ಜಿಮ್’ ಮಾಡಿದ ಮೇಲೆ ಅಪ್ಪಿ ತಪ್ಪಿಯೂ ಈ ಕೆಲಸಗಳನ್ನ ಮಾಡಬೇಡಿ..!

25 Jan 2019 12:11 PM | Health
2113 Report

ದೇಹದ ಆರೋಗ್ಯದ ದೃಷ್ಟಿಯಿಂದ ಕೆಲವರು ಜಿಮ್ ಗೆ ಹೋಗುವುದು ಕಾಮನ್.. ಬಾಡಿ ಫಿಟ್ ಆಗಿ ಇರಬೇಕು ಅಂತ ಜಿಮ್ ಆಯ್ಕೆ ಮಾಡಿಕೊಳ್ಳುತ್ತಾರೆ. ದೇಹದ ಆರೋಗ್ಯದ ದೃಷ್ಟಿಯಿಂದ ಅಥವಾ ದೇಹದ ಮೈ ಕಟ್ಟಿನ ಆಕರ್ಷಣೆಗಾಗಿ ನಿತ್ಯವೂ ಜಿಮ್, ವ್ಯಾಯಾಮ, ಓಟ ಅಥವಾ ನಡಿಗೆಯಂತಹ ದೇಹ ದಂಡನೆ ಅಥವಾ ವ್ಯಾಯಾಮ ಮಾಡುವುದು ಸಹಜ.. ಆದರೆ ಇವುಗಳನ್ನು ಮಾಡುವಾಗ ಸೂಕ್ತ ರೀತಿಯ ಮಾಹಿತಿ ತುಂಬಾನೇ ಅವಶ್ಯಕ.. ಇಲ್ಲವಾದರೆ ಅವುಗಳಿಂದ ಅಪಾಯ ಕಟ್ಟಿಟ್ಟ ಬುತ್ತಿ… ಹಾಗಾಗಿಯೇ ಸೂಕ್ತ ಮಾರ್ಗದರ್ಶನದಿಂದ ಜಿಮ್ ಮಾಡಬೇಕು..

ಜಿಮ್'ನಲ್ಲಿ ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಅಭ್ಯಾಸ ಮಾಡುವುದರಿಂದ ಮೈಕಟ್ಟಿನ ಆರೋಗ್ಯ ಸುಧಾರಣೆ ಆಗಬಹುದು.. ಆದರೆ ಅಭ್ಯಾಸದ ನಂತರ ಕೆಲವು ಸೂಕ್ತ ಕ್ರಮಗಳನ್ನು ಅನುಸರಿಸುವುದು ತುಂಬಾನೇ ಮುಖ್ಯ.. ಇಲ್ಲವಾದರೆ ಗಂಟೆಗಟ್ಟಲೆ ಮಾಡಿದ ಪರಿಶ್ರಮ ವಿಫಲವಾಗುವುದರಲ್ಲಿ ಎರಡು ಮಾತಿಲ್ಲ,.. ಜಿಮ್ ಮಾಡಿದ ತಕ್ಷಣ ಯಾವ ರೀತಿ ಇರಬೇಕು ಎಂಬುದನ್ನ ಮುಖ್ಯವಾಗಿ ತಿಳಿದುಕೊಂಡಿರಬೇಕು..

  • ಜಿಮ್ ಮಾಡುವ ಸಂದರ್ಭದಲ್ಲಿ ದೇಹವು ದಣಿದಿರುತ್ತದೆ…ಹಾಗಾಗಿ ಆ ಸಂದರ್ಭದಲ್ಲಿ ಕೊಬ್ಬಿನ ಆಹಾರ ಪದಾರ್ಥಗಳನ್ನು ಸೇವಿಸಬಾರದು.. ಆದಷ್ಟು ಒಳ್ಳೆಯ ಗುಣಮಟ್ಟದ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಯುಕ್ತ ಆಹಾರವನ್ನು ಸೇವಿಸಬೇಕು.. ನಾವು ಸೇವಿಸುವ ಆಹಾರವು ರಕ್ತವನ್ನು ಪ್ರವೇಶಿಸುತ್ತದೆ.. ಕೊಬ್ಬಿನ ಆಹಾರ ಸೇವಿಸಿದರೆ ಜೀರ್ಣಾಂಗ ಕ್ರಿಯೆ ನಿಧಾನಗೊಳ್ಳುತ್ತದೆ.
  • ಸಾಮಾನ್ಯವಾಗಿ ದೇಹವು ಹೆಚ್ಚು ದಣಿದಾಗ ನೀರು ಬೇಕೆನಿಸುತ್ತದೆ.. ಆದರೆ ಆರೋಗ್ಯ ದೃಷ್ಟಿಯಿಂದ ಅದು ಸರಿಯಲ್ಲ..ಅಭ್ಯಾಸದ ಸಮಯದಲ್ಲಿ ದೇಹದಿಂದ ಹೊರಬಂದ ನೀರಿನ ಅಂಶವು ಪುನಃ ತಾನಾಗಿಯೆ ದೇಹದಲ್ಲಿ ಉತ್ಪತ್ತಿಯಾಗಬೇಕು.. ತಕ್ಷಣವೇ ನೀರು ಕುಡಿಯಬಾರದು.
  • ಜಿಮ್ ಮಾಡುವ ಸಮಯದಲ್ಲಿ ದೇಹದಿಂದ ಬಿಡುಗಡೆಯಾದ ಬೆವರು ಬಟ್ಟೆಯ ಜೊತೆ ಬೆರತುಕೊಂಡಿರುತ್ತದೆ.. ಜಿಮ್ ನಂತರ ಕಟ್ಟಾಯವಾಗಿ ಬಟ್ಟೆಯನ್ನು ಬದಲಾಯಿಸಬೇಕು.. ಇಲ್ಲವಾದರೆ ಸೂಕ್ಷ್ಮಾಣುಗಳು ತಮ್ಮ ತ್ವಚೆಯ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.
  • ಜಿಮ್ ಮಾಡಿದ ತಕ್ಷಣ ವಿಶ್ರಾಂತಿ ತೆಗೆದುಕೊಳ್ಳುವುದನ್ನು ಮರೆಯಬೇಡಿ.. ದೇಹಕ್ಕೆ ವಿಶ್ರಾಂತಿ ತುಂಬಾ ಮುಖ್ಯ..
  • ಜಿಮ್ ಮಾಡುವಾಗ ನೀವು ಬಳಸಿದ ಸಲಕರಣೆಗಳನ್ನು ತುಂಬಾ ಜನರು ಮುಟ್ಟಿರುತ್ತಾರೆ.. ಅವರ ಬೆವರಿನ ಸೂಕ್ಷ್ಮಾಣುಗಳು ಅಂಟಿಕೊಂಡಿರುತ್ತವೆ.. ಹಾಗಾಗಿ ಜಿಮ್ ಮಾಡಿದ ಮೇಲೆ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ.. ಇಲ್ಲವಾದಲಿ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ.

ಈ ಮಾಹಿತಿಯನ್ನು ನೀವು ತಿಳಿದುಕೊಂಡು ಇತರರಿಗೂ ಷೇರ್ ಮಾಡಿ.. ದೇಹಕ್ಕೆ ಜಿಮ್ ಎಷ್ಟು ಮುಖ್ಯವೋ ಅದಕ್ಕೆ ಮುಂಜಾಗ್ರತೆ ವಹಿಸುವುದು ಅಷ್ಟೆ ಮುಖ್ಯ..

Edited By

Manjula M

Reported By

Manjula M

Comments