ಸ್ಮೃತಿ ಇರಾನಿಗೆ ರಮ್ಯಾ ತಿರುಗೇಟು

11 Aug 2017 11:00 AM | Politics
400 Report

ಬೆಂಗಳೂರು: ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಯವರನ್ನು ಲೇವಡಿ ಮಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಮಾಜಿ ಸಂಸದೆ, ನಟಿ ರಮ್ಯಾ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ನಿರ್ವಾಹಕಿಯೂ ಆಗಿರುವ ರಮ್ಯಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಸೋನಿಯಾ ಗಾಂಧಿಯವರ ಭಾಷಣವನ್ನು ಕುರಿತು ಟೀಕೆ ಮಾಡಿದ ಸ್ಮೃತಿ ಇರಾನಿಗೆ ತಿರುಗೇಟು ನೀಡಿದ್ದಾರೆ. ಕ್ವಿಟ್ ಇಂಡಿಯಾ ಚಳುವಳಿಯ 70 ನೇ ವರ್ಷಾಚರಣೆ ಹಿನ್ನಲೆಯಲ್ಲಿ ಸಂಸತ್ತಿನಲ್ಲಿ ಭಾಷಣ ಮಾಡುವಾಗ ಆರ್ ಎಸ್ ಎಸ್ ಮತ್ತು ಬಿಜೆಪಿಗೆ ಪರೋಕ್ಷ ತಿರುಗೇಟು ನೀಡಿದ್ದರು. ಅಲ್ಲದೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಜವಹರಲಾಲ್ ನೆಹರೂ ಅವರ ಪಾತ್ರ ದೊಡ್ಡದು ಎಂದು ಬೆನ್ನುತಟ್ಟಿಕೊಂಡಿದ್ದರು.

ಇದಕ್ಕೆ ಸ್ಮೃತಿ ಇರಾನಿ ಸೋನಿಯಾ ಗಾಂಧಿಯವರು ತಮ್ಮ ಕುಟುಂಬವನ್ನೇ ಹೊಗಳಿಕೊಂಡರು ಎಂದು ಟೀಕಿಸಿದ್ದರು. ಇದರ ವಿರುದ್ಧ ರಮ್ಯಾ ಕಿಡಿ ಕಾರಿದ್ದಾರೆ.

 

Edited By

Suhas Test

Reported By

Sudha Ujja

Comments

Cancel
Done