ಹ್ಯಾಂಗೋವರ್​ ಹಾಗೆ ಇದೆಯಾ..!? ಹಾಗಾದ್ರೆ ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್

24 Oct 2018 5:03 PM | Health
2211 Report

ಸಾಮಾನ್ಯವಾಗಿ ವಾರಪೂರ್ತಿ ಕೆಲಸ ಮಾಡಿ ಸಿಕ್ಕಾಪಟ್ಟೆ ಟಯರ್ಡ್ ಆಗಿರುತ್ತಾರೆ. ಹಾಗಾಗಿ ಸ್ವಲ್ಪ ರಿಲ್ಯಾಕ್ಸ್ ಬೇಕಲ್ವ.. ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ ವೀಕೆಂಡ್​ ಪಾರ್ಟಿಗಳು ಹೆಚ್ಚಾಗುತ್ತಲೆ ಇವೆ. ಇದರ ಮಧ್ಯೆ ಬರ್ತಡೇ ಪಾರ್ಟಿ, ಪ್ರಮೋಶನ್​ ಪಾರ್ಟಿ ಅದು ಇದು ಅಂತ ಇರ್ತಾನೆ ಇರ್ತಾವೆ... ಪಾರ್ಟಿಗಳಲ್ಲಿ ಡ್ರಿಂಕ್ಸ್ ಮಾಡಿಲ್ಲ ಅಂದರೆ ಹೇಗೆ ಹೇಳಿ.. ಅದು ಪ್ರೆಸ್ಟಿಜ್ ಪ್ರಶ್ನೆ ಬೇರೆ.. ಹಾಗಾಗಿ ಕುಡಿದುಬಿಡುತ್ತೇವೆ..  ಆಮೇಲೆ  ಬೆಳಿಗ್ಗೆ ಎದ್ದು ಆಫೀಸ್​ಗೆ ಹೋಗಲೇ ಬೇಕು ತಾನೆ... ಆಕಸ್ಮಾತ್ ಆಫಿಸ್​ಗೆ ಹೋದಾಗ ನೀವು ಇನ್ನೂ ಹ್ಯಾಂಗೊವರ್​ನಲ್ಲಿದ್ದರೆ ಏನ್ ಮಾಡ್ತಿರಾ.. ಈ ಕಡೆ ಕೆಲಸನೂ ಮಾಡಕ್ ಆಗಲ್ಲ… ನಿದ್ದೆನೂ ಮಾಡಕ್ ಆಗಲ್ಲ..

ಹಾಗಾಗಿ ಹ್ಯಾಂಗೋವರ್ ನಿಂದ ಹೊರಬರಲು ಒಂದಿಷ್ಟು ಟಿಪ್ಸ್ ಗಳನ್ನ ಹೇಳ್ತೀವಿ ಕೇಳಿ..

 ಹೆಚ್ಚಾಗಿ ನೀರು ಕುಡಿಯಿರಿನಿಮ್ಮ ದೇಹ ಡಿ ಹೈಡ್ರೇಟ್‌ ಆಗುತ್ತಿದೆ ಎನ್ನುವುದನ್ನು ಹ್ಯಾಂಗ್‌ ಓವರ್‌ ತಿಳಿಸುತ್ತದೆ. ಡ್ರಿಂಕ್ಸ್‌ ಮಾಡಿದ ನಂತರ ಹೆಚ್ಚು ನೀರು ಕುಡಿಯಬೇಕು ಇಲ್ಲವಾದಲಿ ಎಳನೀರನ್ನೂ ಕುಡಿಯಬೇಕು... ಹೀಗೆ ಮಾಡುವುದರಿಂದ ಮರುದಿನ ಈ ಹ್ಯಾಂಗೋವರ್‌ ಆಗುವುದಿಲ್ಲ.  ಹಾಗೆಯೇ ಡ್ರಿಂಕ್ಸ್‌ ಮಾಡುವುದಕ್ಕೂ ಮೊದಲು ಮೂರು ನಾಲ್ಕು ಗ್ಲಾಸ್‌ ನೀರು ಕುಡಿಯುವುದರಿಂದಲೂ ಹ್ಯಾಂಗ್‌ ಓವರನ್ನು ತಪ್ಪಿಸಬಹುದು. 

