ಚಳಿಗಾಲದಲ್ಲಿ ಒಣಗಿದ ತುಟಿಗಳ ಆರೈಕೆ ಹೇಗೆ..?ಇಲ್ಲಿದೆ ಹೋಂ ರೆಮಿಡೀಸ್..!!

05 Jan 2019 11:51 AM | Health
1957 Report

ಚಳಿಗಾಲ ಬಂತು ಎಂದರೆ ಸಾಕು .. ಎಲ್ಲರಿಗೂ ಕೂಡ ಚಿಂತೆ ಶುರುವಾಗಿ ಬಿಡುತ್ತದೆ.. ಮನೆಯಿಂದ ಹೊರಬರಲು ಹಿಂದೆ ಮುಂದೆ ನೋಡುತ್ತಾರೆ.. ಹೊರಗೆ ಹೋದರೆ ಸಿಕ್ಕಾಪಟ್ಟೆ ಚಳಿ ಏನ್ ಮಾಡೋದು ಅಂತ ಯೋಚನೆ ಮಾಡ್ತಾರೆ.. ಒಂದು ವೇಳೆ ಹೊರಗಡೆ ಬಂದರೂ ಕೂಡ ಸ್ವೆಟರ್, ಜರ್ಕಿನ್, ಸ್ಕಾರ್ಪ್ ಹೀಗೆ ಬೆಚ್ಚಗಿನ ಉಡುಪುಗಳನ್ನು ತೊಟ್ಟು ಹೊರಗೆ ಹೋಗುತ್ತಾರೆ.. ವಾತವರಣದ ಚಳಿಯು ಹೆಚ್ಚು ಪರಿಣಾಮ ಬೀರುವುದು ನಮ್ಮ ಚರ್ಮದ ಮೇಲೆ.. ಹೌದು ಚಳಿ ಹೆಚ್ಚಾದರೆ ನಮ್ಮ ಕೈ ಕಾಲುಗಳ ಚರ್ಮ ಬಿರುಕು ಬಿಡಲು ಶುರು ಮಾಡುತ್ತದೆ. ಒಂದು ವೇಳೆ ಡ್ರೈ ಸ್ಕಿನ್ ಇದ್ದವರು ಇದರ ಬಗ್ಗೆ ತುಂಬಾ ಯೋಚನೆ ಮಾಡುತ್ತಾರೆ… ಅದರಲ್ಲೂ ನಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುವ ತುಟಿಗಳು ಒಡೆದರೆ ತುಂಬಾ ಬೇಜಾರಾಗುತ್ತದೆ.. ತುಟಿಗಳ ರಕ್ಷಣೆ ತುಂಬಾ ಮುಖ್ಯ…ಅದಕ್ಕೊಂದಿಷ್ಟು ಹೋಂ ರೆಮಿಡಿಸ್ ತಿಳಿದುಕೊಳ್ಳುವುದಕ್ಕೆ ಮುಂದೆ ಓದಿ..

ಒಣಗಿದ ತುಟಿಗಳಿಂದ ಮುಕ್ತಿ ಪಡೆಯಲು ಮನೆಯಲ್ಲಿಯೇ ಸಿಗುವ ಸಾಮಾಗ್ರಿಗಳನ್ನು ಬಳಸಬಹುದು.. ಇದರಿಂದ ನಿಮಗೆ ಖರ್ಚು ಕಡಿಮೆಯಾಗುತ್ತದೆ.. ಹೊರಗಡೆ ಹೋಗುವ ಗೋಳು ಕೂಡ ತಪ್ಪುತ್ತದೆ. ಮನೆಯಲ್ಲಿಯೇ ಸಿಗುವಹರಳೆಣ್ಣೆ, ತೆಂಗಿನಕಾಯಿ ಎಣ್ಣೆ, ವೀಟ್ ಜೆರ್ಮ್ ಆಯಿಲ್, ಕ್ಯಾರೆಟ್ ಬೀಜದ ಎಣ್ಣೆ, ತುಪ್ಪ, ಬೆಣ್ಣೆ, ಹಾಲಿನಕೆನೆ, ಮೊಸರು ಈ ರೀತಿಯವನ್ನು ಬಳಕೆ ಮಾಡಬಹುದು. 

