ಉಪರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಬಸವರಾಜ್ ಪಾಟೀಲ್ ಸೇಡಂ?, ಚುನಾವಣೆ ಗೆಲ್ಲುವ ಸ್ಕೇಚ್?

11 Jul 2017 9:58 AM | Politics
639 Report

ಬಿಜೆಪಿ ರಾಜ್ಯಸಭೆ ಸದಸ್ಯರಾಗಿರುವ ಬಸವರಾಜ್ ಪಾಟೀಲ್ ಸೇಡಂ ಎನ್ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.ರಾಜ್ಯದ ಪ್ರಬಲ ಲಿಂಗಾಯುತ ಸಮುದಾಯದವರಾದ ಬಸವರಾಜ್ ಪಾಟೀಲ್ ಸೇಡಂ, ಆರೆಸ್ಸೆಸ್ ನಾಯಕರೊಂದಿಗಿನ ಉತ್ತಮ ಸಂಬಂಧ ಹೊಂದಿದ್ದು, ಅಲ್ದೇ ಪ್ರಧಾನಿ ಮೋದಿಯೊಂದಿಗೆ ಉತ್ತಮ ಗೆಳೆತನ ಹೊಂದಿರುವುದರಿಂದ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಗೆ ಕಾರಣವಿದೆ ಎನ್ನಲಾಗುತ್ತಿದೆ.

ಮುಂದಿನ ವರ್ಷ ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ ಮಿಷನ್ 150 ಸಾಕಾರಗೊಳಿಸಲು ಲಿಂಗಾಯುತ ಕೋಮಿನವರಿಗೆ

ಆದ್ಯತೆ ನೀಡಲಾಗುತ್ತಿದೆ. ಹೈದ್ರಾಬಾದ್ ಕರ್ನಾಟಕ ಭಾಗದಿಂದ ಬಿಜೆಪಿಗೆ ಹೆಚ್ಚಿನ ಲಾಭವಾಗಬಹುದು ಎನ್ನುವ ರಣತಂತ್ರವನ್ನು

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರೂಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಪಕ್ಷದ ಹೈಕಮಾಂಡ್ ರಾಜ್ಯ ಬಿಜೆಪಿ ಘಟಕದೊಂದಿಗೆ ಈಗಾಗಲೇ ಒಂದು ಬಾರಿ ಚರ್ಚೆ ನಡೆಸಿದೆ ಎನ್ನಲಾಗಿದೆ.

ಕರ್ನಾಟಕ ಮೂಲದವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿಸಿ ಮುಂದಿನ ಚುನಾವಣೆ ಗೆಲ್ಲುವ ಸ್ಕೇಚ್ ಅಮಿತ್ ಶಾ

ರಣತಂತ್ರ ಹೆಣೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Edited By

venki swamy

Reported By

Sudha Ujja

Comments