ಉತ್ತಮ ಬ್ರೇಕ್ಪಾಸ್ಟ್‌: ಸಾಕಷ್ಟು ಜನರು ಹ್ಯಾಂಗೋವರ್‌ನಿಂದಾಗಿ ಬೆಳಗಿನ ಉಪಹಾರವನ್ನು ಬಿಟ್ಟು ಬಿಡುತ್ತಾರೆ. ಉತ್ತಮವಾದ ತಿಂಡಿಯನ್ನು ಬೆಳಗಿನ ಸಮಯದಲ್ಲಿ ತಿಂದರೆ ನಿಮ್ಮನ್ನು ಹ್ಯಾಂಗ್‌ ಓವರ್‌ನಿಂದ ಹೊರಬರಲು ಸಹಾಯಮಾಡುತ್ತದೆ.

ಬಾಳೆಹಣ್ಣುಬಾಳೆಹಣ್ಣನ್ನು ತಿಂದರೂ ಕೂಡ ಹ್ಯಾಂಗ್ ಓವರ್ ನಿಂದ ಹೊರ ಬರಬಹುದು. ಬಾಳೆಹಣ್ಣು ಪೋಟಾಷಿಯಂ ಭರಿತ ಆಹಾರವಾಗಿದ್ದು, ಇದು ಹ್ಯಾಂಗೋವರ್​ಗೆ ರಾಮಭಾಣ ಎಂದೇ ಹೇಳಬಹುದು. ಕುಡಿದ ನಂತರ ಬಾಳೆಹಣ್ಣನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಬಾಳೆಹಣ್ಣು ನಿಮ್ಮನ್ನು ಆದಷ್ಟು ಬೇಗ ಹ್ಯಾಂಗ್‌ ಓವರ್‌ನಿಂದ ಹೊರ ಬರಲು ಸಹಾಯಮಾಡುತ್ತದೆ.

ಜೇನುತುಪ್ಪ: ಜೇನುತುಪ್ಪವನ್ನು ಬಾಳೆಹಣ್ಣಿನೊಂದಿಗೆ ಸೇವಿಸುವುದರಿಂದ ಅಥವಾ ಬಿಸಿ ನೀರಿಗೆ ಜೇನುತುಪ್ಪ ಹಾಗೂ ನಿಂಬೆ ರಸ ಹಾಕಿ ಸೇವಿಸುವುದರಿಂದಲೂ ಕೂಡ ಹ್ಯಾಂಗೋವರ್ ​ಕಡಿಮೆಯಾಗುತ್ತದೆ. ನೀವೂ ತೀರ ಹ್ಯಾಂಗೋವರ್​ನಲ್ಲಿದ್ದರೆ, ಆ ಹ್ಯಾಂಗೋವರ್​ನಿಂದ ಹೊರಬರುವವರೆಗೂ ಪ್ರತೀ 20-30 ನಿಮಿಷಕ್ಕೊಮ್ಮೆ 2ರಿಂದ 6 ಚಮಚ ಜೇನುತುಪ್ಪ ಸೇವಿಸಿದರೆ ಹ್ಯಾಂಗೋವರ್ ನಿಂದ ಹೊರಬರಬಹುದು.

ಡ್ರಿಂಕ್ಸ್ ಮಾಡೋದು ಮಾತ್ರ ಮುಖ್ಯ ಅಲ್ಲ.. ಹ್ಯಾಂಗೋವರ್’ನಿಂದ ಹೊರಬರುವುದು ಕೂಡ ಅಷ್ಟೆ ಮುಖ್ಯ…ಹಾಗಾಗಿ ಈ ಮಾಹಿತಿಯನ್ನು ನೀವು ತಿಳಿದುಕೊಂಡು ಇತರರಿಗೂ ಕೂಡ ಶೇರ್ ಮಾಡಿ

 

Edited By

Manjula M

Reported By

Manjula M

Comments