ಕಾರ್ಪೋರೇಷನ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ

22 Aug 2017 12:43 PM | Politics
359 Report

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ಭಯಂಕರ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರವಿದ್ದರೂ ಬಿಜೆಪಿ ಮತ್ತು ಶಿವಸೇನೆ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಈ ಚುನಾವಣೆಯಲ್ಲಿ ಶಿವಸೇನೆ ೨೨ ಸ್ಥಾನಗಳನ್ನು ಗೆದ್ದಿದೆ.

೯೫ ಸ್ಥಾನಗಳ ಪೈಕಿ ೬೫ ರಲ್ಲಿ ಜಯ ಗಳಿಸಿದೆ. ೨೦೧೨ರಲ್ಲಿ ೨೬ ಸ್ಥಾನಗಳನ್ನು ಗೆದ್ದು ಕೊಂಡಿದ್ದ ಎನ್ ಸಿಪಿ ಈ ಬಾರಿ ಒಂದು ಸ್ಥಾನವನ್ನು ಗೆದ್ದಿಲ್ಲ, ಕಾಂಗ್ರೆಸ್ ಫಲಿತಾಂಶ ಕುಸಿತವಾಗಿದ್ದು, ಕಳೆದ ಬಾರಿ ೧೯ ಸ್ಥಾನ ಗೆದ್ದಿದ್ದರೆ, ಈ ಬಾರಿ ೧೦ ಸ್ಥಾನಗಳನ್ನು ಗೆಲ್ಲುವಲ್ಲಿ ಮಾತ್ರ ಯಶಸ್ವಿ ಕಂಡಿದೆ. ಕಳೆದ ಎಲೆಕ್ಷನ್ ನಲ್ಲಿ ೧ ಸ್ಥಾನವನ್ನು ಜಯಗಳಿಸಿದ್ದ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಈ ಬಾರಿ ಶೂನ್ಯ ಸಂಪಾದಿಸಿದೆ.

ಈ ಬಾರಿ ಜನರು ಬಿಜೆಪಿ ಯನ್ನು ಗೆಲ್ಲಿಸಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಫಲಿತಾಂಶದ ಬಳಿಕ ಟ್ವೀಟ್ ಮಾಡಿದ್ದಾರೆ.

 

Edited By

Suhas Test

Reported By

Sudha Ujja

Comments