ನಿರ್ಮಲಾನಂದ ಸ್ವಾಮೀಜಿ -ಅಮಿತ್ ಶಾ ಭೇಟಿ ರಹಸ್ಯ?

12 Aug 2017 11:08 AM | Politics
1186 Report

ಬೆಂಗಳೂರು: ಶ್ರೀ ನಿರ್ಮಲಾನಂದನಾಥ್ ಸ್ವಾಮೀಜಿ ಅವರನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ಮಾಡುತ್ತಿರುವುದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಅಮಿತ್ ಶಾ ಹಾಗೂ ನಿರ್ಮಲಾನಂದ ಸ್ವಾಮಿಜಿಯ ಭೇಟಿಯ ಸಿಕ್ರೇಟ್ ಏನೆಂಬುದು ಇದುವರೆಗೂ ತಿಳಿದು ಬಂದಿಲ್ಲ.

ಭಾನುವಾರ ಬೆಳಿಗ್ಗೆ ಅವರು 11.30ಕ್ಕೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಲ್ಲಿರುವ ಶ್ರೀ ಕ್ಷೇತ್ರ ಆದಿಚುಂಚನಗಿರಿ ಪೀಠದ  ಕಾಲಭೈರವೇಶ್ವರ ಸನ್ನಿಧಾನಕ್ಕೆ ಅಮಿತ್ ಶಾ ಭೇಟಿ ನೀಡಿ ನಿರ್ಮಲಾನಂದನಾಥ್ ಶ್ರೀಗಳಿಂದ ಆಶೀರ್ವಾದ ಪಡೆಯಲಿದ್ದಾರೆ.

ಇತ್ತೀಚೆಗಷ್ಟೇ ಇಂಧನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಅವರ ಸಹೋದರ ಸಂಬಂಧಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಬೆಳವಣಿಗೆಗಳ ಮಧ್ಯೆ ಅಮಿತ್ ಶಾ ಆದಿ ಚುಂಚನಗಿರಿ ಪೀಠಕ್ಕೆ ಭೇಟಿ ನೀಡುತ್ತಿರುವುದು ಹೊಸ ರಾಜಕೀಯ ಸಮೀಕರಣಕ್ಕೆ ಮುನ್ನುಡಿ ಬರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಷ್ಟಕ್ಕೂ ನಿರ್ಮಾಲಾನಂದ ಸ್ವಾಮೀಜಿ ಹಾಗೂ ಅಮಿತ್ ಶಾ ಮಧ್ಯೆ ಯಾವ ವಿಷಯದ ಬಗ್ಗೆ ಚರ್ಚೆ ನಡೆಯಲಿದೆ ಎಂಬ ಬಗ್ಗತಿಳಿದಿಲ್ಲ.

 ರಾಜಕೀಯ ಕುರಿತಂತೆ ಹೇಳುವುದಾದರೆ ಇತ್ತೀಚೆಗೆ ಇಂಧನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಅವರ ಸಹೋದರಿ ಸಂಬಂಧಿ ಮೇಲೆ ದಾಳಿ ನಡೆದಿದೆ.ಅದರ ಮಧ್ಯೆ ಆದಿಚುಂಚನಗಿರಿ ಪೀಠಕ್ಕೆ ಅಮಿತ್ ಶಾ ಭೇಟಿ ನೀಡುತ್ತಿದ್ದಾರೆ. ಒಕ್ಕಲಿಗ ಸಮುದಾಯದ ಬಹುತೇಕ ಜೆಡಿಎಸ್ ಹಾಗೂ ಕಾಂಗ್ರೆಸ್ ಜತೆ ಗುರುತಿಸಿಕೊಂಡಿದೆ. ಈ ಸಮುದಾಯದ ಮತಗಳನ್ನು ಸೆಳೆಯಲು ನಾನಾ ತಂತ್ರಗಳನ್ನು ರೂಪಿಸಿದರು ನಿರೀಕ್ಷಿತ ಪ್ರಮಾಣದಲ್ಲಿ ಮತ ಗಳಿಕೆ ಸಾಧ್ಯವಾಗಿಲ್ಲ.ಈಗಲೂ ಜೆಡಿಎಸ್ ಹಾಗೂ ಕುಮಾರಸ್ವಾಮಿ ಹಾಗೂ ಇಂಧನ ಸಚಿವ ಡಿ.ಕೆ ಶಿವಕುಮಾರ್ ಸಮುದಾಯದ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ.

 2018ರ ಚುನಾವಣೆ ಯಲ್ಲಿ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕಾದರೆ ಮೈಸೂರು ಭಾಗದಲ್ಲೂ ಕಮಲ ಅರಳಿಸುವುದು ಈ ನಾಯಕರ ಲೆಕ್ಕಾಚಾರವಾಗಿದೆ. 2013 ರ ವಿಧಾನಸಭೆ ಚುನಾವಣೆಯಲ್ಲಿ ಈ ಭಾಗದಲ್ಲಿ ಬಿಜೆಪಿ ಸಾಧನೆ ತೀರಾ ಕಳಪೆಯಾಗಿದೆ.ಅಲ್ಲಲ್ಲಿ ಕೆಲವು ವಿಧಾನಸಭಾ ಕ್ಷೇತ್ರಗಳನ್ನು , ಮೈಸೂರು, ಲೋಕಸಭಾ ಕ್ಷೇತ್ರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಹೊರೆತುಪಡಿಸಿದರೆ ವಿಧಾನಸಭಾ ಎಲೆಕ್ಷನ್ ನಲ್ಲಿ ಪಕ್ಷಗಳು ಸಂಪೂರ್ಣವಾಗಿ ನೆಲಕಚ್ಚಿವೆ.

Edited By

venki swamy

Reported By

Sudha Ujja

Comments