ಆರೋಗ್ಯದ ವೃದ್ಧಿಗೆ ನೆರವಾದ ನೇರಳೆಹಣ್ಣು..! ಇದರ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು..?

01 Oct 2018 5:56 PM | Health
1485 Report

ಸಾಮಾನ್ಯವಾಗಿ ಕೆಲವೊಂದು ಹಣ್ಣುಗಳು ನಮ್ಮ ಆರೋಗ್ಯಕ್ಕೆ ತುಂಬಾ ಉಪಯೋಗಕಾರಿಯಾಗಿರುತ್ತದೆ. ಆದರೆ ಅದು ನಮಗೆ ತಿಳಿದಿರುವುದಿಲ್ಲ ಅಷ್ಟೆ.  ಹಳ್ಳಿಗಳನ್ನು ಬೆಟ್ಟ ಗುಡ್ಡಗಳಲ್ಲಿ ಸಿಗುವ ಅನೇಕ ಹಣ್ಣುಗಳು ಕೂಡ ಆರೋಗ್ಯಕ್ಕೆ ತುಂಬಾ ಸಹಾಯಕಾರಿ. ಅದೇ ರೀತಿ ಈಗ ನಾವು ತಿಳಿಸಿಕೊಡುವ ಹಣ್ಣು ಕೂಡ ತುಂಬಾ ಒಳ್ಳೆಯದು..ಈ ಹಣ್ಣಿನಲ್ಲಿ ಹೆಚ್ಚಿನ ಪೌಷ್ಟಿಕಾಂಶವಿರುತ್ತದೆ.

ಯಾವುದು ಈ ಹಣ್ಣು ಅಂತೀರಾ ಅಂತಾ ಯೋಚನೆ ಮಾಡುತ್ತಿದ್ದೀರಾ,, ಅದೇ ನೇರಳೇ ಹಣ್ಣು ಈ ನೇರಳೆಹಣ್ಣಿನಲ್ಲಿ ಪ್ರೊಟಿನ್,ಫೈಬರ್, ಆರ್ಗೇನಿಕ್ ಆ್ಯಸಿಡ್ ಅಂಶಗಳಿದ್ದು ಈ ಅಂಶಗಳು ನಮ್ಮ ಆರೋಗ್ಯಕ್ಕೆ ತುಂಬ ಒಳ್ಳೆಯದು.

ಈ ನೇರಳೆ ಹಣ್ಣು ತಿನ್ನುವುದರಿಂದ ಸಿಗುವ ಉಪಯೋಗಗಳು ಈ ಕೆಳಕಂಡಂತಿವೆ.

  • ನೇರಳೆ ಹಣ್ಣಿನಲ್ಲಿ ಕಬ್ಬಿಣಾಂಶ ಹೆಚ್ಚಿರುವುದರಿಂದ ರಕ್ತದಲ್ಲಿ ಹಿಮೋಗ್ಲೊಬಿನ್ ಮತ್ತು ಆಮ್ಲಜನಕ ಕೂಡಿದ ರಕ್ತ ದೇಹದಲ್ಲಿ ಸಂಚರಿಸುತ್ತದೆ. ರಕ್ತ ಶುದ್ಧಿಯಾಗುವುದರಿಂದ ಮುಖದ ತ್ವಚ್ಛೆಗೆ ಕಾಂತಿ ಹೆಚ್ಚುತ್ತದೆ. ಇನ್ನೂ ಈ ನೇರಳೆಹಣ್ಣಿನ ಬೀಜವನ್ನು ರುಬ್ಬಿ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ನಿವಾರಣೆಯಾಗುತ್ತದೆ.
  •  ಅಜೀರ್ಣ, ಬೇಧಿ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಈ ನೇರಳೆಹಣ್ನು ತುಂಬಾ ಸಹಾಯಕಾರಿಯಾಗಿದೆ. ಜತೆಗೆ ನೇರಳೆಹಣ್ಣಿನ ಜ್ಯೂಸ್ ಕುಡಿಯುವುದರಿಂದ ಲಾಲಾರಸ ಹೆಚ್ಚಿ ಜೀರ್ಣಕ್ರಿಯೆಗೆ ಒಳ್ಳೆಯದು.
  • ಈ ಹಣ್ಣು ದೇಹದಲ್ಲಿರುವ ಸಕ್ಕರೆ ಪ್ರಮಾಣದ ಮೇಲೆ ಯಾವುದೆ ಪರಿಣಾಮ ಬೀರದೆ ಇರುವುದರಿಂದ ಡಯಾಬಿಟಿಸ್ ಇರುವವರಿಗೆ ಈ ಹಣ್ಣು ತುಂಬಾ ಒಲ್ಳೆಯದು. ಜತೆಗೆ ಡಯಾಬಿಟಿಸ್ ಲಕ್ಷಣಗಳಾದ ಬಾಯಾರಿಕೆ, ಪದೇ ಪದೇ ಮೂತ್ರವಿರ್ಸಜನೆಯಂತಹ ತೊಂದರೆಗಳನ್ನು ಕಡಿಮೆ ಮಾಡುತ್ತದೆ.
  • ನೇರಳೆ ಹಣ್ಣಿನಲ್ಲಿರುವ ಈ ಗುಣಗಳು ದೇಹವನ್ನು ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ. ನೇರಳೆ ಹಣ್ಣಿನಲ್ಲಿ ಸಿ ವಿಟಮಿನ್ ಇದ್ದು ಕೆಮ್ಮು ಮತ್ತು ಗಂಟಲು ನೋವನ್ನು ಕಡಿಮೆ ಮಾಡುತ್ತದೆ.

ಒಟ್ಟಾರೆ ನೇರಳೆಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಒಂದು ಉತ್ತಮ ಹಣ್ಣಾಗಿದ್ದು, ಈ ಹಣ್ಣು ತಿನ್ನುವುದರಿಂದ ದೇಹದಲ್ಲಿ ರೋಗ ಪ್ರತಿನಿರೋಧಕ ವ್ಯವಸ್ಥೆಯನ್ನು ಸರಿಪಡಿಸುತ್ತದೆ. ಈ ಮಾಹಿತಿಯನ್ನು ನೀವು ತಿಳಿದುಕೊಂಡು ಇತರರಿಗೂ ಷೇರ್ ಮಾಡಿ

Edited By

Manjula M

Reported By

Manjula M

Comments