ಆರೋಗ್ಯಕ್ಕೆ ಮೊಟ್ಟೆಯ ಹಳದಿ ಭಾಗ ಒಳ್ಳೆಯದೋ ಕೆಟ್ಟದ್ದೋ…!? ತಿಳಿದುಕೊಳ್ಳಬೇಕಾ ಹಾಗಾದ್ರೆ ಇದನ್ನೊಮ್ಮೆ ಓದಿ

22 Aug 2018 5:58 PM | Health
1790 Report

ಎಲ್ಲರಿಗೂ ಗೊತ್ತಿರೋ ಹಾಗೆ, ಮೊಟ್ಟೆ ಒಂದು ಉತ್ತಮ‌ ಪೌಷ್ಠಿಕಾಂಶ ಇರುವ ಆಹಾರವೆಂದೇ ಹೇಳಬಹುದು. ಆದರೆ ಮೊಟ್ಟೆಯಲ್ಲಿ‌ ಕೇವಲ ಬಿಳಿ ಭಾಗ ಆರೋಗ್ಯಕರ‌ ಹಾಗೂ ಹಳದಿ ಭಾಗ ಆರೋಗ್ಯಕರವಲ್ಲ ಎಂಬುದು‌ ಹಲವರ ವಾದ.

ಮೊಟ್ಟೆಯಲ್ಲಿ‌ನ ಬಿಳಿ‌ ಭಾಗದಲ್ಲಿ ಪ್ರೋಟೀನ್ ಅಧಿಕವಾಗಿದ್ದು ಇದರ ಹಳದಿ ಭಾಗದಲ್ಲಿ ಮಿನರಲ್ ಗಳು, ವಿಟಮಿನ್ ಗಳು, ಅಮಿನೋ ಆಸಿಡ್ ಹಾಗೂ ಕೊಲೆಸ್ಟ್ರಾಲ್ ಗಳಿರುತ್ತವೆ. ಕೊಲೆಸ್ಟ್ರಾಲ್‌ ಎಂದ ಕೂಡಲೇ ಭಯ ಪಡುವವರೇ ಹೆಚ್ಚು. ಆದರೆ ಭಯ ಬಿಡಿ ಮೊಟ್ಟಿಯಲ್ಲಿನ‌ ಹಳದಿ ಭಾಗದಲ್ಲಿರುವ ಕೊಲೆಸ್ಟ್ರಾಲ್‌ ಒಳ್ಳೆಯ ಕೊಲೆಸ್ಟ್ರಾಲ್. ಹೌದು, ಮೊಟ್ಟೆ ಕೇವಲ ಮಾಂಸಖಂಡಗಳನ್ನು ಬಲಿಷ್ಠಗೊಳಿಸುವುದಷ್ಟೇ ಅಲ್ಲ ದೇಹದ ತೂಕವನ್ನು ಸಹ ನಿಯಂತ್ರಿಸುವಲ್ಲಿ ಸಹಕಾರಿ. ಬೆಳಗಿನ ಉಪಹಾರದಲ್ಲಿ 2 ಮೊಟ್ಟೆಗಳನ್ನು ಸೇವಿಸಿದರೆ ಇದು ಹಸಿವನ್ನು‌ ಕಡಿಮೆ‌ ಮಾಡುತ್ತದೆ. ಹೀಗಾಗಿ ಹಸಿವು ಕಡಿಮೆ ಎಂದಾದಾಗ ಆಹಾರ ಸೇವನೆಯೂ ಸಹ ಕಡಿಮೆಯಾಗುತ್ತದೆ ಇದರಿಂದ‌ ನಿಮ್ಮ‌ ದೇಹದ ತೂಕವನ್ನು ಸಮಪ್ರಮಾಣದಲ್ಲಿಡಬಹುದು.

ಇನ್ನು ಹಲವರು ಕೇವಲ ಮೊಟ್ಟೆಯ ಬಿಳಿ‌ ಭಾಗವನ್ನು ಮಾತ್ರ ಸೇವಿಸಬೇಕು ಹಳದಿ ಭಾಗವನ್ನು‌‌ ಸೇವಿಸಿದರೆ ಇದರಲ್ಲಿರುವ ಕೊಲೆಸ್ಟ್ರಾಲ್ ಹೃದಯ ಸಂಬಂಧಿ ತೊಂದರೆಗಳನ್ನು ತರುತ್ತದೆ‌ ಎಂದು ತಪ್ಪಾಗಿ ಭಾವಿಸಿದ್ದಾರೆ. ಆದ್ರೆ ಅದು ತಪ್ಪು. ಇನ್ನು ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ ನಮ್ಮ‌ ದೇಹದಲ್ಲಿ ಕೇವಲ ಶೇ. 25% ರಷ್ಟು ಕೊಲಸ್ಟ್ರಾಲ್‌ ಮಾತ್ರ ನಾವು ಸೇವಿಸುವ ಆಹಾರದಿಂದ ಬರುತ್ತದೆ. ಮಿಕ್ಕ 75% ಕೊಲೆಸ್ಟ್ರಾಲ್ ಅನ್ನು ನಮ್ಮ‌ ದೇಹವೇ ಉತ್ಪಾದಿಸಿಕೊಳ್ಳುತ್ತದೆ. ಲಿವರ್ ಈ ಕೊಲೆಸ್ಟ್ರಾಲ್‌ ಅನ್ನು ಉತ್ಪಾದಿಸುತ್ತದೆ. ಅಂದರೆ ನೀವು ಸೇವಿಸುವ ಆಹಾರದಲ್ಲಿ ಕೊಲೆಸ್ಟ್ರಾಲ್‌ ಅಂಶ ಕಡಿಮೆಯಿದ್ದರೆ ನಿಮ್ಮ ದೇಹಕ್ಕೆ ಬೇಕಾದ ಕೊಲೆಸ್ಟ್ರಾಲ್‌ ಅನ್ನು ಲಿವರ್ ಉತ್ಪಾದಿಸುತ್ತದೆ. ಒಂದು ವೇಳೆ ನೀವು ಆಹಾರದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚು ತೆಗೆದುಕೊಳ್ಳುತ್ತಿದ್ದರೆ ಆಗ ಲಿವರ್ ಕೊಲೆಸ್ಟ್ರಾಲ್ ಅಂಶವನ್ನು ಉತ್ಪಾದಿಸುವುದನ್ನು ಕಡಿಮೆ ಮಾಡುತ್ತದೆ.

