ಮತ್ತೊಂದು ತಿರುವು ಪಡೆದುಕೊಂಡ ದುಬಾರಿ ವಾಚ್‌ ಗಿಫ್ಟ್ ,ವಾಚ್ ಪಡೆದು ಖಾಸಗಿ ಕಂಪನಿಯೊಂದಿಗೆ 2 ಒಪ್ಪಂದ!

31 Jul 2017 2:47 PM | Politics
571 Report

ಸಿಎಂ ಸಿದ್ದರಾಮಯ್ಯ , 75 ಲಕ್ಷ ಮೌಲ್ಯದ ಹ್ಯೂಬ್ಲಟ್​ ವಾಚ್​ ಉಡುಗೊರೆಯಾಗಿ ಪಡೆದಿದ್ದಾರೆ ಎನ್ನುವ ಸುದ್ದಿ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಸಂಚಲನ ಮಾಡಿತ್ತು. ಸಮಾಜವಾದಿ ನಾಯಕನೊಬ್ಬ ದುಬಾರಿ ವಾಚ್​ ಪಡೆದಿದ್ದಾರೆಂದು ಪ್ರತಿಪಕ್ಷಗಳು ಉಯಿಲೆಬ್ಬಿಸಿದ್ದವು. ಇಡೀ ಪ್ರಕರಣವೇ ಮುಗಿದುಹೋಯ್ತು ಅನ್ನುವಷ್ಟರಲ್ಲಿ ಮತ್ತೊಂದು ಸ್ಫೋಟಕ ಟ್ವಿಸ್ಟ್​ ಸಿಕ್ಕಿದೆ.

ಮಾಜಿ ಡಿವೈಎಸ್​ಪಿ ಅನುಪಮಾ ಶೆಣೈ ಸಿಡಿಸಿದ್ದಾರೆ ಹೊಸ ಬಾಂಬ್​

ತಮಗೆ ದುಬಾರಿ ವಾಚ್​ ಕೊಟ್ಟ ದುಬೈ ಉದ್ಯಮಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿಯಾದ ರಿಟರ್ನ್​ ಗಿಫ್ಟ್ ಕೊಟ್ಟಿದ್ದಾರೆ. ಅದು ಅಂತಿಂಥ ಗಿಫ್ಟ್ ಅಲ್ಲ. ಕೋಟ್ಯಂತರ ರೂಪಾಯಿಯ ಪ್ರಮುಖ ಯೋಜನೆಗಳು. ಕಳೆದ ವರ್ಷ ಸಚಿವ ಸಂಪುಟ ಸಭೆ ಎರಡು ಪ್ರಮುಖ ಯೋಜನೆಗಳಿಗೆ ಅಸ್ತು ನೀಡಿತ್ತು. ಅದು ಉಡುಪಿಯ ಸರ್ಕಾರಿ ಆಸ್ಪತ್ರೆ ಮತ್ತು ಜೋಗ್​ಫಾಲ್ಸ್ ಅಭಿವೃದ್ದಿಗೆ ಸಂಬಂಧಿಸಿದ ಎರಡು ಯೋಜನೆಗಳನ್ನು ದುಬೈನ ಉದ್ಯಮಿಯೊಬ್ಬರಿಗೆ ಸೇರಿದ ಕಂಪನಿಗೆ ನೀಡಿತ್ತು. ಈ ಎರಡೂ ಯೋಜನೆಗಳನ್ನು ಆತುರಾತುರವಾಗಿ ಖಾಸಗಿ ಕಂಪನಿಗೆ ನೀಡಲು ಹ್ಯೂಬ್ಲಟ್​ ವಾಚ್ ಉಡುಗೊರೆಯೇ ಕಾರಣ ಅಂತ ಮಾಜಿ ಡಿವೈಎಸ್​ಪಿ ಅನುಪಮಾ ಶೆಣೈ ಆರೋಪಿಸಿದ್ದಾರೆ. ಈ ಸಂಬಂಧ ಸ್ಪೀಕರ್ ಕೋಳಿವಾಡ ಅವರಿಗೆ ದೂರು ನೀಡಿರುವ ಅನುಪಮಾ ಶೆಣೈ , ವಾಚ್ ಹಿಂದಿರುವ ಬೃಹತ್ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

60 ವರ್ಷಕ್ಕೆ ಉಡುಪಿ ಆಸ್ಪತ್ರೆ ಉಡುಗೊರೆ !450 ಕೋಟಿ ಮೊತ್ತದ ಜೋಗ ಜಲಪಾತ ಯೋಜನೆ ಗಿಫ್ಟ್ !

ಈ ದುಬಾರಿ ವಾಚ್​ ಕೊಟ್ಟಿದ್ದು, ತಮ್ಮ ಗೆಳೆಯ ಗಿರೀಶ್​ ಚಂದ್ರ ವರ್ಮಾ ಎನ್ನುವುದನ್ನು ಸಿಎಂ ಬಹಿರಂಗಪಡಿಸಿದ್ರು. ಆದ್ರೆ, ಇದರಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದೂ ಸಮರ್ಥಿಸಿಕೊಂಡಿದ್ದರು. ಆದ್ರೆ ಸಿಎಂಗೆ ವಾಚ್ ಗಿಫ್ಟ್ ಕೊಟ್ಟಿದ್ದ ಗಿರೀಶ್​ ಚಂದ್ರ ವರ್ಮಾ ಅವರು ಕೆಲಸ ಮಾಡುವುದು ದುಬೈ ಮೂಲದ ಉದ್ಯಮಿಯೊಬ್ಬರ ಕಂಪನಿಯಲ್ಲಿ. ಸಿಎಂಗೆ ಗಿಫ್ಟ್​ ಕೊಟ್ಟು, ಈ ಕಂಪನಿ ತನ್ನ ಬಗಲಿಗೆ ಹಾಕಿಕೊಂಡಿದ್ದು, ಉಡುಪಿಯಲ್ಲಿ ನಾಲ್ಕು ಎಕರೆ ವಿಶಾಲ ಜಾಗದಲ್ಲಿರುವ ಜಿಲ್ಲಾಸ್ಪತ್ರೆಯನ್ನು ಅಂತಾರೆ ಅನುಪಮಾ ಶೆಣೈ. ಇನ್ನು ವರ್ಷಪೂರ್ತಿ ಜೋಗ ವೈಭವ ಯೋಜನೆ ಮೂಲಕ ಜೋಗ್​ ಫಾಲ್ಸ್​ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ 450 ಕೋಟಿ ಮೊತ್ತದ ಬೃಹತ್ ಯೋಜನೆಯನ್ನು ಇದೇ ಕಂಪನಿಗೆ ನೀಡಲಾಗಿದೆ. ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ, ವಿದೇಶಿ ಕಂಪನಿಗೆ ನೀಡಲಾಗಿದೆ ಎನ್ನುವುದು ಅನುಪಮಾ ಶೆಣೈ ದೂರು.

Edited By

Suhas Test

Reported By

Suhas Test

Comments