ಅಹ್ಮದ್ ಪಟೇಲ್ ಗೆಲ್ಲಿಸಿದ್ದಕ್ಕೆ ಡಿಕೆಶಿಗೆ ಹೈಕಮಾಂಡ್ ನಿಂದ ಬಂಪರ್ ಗಿಫ್ಟ್!

09 Aug 2017 11:19 AM | Politics
7716 Report

ಬೆಂಗಳೂರು: ಕಾಂಗ್ರೆಸ್ ಅಧಿನಾಯಕಿಯ ಪ್ರತಿಷ್ಠೆ ಉಳಿಸಿದ ಇಂಧನ ಸಚಿವ ಡಿಕೆ ಶಿವಕುಮಾರ್ ಗೆ ಕಾಂಗ್ರೆಸ್ ನಿಂದ ಭರ್ಜರಿ ಗಿಫ್ಟ್ ಸಿಗೋ ಸಾಧ್ಯತೆಗಳಿವೆ.

ಅತ್ಯಂತ ಸಂಕಷ್ಟ ಸ್ಥಿತಿಯಲ್ಲಿಯೂ ಪಕ್ಷದ ಹಿತ ಕಾಯ್ದ ಪವರ್ಫುಲ್ ಮಿನಿಸ್ಟರ್ ನಿಷ್ಠೆಗೆ ಹೈಕಮಾಂಡ್, ಗುಜರಾತ್ ವಿಧಾನಸಭಾ ಚುನಾವಣೆಯ ಹೊಣೆಗಾರಿಕೆ ನೀಡಲು ತೀರ್ಮಾನಿಸಿದೆ. ಈಗಾಗಲೇ ಮೊದಲ ಸುತ್ತಿನ ಮಾತುಕತೆಯಲ್ಲಿ ಡಿಕೆಶಿ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂಬುವುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿ ಗೆ ಮಾಹಿತಿ ಲಭಿಸಿದೆ.

ಅಹ್ಮದ್ ಪಟೇಲ್‍ಗೆ ರಾಜಕೀಯ ಮರು ಜೀವ ನೀಡಿದ ಡಿಕೆಶಿಗೆ ವಿಧಾನಸಭೆಯಲ್ಲೂ ಮರು ಜೀವ ನೀಡುವ ಜವಾಬ್ದಾರಿ ಹೊರಿಸಲಿದ್ದಾರೆ. ಒಟ್ಟಿನಲ್ಲಿ ಅಹ್ಮದ್ ಪಟೇಲ್‍ಗೆ ರಾಜಕೀಯ ಮರುಜೀವ ನೀಡಿದ `ಚಾಣಾಕ್ಷ’ ಡಿಕೆಶಿಗೆ ಶೀಘ್ರವೇ ಬಂಪರ್ ಬಹುಮಾನ ಸಿಗೋ ಸಾಧ್ಯತೆಗಳಿವೆ ಎನ್ನಲಾಗಿದೆ.

ಚುನಾವಣಾ ಫಲಿತಾಂಶದ ಬಗ್ಗೆ ಡಿಕೆಶಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು ಗುಜರಾತ್ ಶಾಸಕರನ್ನು ಕಳಿಸಿಕೊಡ್ತಾ ಇದ್ದೀವಿ ಅಂದ್ರು. ನಾನು ಏನೇ ಕಷ್ಟ ಇದ್ದರೂ ಅದಕ್ಕೆ ಒಪ್ಪಿಕೊಂಡೆ. ನನಗೆ ಪಕ್ಷ ಮುಖ್ಯ. ಹೀಗಾಗಿ ವರಿಷ್ಠರ ಮಾತಿಗೆ ಬೆಲೆಕೊಟ್ಟು ಸಹಾಯ ಮಾಡಿದೆ. ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಆದ್ರೆ ನಮಗೆ 46 ಮತ ಬರಬೇಕು ಅನ್ನೋ ಲೆಕ್ಕವಿತ್ತು. ಆದ್ರೆ ಈಗ 45 ಮತ ಬಂದಿದೆ ಅನ್ನೋದು ಕೇಳಿ ಬರುತ್ತಿದೆ. ಇದರಿಂದ ಒಂದು ಸಣ್ಣ ಅಸಮಾಧಾನವಿದೆ. ಹಿಗಾಗಿ ನಮಗೆ 45 ಮತ ಸಾಕು ಅಂತ ಹೇಳಿದ್ದರು.

ಮತದಾನ ಮಾಡುವಾಗ ಸಾಕಷ್ಟು ಹೈ ಡ್ರಾಮ ನಡೆದ್ರೂ ವಿಜಯ ಪತಾಕೆಯನ್ನ ಕಾಂಗ್ರೆಸ್ ತನ್ನ ಮುಡಿಗೇರಿಸಿಕೊಂಡಿದೆ. ಇನ್ನು ರೆಸಾರ್ಟ್ ರಾಜಕಾರಣದ ಹೊಣೆ ಹೊತ್ತಿದ್ದ ಡಿಕೆ ಶಿವಕುಮಾರ್ ಮುಖದಲ್ಲಿ ಮಂದಹಾಸ ಮೂಡಿದೆ. ಹೈ ಕಮಾಂಡ್ ಹೊರಿಸಿದ್ದ ಹೊಣೆಯನ್ನ ಡಿಕೆಶಿ ಅಚ್ಚು ಕಟ್ಟಾಗಿ ನಿಭಾಯಿಸಿದ್ದು, ಅಹಮದ್ ಪಟೇಲ್ ಗೆಲುವಿಗೆ ಡಿಕೆ ಶಿವಕುಮಾರ್ ಕೂಡ ಪರೋಕ್ಷವಾಗಿ ಕಾರಣಕರ್ತರಾಗಿದ್ದಾರೆ.

Courtesy: Public tv

Comments