ಪ್ರತಿದಿನ ಸ್ವಲ್ಪ ಬೆಲ್ಲ ಸೇವನೆಯಿಂದ ಆಗುವ ಪ್ರಯೋಜನಗಳೇನು ಗೊತ್ತಾ..?

04 Oct 2018 5:38 PM | Health
2949 Report

ಆರೋಗ್ಯವೇ ಭಾಗ್ಯ ಅಂತಾರೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಎಷ್ಟು ಎಚ್ಚರದಿಂದ ಇದ್ದರೂ ಸಾಲದು. ಸ್ವಲ್ಪ ಆರೋಗ್ಯದಲ್ಲಿ ಏರುಪೇರಾದರೂ ಕೂಡ ಕಿರಿಕಿರಿ ಅನಿಸುತ್ತದೆ. ಕೆಲವೊಮ್ಮೆ ನಮ್ಮ ಅಡುಗೆ ಮನೆಯಲ್ಲಿರುವ  ಮದ್ದುಗಳೇ ನಮ್ಮ ಆರೋಗ್ಯವನ್ನು ಕಾಪಾಡುತ್ತವೆ. ಅದರಲ್ಲಿ ಬೆಲ್ಲ ಕೂಡ ಒಂದು. ಬೆಲ್ಲವೂ ನಮ್ಮ ಆರೋಗ್ಯದ ವಿಷಯದಲ್ಲಿ ಸಾಕಷ್ಟು ಮುಖ್ಯ ಪಾತ್ರವನ್ನು ವಹಿಸುತ್ತದೆ.

ಬೆಲ್ಲದಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗಿರುತ್ತದೆ.  ದೇಹಕ್ಕೆ ಬಲವನ್ನು ನೀಡುತ್ತದೆ. ಹಾಗೂ ರಕ್ತ ಶುದ್ದಿ ಮಾಡಲು ಸಹಾಯಕವಾಗುತ್ತದೆ.

ರಕ್ತಹೀನತೆ ತಡೆಗಟ್ಟುತ್ತದೆ : ಬೆಲ್ಲದಲ್ಲಿ ಕಬ್ಬಿಣ ಮತ್ತು ಫೋಲೇಟ್ ಸಮೃದ್ಧವಾಗಿರುವ ಕಾರಣ ರಕ್ತಹೀನತೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.. ಇದು ಗರ್ಭಿಣಿಯರಿಗೆ ಅತ್ಯಂತ ಒಳ್ಳೆಯದು.

ದೇಹವನ್ನು ನೈಸರ್ಗಿಕವಾಗಿ ಶುದ್ಧಿ ಮಾಡುತ್ತದೆ : ಬೆಲ್ಲ ಸೇವನೆ ಮಾಡುವುದರಿಂದ ಯಕೃತ್ತಿನ ಕೆಲಸದ ಹೊರೆಯನ್ನು ಕಡಿಮೆ ಮಾಡಿ ದೇಹದಿಂದ ಹಾನಿಕಾರಕ ಜೀವಾಣು ಹೊರಹಾಕುವ ಮೂಲಕ ದೇಹದ ಅಂಗವನ್ನು ವಿಷರಹಿತ ಮಾಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.

ಕೀಲು ನೋವು ನಿವಾರಣೆ: ದೇಹದಲ್ಲಿ ಸಾಮಾನ್ಯವಾಗಿ ಕೀಲು ನೋವು ಕಾಣಿಸಿಕೊಳ್ಳುತ್ತದೆ. ಶುಂಠಿಯೊಂದಿಗೆ ಬೆಲ್ಲ ಸೇರಿಸಿ ತಿಂದರೆ ಕೀಲು ನೋವು ವಾಸಿಯಾಗಿ ಮೂಳೆಗಳು ಗಟ್ಟಿಯಾಗುತ್ತವೆ.

ಚರ್ಮದ ಕಾಂತಿ: ಬೆಲ್ಲದಲ್ಲಿ ವಿಟಮಿನ್ ಗಳು ಮತ್ತು ಖನಿಜಗಳಿರುತ್ತವೆ. ಮೊಡವೆಗಳ ನಿಯಂತ್ರಣಕ್ಕೆ ಬೆಲ್ಲ ಸಹಕಾರಿಯಾಗುತ್ತದೆ. ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ.

ಬೆಲ್ಲ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನ ನೀವು ತಿಳಿದುಕೊಂಡ್ರಿ ಅಲ್ವ.. ನೀವು ಇದನ್ನು ತಿಳಿದುಕೊಂಡು ಇತರರಿಗೂ ಈ ಮಾಹಿತಿಯನ್ನು ಶೇರ್ ಮಾಡಿ.

Edited By

Manjula M

Reported By

Manjula M

Comments