ಹರಳೆಣ್ಣೆ: ಹರಳೆಣ್ಣೆ ಚಳಿಗಾಲದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.. ಹರಳೆಣ್ಣೆಯನ್ನು ಸಾಮಾನ್ಯವಾಗಿ ಚರ್ಮದ ಉರಿ ಹಾಗೂ ಊತಕ್ಕೆ ಬಳಕೆಯನ್ನು ಮಾಡಲಾಗುತ್ತದೆ. ಒಡೆದ ಚರ್ಮ ಅಥವಾ ತುಟಿಗಳಿಗೆ ಇದನ್ನು ಹಚ್ಚಿದಾಗ ಒಡೆದ ಚರ್ಮ ಕೂಡುವುದಕ್ಕೆ ಇದು ಸಹಾಯ ಮಾಡುತ್ತದೆ. ಇದು ಸಾಮಾನ್ಯವಾಗಿ ದೇಹಕ್ಕೆ ತಂಪು ಕೂಡ ಆಗುತ್ತದೆ. ಇದರಿಂದ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.

ಕ್ಯಾರೆಟ್ ಬೀಜದ ಎಣ್ಣೆ: ಸಾಮಾನ್ಯವಾಗಿ ಕ್ಯಾರೆಟ್ ಎಲ್ಲರ ಮನೆಯಲ್ಲಿ ಸಿಗುತ್ತದೆ. ರಕ್ತ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಕ್ಯಾರೆಟ್ ಬೀಜದ ಎಣ್ಣೆ ಚರ್ಮದ ಕಾಂತಿಯನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮ ತುಟಿಗಳು ಹೊಡೆಯದಂತೆ ನೋಡಿಕೊಳ್ಳುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ ಅಷ್ಟೆ ಅಲ್ಲದೆ ಈ ಎಣ್ಣೆಯನ್ನು ರೋಗ ನಿರೋಧಕವಾಗಿಯೂ ಬಳಕೆ ಮಾಡಲಾಗುತ್ತದೆ. ಚರ್ಮಕ್ಕೆ ಬೇಕಾಗಿರುವ ಪೋಷಕಾಂಶವನ್ನು ಒದಗಿಸುತ್ತದೆ.

ವೀಟ್ ಜರ್ಮ್ ಆಯಿಲ್( ಗೋಧಿ ಎಣ್ಣೆ): ವೀಟ್ ಜರ್ಮ್ ಆಯಿಲ್ ಅತ್ಯುತ್ತಮ ಎಣ್ಣೆಯಾಗಿದ್ದು, ಅತೀ ಹೆಚ್ಚಿನ ಕೊಬ್ಬಿನಾಮ್ಲಗಳನ್ನು ಹೊಂದಿದೆ. ಇದು ನೈಸರ್ಗಿಕ ವಿಟಮಿನ್ ಇ ಗುಣವನ್ನು ಹೊಂದಿದ್ದು, ಚರ್ಮವನ್ನು ಪೋಷಣೆ ಮಾಡುತ್ತದೆ. ತುಟಿಗಳು ಮೃದುವಾಗಿರುವಂತೆ ನೋಡಿಕೊಳ್ಳುತ್ತದೆ. ಹಾಗಾಗೀ ಈ ವೀಟ್ ಜರ್ಮ್ ಎಣ್ಣೆಯನ್ನು ಚಳಿಗಾಲದಲ್ಲಿ ಹೆಚ್ಚಾಗಿ ಬಳಸುತ್ತಾರೆ..  

ಕೊಬ್ಬರಿ ಎಣ್ಣೆ: ಕೊಬ್ಬರಿ ಎಣ್ಣೆಯ ಮಹತ್ವ ತುಂಬಾ ಹೆಚ್ಚಾಗಿ ಇರುತ್ತದೆ.. ಅದರಲ್ಲೂ ಚಳಿಗಾಲದಲ್ಲಂತೂ ಕೊಬ್ಬರಿ ಎಣ್ಣೆಯ ಪಾತ್ರ ಹೆಚ್ಚಾಗಿ ಇರುತ್ತದೆ. ತುಟಿಗಳು ಮೃದುವಾಗಿರಲು ಕೊಬ್ಬರಿ ಎಣ್ಣೆ ಅತ್ಯುತ್ತಮವಾದ ಎಣ್ಣೆಯಾಗಿದೆ. ಕೊಬ್ಬರಿಎಣ್ಣೆ ಪರಿಣಾಮಕಾರಿಯಾದ ಮಾಯಿಶ್ಚರೈಸರ್ ಕೂಡ ಹೌಡು. ಒಣಗಿದ ಚರ್ಮದವರು ಚರ್ಮ ಮೃದುವಾಗಿಸಲು ಇದನ್ನು ಬಳಕೆ ಮಾಡಬಹುದು.

