ಚೀನಾ ಸಾಲದ ಜಾಲಕ್ಕೆ ಬಲಿಯಾದ ದೇಶಗಳಿವು, ಇಂಡಿಯಾ ಸೇಫ್ ಗೇಮ್

30 May 2017 11:47 AM | Politics
670 Report

ಆರ್ಥಿಕವಾಗಿ ಪ್ರಬಲವಾಗಿರುವ ದೇಶಗಳಲ್ಲಿ ಚೀನಾ ಮೊದಲನೇಯದು. ಆದ್ರೆ ಚೀನಾ ದೇಶ ತನ್ನದೇ ಆದ ತಂತ್ರ- ಕುತಂತ್ರಕ್ಕೆ ಕೆಲ ದೇಶಗಳನ್ನು ಬಲಿಪಶುಗಳನ್ನಾಗಿ ಮಾಡುತ್ತಿದೆ. ಇತ್ತೀಚಿನ ಉದಾಹರಣೆ ಎಂದರೆ ಶ್ರೀಲಂಕಾ,  ಜಾಗತೀಕರಣವಾಗಿ ಆರ್ಥಿಕವಾಗಿ ಮುಂದುವರಿದ ದೇಶವಾಗಿರುವ ಚೀನಾ ಶ್ರೀಲಂಕಾಕ್ಕೆ ಸಾಲದ ಬಲೆಯಲ್ಲಿ ಸಿಲುಕಿಸಿದೆ. ಅಷ್ಟೇ ಅಲ್ಲ ಕೆಲ ದೇಶಗಳು ಚೀನಾದ ಸಾಲ ಎಂಬ ಬಲಿಯಾಗಿರುವ ದೇಶಗಳೆಂದರೆ.

- ಶ್ರೀಲಂಕಾ,

ಚೀನಾದ ಸಾಲದ ಸುಳಿಗೆ ಸಿಲುಕಿರುವ ದೇಶ ಎಂದರೆ ಶ್ರೀಲಂಕಾ, ಶ್ರೀಲಂಕಾದ ಆರ್ಥಿಕ ಬೆಳವಣಿಗಾಗಿ ಚೀನಾ ಸಾಲ ನೀಡಿದೆ. ಆದ್ರೆ ನೀಡಲಾಗಿರುವ ಸಾಲವನ್ನು ಪರುಪಾವತಿ ಮಾಡದ ಸ್ಥಿತಿ ಶ್ರೀಲಂಕಾಕ್ಕೆ ಬಂದೊದಗಿದೆ. ಚೀನಾಕ್ಕೆ ತಮ್ಮ ಜಮೀನನ್ನು ಬಿಟ್ಟು ಕೊಡುವ ಸ್ಥಿತಿಯಲ್ಲಿದೆ ಶ್ರೀಲಂಕಾ.

- ಪಾಕಿಸ್ತಾನ ಹಾಗೂ ನೈಜೇರಿಯಾ

ಈ ದೇಶಗಳೂ ಕೂಡ ಚೀನಾ ಮೋಸದ ಜಾಲಕ್ಕೆ ಸಿಲುಕಿವೆ. ಚೀನಾ ಹಾಗೂ ಪಾಕಿಸ್ತಾನ ಸ್ನೇಹಿತ ರಾಷ್ಟ ಆಗಿರುವುದಷ್ಟೇ ಅಲ್ಲ, ಅದರ ವ್ಯೂಹಾತ್ಮಕ ಪಾಲುದಾರನಾಗಿ ಆರ್ಥಿಕ, ಸೈನಿಕ ಹಾಗೂ ತಾಂತ್ರಿಕ ಬೆಂಬಲವನ್ನು ನೀಡುತ್ತಿದೆ. ಪಾಕಿಸ್ತಾನಕ್ಕೆ ಅಣ್ವಸ್ತ್ರ ಮತ್ತು ಕ್ಷಿಪಣಿಗಳನ್ನು ತಯಾರಿಸಿಕೊಟ್ಟಿರುವ ಚೀನಾ ಈಗಲೂ ಮುಂದುವರಿಸಿದೆ. ನೈಜೇರಿಯಾ ದೇಶದಲ್ಲಿ ೪೦ ಅರಬ್ ಡಾಲರ್ ಬೆಲೆಯುಳ್ಳ ನಿವೇಶನಗಳನ್ನು ಚೀನಾ ಘೋಷಣೆ ಮಾಡಿದೆ. ಆದ್ರೆ ನೈಜೇರಿಯಾ ಇದೀಗ ರಾಷ್ರ್ಟ ಇಕ್ಕಟ್ಟಿಗೆ ಸಿಲುಕಿದೆ ಎಂದು ಹೇಳಲಾಗುತ್ತಿದೆ.

- ಕಾಂಬೋಡಿಯ

 ಚೀನಾದ ಕುತಂತ್ರಕ್ಕೆ ಬಲಿಯಾದ ದೇಶಗಳಲ್ಲಿ ಕಾಂಬೋಡಿಯ ಕೂಡಾ ಒಂದು. ಕಾಂಬೋಡಿಯ ದೇಶದ ಜತೆಗೂ ಚೀನಾ ಈ   ಆಟವನ್ನೇ ಆಡುತ್ತಿದೆ.

- ಭಾರತದಿಂದ ಸೇಫ್ ಗೇಮ್

ಚೀನಾದ ಒನ್ ರೋಡ್ ಒನ್ ಬೆಲ್ಟ್ ಹೊಸ ಸಿಲ್ಕ್ ಮಾರ್ಗದ ಅಡಿಯಲ್ಲಿ ಕೆಲ ದೇಶಗಳು ಬಂಡವಾಳ ಹೂಡಿವೆ. ಆದ್ರೆ ಚೀನಾದ ಈ ಯೋಜನೆಗೆ ಭಾರತದಿಂದ ತೀವ್ರ ಆಕ್ಷೇಪವಿದೆ. ಈ ಪ್ರೊಜೆಕ್ಟ್ ಅನ್ನು ದೂರವಿಡುವುದರ ಬಗ್ಗೆ ಭಾರತ ನಿರ್ಧರಿಸುತ್ತಿದೆ. ಈ ಮೂಲಕ ಶ್ರೀಲಂಕಾ ಹಾಗೂ ಕಾಂಬೋಡಿಯಾ ಪರಿಸ್ಥಿತಿ ನೋಡಿದಾಗ ಭಾರತದದ್ದು ಸೇಫ್ ಗೇಮ್ ಅಂತ ಹೇಳಲಾಗುತ್ತಿದೆ.

Edited By

Vinay Kumar

Reported By

Sudha Ujja

Comments