ಠಿಕಾಣಿ ಹೂಡಿದ ಮಂತ್ರಿಸ್ಥಾನದ ಆಕಾಂಕ್ಷಿಗಳು!

17 Aug 2017 9:56 AM | Politics
390 Report

ಚುನಾವಣೆ ವೇಳೆಯಲ್ಲಿ ಸಂಪುಟ ಎಂಬ ಹುತ್ತಕ್ಕೆ ಕೈ ಹಾಕುವುದು ಸವಾಲವೇ ಸರಿ. ಧೈರ್ಯ ಮಾಡಿ ಸಿಎಂ ಸಿದ್ದರಾಮಯ್ಯ ಸಂಪುಟ ವಿಸ್ತರಣೆಗೆ ಕೈ ಹಾಕಿದ್ದಾರೆ. ಈಗ ಸಿಎಂ ಸಿದ್ದರಾಮಯ್ಯನವರಿಗೆ ದೊಡ್ಡ ಚಾಲೆಂಜ್ ಆಗಿ ಮಾರ್ಪಟ್ಟಿದೆ. ಉಳಿದಿರುವ ಮೂರು ಸಚಿವ ಸ್ಥಾನಗಳಲ್ಲಿ ಯಾರಿಗೆ ಮಂತ್ರಿಗಿರಿ ಒಲಿಯಲಿದೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.

ಈಗಾಗ್ಲೇ ದೆಹಲಿಗೆ ತೆರಳಿರುವ ಸಿಎಂ ಯಾರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಹಲವು ದಿನಗಳಿಂದ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಯ ಸುದ್ದಿ ಕೇಳಿ ಬರುತ್ತಲೇ ಇತ್ತು.
ಆದ್ರೆ ಈ ವಿಚಾರ ಚರ್ಚಿಸಲು ಸಿಎಂ ದೆಹಲಿಗೆ ತೆರಳಿದ್ದಾರೆ. ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಎಂಬುದರ ಬಗ್ಗೆ
ಚರ್ಚೆ ನಡೆಯುತ್ತೆ ಎನ್ನಲಾಗುತ್ತಿದೆ.

ಸಂಪುಟ ವಿಸ್ತರಣೆ ಸಂಬಂಧ ಸಚಿವ ಸ್ಥಾನದ ಆಕಾಂಕ್ಷಿಗಳು ಕೆಲವರು ಬೆಂಗಳೂರಿನಲ್ಲೇ ಇದ್ದುಕೊಂಡು ಪ್ರಭಾವ ಬೀರುತ್ತಿದ್ದರೆ,
ಮತ್ತೆ ಕೆಲವರು ದೆಹಲಿಗೆ ತೆರಳಿ ಲಾಬಿ ನಡೆಸುತ್ತಿದ್ದಾರೆ. ಹೆಚ್, ಎಂ ರೇವಣ್ಣ, ಸಿ.ಎಸ್ ಶಿವಳ್ಳಿ, ಸಿದ್ದು ನ್ಯಾಮಗೌಡ, ಷಡಕ್ಷರಿ,
ಆರ್.ಬಿ ತಿಮ್ಮಾಪುರ, ರಾಜಶೇಖರ್ ಪಾಟೀಲ್ ಹುಮನಾಬಾದ್, ನರೇಂದ್ರಸ್ವಾಮಿ ದೆಹಲಿಯಲ್ಲಿ ಇದ್ದಾರೆ.

Edited By

venki swamy

Reported By

Sudha Ujja

Comments

Cancel
Done