ತುಪ್ಪ-ಬೆಣ್ಣೆ:- ಬೆಣ್ಣೆ ಮತ್ತು ತುಪ್ಪದಲ್ಲಿ ಯತ್ತೇಚ್ಚವಾಗಿ ಎಣ್ಣೆಯ ಅಂಶದ ಜೊತೆಗೆ ಕೊಬ್ಬನ ಅಂಶವು ಕೂಡ ಇರುತ್ತದೆ. ಬೆಣ್ಣೆ ಅಥವಾ ತುಪ್ಪವನ್ನು ತುಟಿಗೆ ಹಚ್ಚುವುದರಿಂದ ತುಟಿಗಳು ಮೃದುವಾಗಿರುತ್ತವೆ. ತುಟಿಗಳಿಗೆ ಬೇಕಾದ ಎಣ್ಣೆಯ ಅಂಶವನ್ನು ಒದಗಿಸಿ ತುಟಿಗಳು ಸ್ಟಾಪ್ ಆಗಿರಲು ಸಹಕರಿಸುತ್ತವೆ. ಸಾಮಾನ್ಯಾವಾಗಿ ಎಲ್ಲರ ಮನೆಯಲ್ಲೂ ತುಪ್ಪ ಬೆಣ್ಣೆ ಇದ್ದೆ ಇರುತ್ತದೆ ಹಾಗಾಗಿ ಇವುಗಳಿಂದ ತುಟಿಯ ಅಂದ ಹೆಚ್ಚುತ್ತದೆ.

ಹಾಲಿನಕೆನೆ ಮತ್ತು ಮೊಸರು:- ಚಳಿಗಾಲದಲ್ಲಿ ಚರ್ಮದ ಆರೈಕೆ ತುಂಬಾನೇ ಮುಖ್ಯ.. ಅದರಲ್ಲಿ ಹಾಲಿನಕೆನೆ ಮತ್ತು ಮೊಸರು ಕೂಡ ಮುಖ್ಯ.. ಇದರಲ್ಲೂ ಕೂಡ ಯತ್ತೇಚ್ಛವಾಗಿ ಕೊಬ್ಬಿನ ಅಂಶವು ಇರುತ್ತದೆ. ಇದರಿಂದಲೂ ಕೂಡ ನಮ್ಮ ಚರ್ಮದ ಕಾಂತಿಯು ಹೆಚ್ಚಾಗುತ್ತದೆ. ಚರ್ಮಕ್ಕೆ ಬೇಕಾಗಿರುವ ಪೋಷಕಾಂಶಗಳನ್ನು ಒದಗಿಸುತ್ತದೆ..ಅದೇ ರೀತಿಯಲ್ಲಿ ತುಟಿಗಳು ಒಣಗದಂತೆ ನೋಡಿಕೊಳ್ಳುತ್ತವೆ. ಹಾಗಾಗಿ ಇವುಗಳನ್ನು ಬಳಸಿ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಿ..

ಚಳಿಗಾಲದಲ್ಲಿ ಚರ್ಮದ ಆರೈಕೆಯು ಬಹಳ ಮುಖ್ಯ…ಮಾರುಕಟ್ಟೆಗೆ ಹೋಗಿ ದುಬಾರಿ ಬೆಲೆಯ ಪ್ರಾಡಕ್ಟ್’ಗಳನ್ನು ಬಳಸುವುದಕ್ಕಿಂತ ಮನೆಯಲ್ಲಿಯೇ ಸಿಗುವ ನೈಸರ್ಗಿಕ ಸಾಮಾಗ್ರಿಗಳಿಂದ ನಿಮ್ಮ ಚರ್ಮ ಹಾಗೂ ತುಟಿಯ ಅಂದವನ್ನು ಹೆಚ್ಚಿಸಿಕೊಳ್ಳಿ. ಈ ಮಾಹಿತಿಯನ್ನು ನೀವು ತಿಳಿದುಕೊಂಡು ಇತರರಿಗೂ ಷೇರ್ ಮಾಡಿ

Edited By

Manjula M

Reported By

Manjula M

Comments