ಡಿಕೆಶಿಗೆ ಅಭಿನಂದನೆ ಸಲ್ಲಿಸಿದ ಸೋನಿಯಾ ಗಾಂಧಿ, ಅಹ್ಮದ್ ಪಟೇಲ್

09 Aug 2017 11:00 AM | Politics
464 Report

ಕುದುರೆ ವ್ಯಾಪಾರ, ರೆಸಾರ್ಟ್ ರಾಜಕಾರಣ ಎಲ್ಲ ಪ್ರಹಸನಗಳು ಮುಗಿದು ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ ಗೆಲುವು ಸಾಧಿಸಿದ್ದಾರೆ. ಗುಜರಾತ್ ಶಾಸಕರು ಕು ದುರೆ ವ್ಯಾಪಾರದ ಭೀತಿಯಲ್ಲಿದ್ದಾಗ ಶಾಸಕರಿಗೆ ರಕ್ಷಣೆ ನೀಡಿ ಪಕ್ಷಕ್ಕೆ ನೆರವಾದ ಸಚಿವ ಡಿ.ಕೆ. ಶಿವಕುಮಾರ್`ಗೆ ಸೋನಿಯಾ ಗಾಂಧಿ ಮತ್ತು ಅಹ್ಮದ್ ಪಟೇಲ್ ಅಭಿನಂದನೆ ಸಲ್ಲಿಸಿದ್ದಾರೆ. 

ಡಿ.ಕೆ. ಶಿವಕುಮಾರ್ ಅವರಿಗೆ ಕರೆ ಮಾಡಿದ್ದ ಸೋನಿಯಾ ಗಾಂಧಿ ಅಭಿನಂದನೆ ಸಲ್ಲಿಸಿದ್ದಾರೆ. ದೂರವಾಣಿ ಕರೆ ಮಾಡಿದ್ದ ಸೋನಿಯಾ ಗಾಂಧಿ, ಕಷ್ಟದ ಸಂದರ್ಭದಲ್ಲಿ ಪಕ್ಷಕ್ಕೆ ನೆರವಾಗಿದ್ದೀರಿ. ಉತ್ತಮ ಕೆಲಸ ಮಾಡಿದ್ದೀರಿ. ಅಹ್ಮದ್ ಪಟೇಲ್ ಗೆಲುವಿನ ಶ್ರೇಯ ನಿಮಗೂ ಸಲ್ಲಬೇಕು. ಕಿರುಕುಳವನ್ನ ಸಹಿಸಿ ಪಕ್ಷದ ಪರ ನಿಂತಿದ್ದೀರಿ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. 

ಇತ್ತ, ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಅಹ್ಮದ್ ಪಟೇಲ್ ಸಹ ಡಿ.ಕೆ. ಶಿವಕುಮಾರ್ ಅವರಿಗೂ ಕರೆ ಮಾಡಿ ಧನ್ಯವಾದ ಹೇಳಿದ್ದಾರೆ. ತನ್ನ ಗೆಲುವಿಗೆ ಸಹಕರಿಸಿದ್ದಕ್ಕೆ ಆಭಾರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

Edited By

Suhas Test

Reported By

Suhas Test

Comments