ಬಿಎಸ್‍ವೈ ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಹೊಸ ಟ್ವಿಸ್ಟ್!

22 Aug 2017 12:27 PM | Politics
297 Report

ಬೆಂಗಳೂರು: ಶಿವರಾಮ್ ಕಾರಂತ್ ಬಡಾವಣೆಯಲ್ಲಿ ಡಿ ನೋಟಿಫಿಕೇಷನ್ ಪ್ರಕರಣಕ್ಕೆ ದಿನಕ್ಕೊಂದು ಹೊಸ ಟ್ವಿಸ್ಟ್ ಸಿಗುತ್ತಿದೆ. ಇಡೀ ಪ್ರಕರಣವನ್ನು ಬೆನ್ನಟ್ಟಿದ ಪಬ್ಲಿಕ್ ಟಿವಿಗೆ ಮತ್ತಷ್ಟು ಸ್ಪೋಟಕ ಮಾಹಿತಿಗಳು ದೊರೆತಿದೆ.

ಕೇವಲ ರಾಜಕೀಯ ದುರುದ್ದೇಶದಿಂದಲೇ ಬಿಎಸ್‍ವೈ ವಿರುದ್ಧ ಎಫ್‍ಐಆರ್ ದಾಖಲಿಸಿರೋ ಬಗ್ಗೆ ದಾಖಲಾತಿಗಳು ದೊರೆತಿವೆ.

2013 ರಲ್ಲಿ ಇಡೀ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಂದಿನ ಅಪರ ಮುಖ್ಯಕಾರ್ಯದರ್ಶಿ ಆಗಿದ್ದ ಅಭಿವೃದ್ಧಿ ಆಯುಕ್ತ ಉಮೇಶ್ ಅವರು ಸರ್ಕಾರಕ್ಕೆ 14 ಪುಟಗಳ ರಹಸ್ಯ ವರದಿಯೊಂದನ್ನು ಸಲ್ಲಿಸಿದ್ದರು. ಈ ವರದಿಯಲ್ಲಿ ಡಿ ನೋಟಿಫಿಕೇಷನ್‍ಗೆ ಸಹಕಾರ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಿ ಅಂತ ರಹಸ್ಯ ವರದಿಯಲ್ಲಿ ತಿಳಿಸಿಲಾಗಿದೆ. ಆದರೆ ಸರ್ಕಾರ ಅಂದಿನಿಂದ ಇಂದಿನವರೆಗೆ ಸುಮ್ಮನಿದ್ದು, ಆಗಸ್ಟ್ ತಿಂಗಳಲ್ಲಿ ಡಿಕೆಶಿ ಮನೆ ಮೇಲೆ ದಾಳಿ ನಡೆಯುತ್ತಿದ್ದಂತೆ ಪ್ರಕರಣದ ಬಗ್ಗೆ ಅತಿಯಾದ ಕಾಳಜಿ ತೋರಿಸುತ್ತಿದೆ.

ಡಿ ನೋಟಿಫಿಕೇಷನ್ ಪ್ರಕರಣದ ಬಗ್ಗೆ ಜೂನ್ 6 ರಂದೇ ಜನಸಮಾನ್ಯರ ವೇದಿಕೆಯ ಅಧ್ಯಕ್ಷ ಅಯ್ಯಪ್ಪ ದೂರು ನೀಡಿದ್ರು. ಆದರೆ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರ ಡಿಕೆಶಿ ಮೆನೆ ದಾಳಿ ಆಗುತ್ತಿದ್ದಂತೆ ಬಿಜೆಪಿ ರಾಜ್ಯಧ್ಯಕ್ಷರ ವಿರುದ್ಧ ಎಸಿಬಿಯ ಮೂಲಕ ತಿರುಗೇಟು ನೀಡಿದೆ.

Courtesy: Public tv

Comments