೆ.

Edited By

Shruthi G

Reported By

Sudha Ujja

Comments