ಕೊಲೆಸ್ಟ್ರಾಲ್‌ನಲ್ಲಿ ಒಟ್ಟು ಎರಡು ವಿಧಗಳಿವೆ.‌ ಒಂದು ಎಲ್ ಡಿ ಎಲ್ ಕೊಲೆಸ್ಟ್ರಾಲ್ ಮತ್ತೊಂದು ಹೆಚ್ ಡಿ ಎಲ್. ಕೊಲೆಸ್ಟ್ರಾಲ್. ಎಲ್‌ಡಿಎಲ್ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಹಾನಿಕಾರಕ ಇದು ಹೃದಯ ಸಂಬಂಧಿ ಕಾಯಿಲೆಗಳನ್ನು ತರುತ್ತದೆ. ಹೆಚ್ ಡಿ ಎಲ್ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಉತ್ತಮ ಇದು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುತ್ತದೆ. ಆದ್ದರಿಂದ ಮೊಟ್ಟೆಯ ಹಳದಿ ಭಾಗದಲ್ಲಿರುವ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಹಾನಿಕಾರಕವಲ್ಲ. ಸರಿಯಾದ ಪ್ರಮಾಣದ ಕೊಲೆಸ್ಟ್ರಾಲ್ ದೇಹದಲ್ಲಿ ಇರದಿದ್ದರೆ ಟೆಸ್ಟೋಸ್ಟಿರಾನ್ ಹಾರ್ಮೋನ್ ನ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ‌. ಟೆಸ್ಟೋಸ್ಟಿರಾನ್ ಹಾರ್ಮೋನ್ ದೇಹದ ಬೆಳವಣಿಗೆಗೆ ಅತ್ಯಗತ್ಯ. ಇದನ್ನು ಗ್ರೋಥ್ ಹಾರ್ಮೋನ್ ಎಂದು ಕರೆಯಲಾಗುತ್ತದೆ. ಬೆಳೆಯುವ ಮಕ್ಕಳಿಗೆ ಈ ಹಾರ್ಮೋನ್ ಅವಶ್ಯಕ. ಆದ್ದರಿಂದ ಮಕ್ಕಳಿಗೆ ಮೊಟ್ಟೆ ಅತ್ಯುತ್ತಮ‌ ಆಹಾರವೆಂದೇ ಹೇಳಬಹುದು. ಇನ್ನು ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬೇಕೆಂದು ಗೊಂದಲದಲ್ಲಿದ್ದರೆ ದಿನಕ್ಕೆ 3 ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಉತ್ತಮ. ಆದರೆ ಒಬ್ಬೊಬ್ಬರ ದೇಹ ಒಂದೊಂದು ರೀತಿ ಇರುವುದರಿಂದ ಅವರ ದೇಹಕ್ಕೆ ಸರಿಯಾಗಿ ಹೊಂದುವಷ್ಟು ಮೊಟ್ಟೆಯನ್ನು ತಿನ್ನಬಹುದು. ಹೃದಯ ಸಂಬಂಧಿ ತೊಂದರೆಯಿರುವವರು ಡಾಕ್ಟರ್ ಅನ್ನು ಸಂಪರ್ಕಿಸಿ. ಅವರು ನಿಮ್ಮ ದೇಹದ ಕೊಲೆಸ್ಟ್ರಾಲ್ ಪ್ರಮಾಣವನ್ನು ಪರೀಕ್ಷಿಸಿ ಎಷ್ಟು ಮೊಟ್ಟೆಗಳನ್ನು ತಿನ್ನಬಹುದೆಂದು ತಿಳಿಸುತ್ತಾರೋ ಅಷ್ಟನ್ನ ಸೇವಿಸಿದರೆ ಒಳಿತು.ಮೊಟ್ಟೆ ಹಲವು ಕಾರಣಗಳಿಂದ ಆರೋಗ್ಯಕ್ಕೆ ಒಳ್ಳೆಯದು. ದೇಹಕ್ಕೆ ಬಲ ನೀಡುವುದಲ್ಲದೇ ನಮ್ಮ‌ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಇನ್ಮುಂದೆ ಯೋಚಿಸದೇ ಮೊಟ್ಟೆಯನ್ನ ತಿನ್ನೋ ಅಭ್ಯಾಸ ಮಾಡಿಕೊಳ್ಳಿ.

Edited By

Manjula M

Reported By

Manjula M

Comments