ಆ್ಯಂಬುಲೆನ್ಸ್, ಅಗ್ನಿಶಾಮಕ, ಎಲ್ಲಾ ತುರ್ತು ಸೇವೆಗೆ ಒಂದೇ ಸಂಖ್ಯೆ ೧೦೦,

10 Jun 2017 6:09 PM | Politics
528 Report

ಬೆಂಗಳೂರು: ಒಂದೇ ಸೂರಿನಡಿ ಎಲ್ಲಾ ಸೇವೆಗಳು ಜನರಿಗೆ ಲಭ್ಯವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಇನ್ನು ಮುಂದೆ ಆ್ಯಂಬುಲೆನ್ಸ್, ಅಗ್ನಿಶಾಮಕ, ಸಂಚಾರ ನಿರ್ವಹಣಾ ಕೇಂದ್ರ, ವನಿತಾ ಸಹಾಯವಾಣಿ, ಹಿರಿಯರ ಸಹಾಯವಾಣಿ, ಮಕ್ಕಳ ಸಹಾಯವಾಣಿ ಸೇರಿದಂತೆ ಹಲವು ಸೇವೆಗಳನ್ನು ೧೦೦ ಸಂಖ್ಯೆಗೆ ಕರೆ ಮಾಡಿ ಪಡೆಯಬಹುದಾಗಿದೆ.

ನಗರದ ತುರ್ತು ಪರಿಸ್ಥಿತಿಯಲ್ಲಿ ಜನರ ಸೇವೆಗಾಗಿ ಒಂದೇ ಸಹಾಯವಾಣಿ ಬಳಕೆಗೆ ‘ನಮ್ಮ ೧೦೦ ಸಂಖ್ಯೆಗೆ’ ಸಿಎಂ ಸಿದ್ದರಾಮಯ್ಯ ಇವತ್ತು ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ೧೦೦ ತುರ್ತು ಸೇವೆಯಿಂದ ರಾಜ್ಯ ಯಾವ ಮೂಲೆಯಲ್ಲಾದರೂ ಸರಿ ರಾಜ್ಯದ ಜನರಿಗೆ ೧೫ ನಿಮಿಷದಲ್ಲೇ ಸೇವೆ ಲಭ್ಯವಾಗಲಿದೆ ಎಂದು ಸಿಎಂ ಹೇಳಿದರು.

ಈ ಮಹತ್ವದ ಯೋಜನೆ ಉದ್ಘಾಟಿಸಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಪ್ರಸ್ತುತ ನಮ್ಮ ೧೦೦ ಯೋಜನೆಯನ್ನು ಕೆಲವೇ ನಗರಗಳಲ್ಲಿ ಜಾರಿಗೊಳಿಸಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಬೇರೆ ಬೇರೆ ಜಿಲ್ಲೆಗಳಿಗೂ ವಿಸ್ತರಣೆ ಮಾಡಲಾಗುತ್ತದೆ. ಪ್ರಸ್ತುತ ೫ ಲೈನ್ ಗಳಲ್ಲಿ ನಮ್ಮ ೧೦೦ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಮುಂದಿನ ದಿನದಲ್ಲಿ ೧೦೦ ಏರಿಕೆ ಮಾಡುವ ಉದ್ದೇಶವಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಗೂ ವಿಸ್ತರಿಸುವಂತೆ ಅಧಿಕಾರಿಗಳಿಗೆ  ಮನವಿ ಮಾಡಲಾಗಿದೆ ಎಂದು ಹೇಳಿದರು.

Edited By

venki swamy

Reported By

Sudha Ujja

Comments