ಒಣದ್ರಾಕ್ಷಿ ತಿಂದ್ರೆ ಎಷ್ಟೆಲ್ಲಾ ಪ್ರಯೋಜನ ಅನ್ನೋದು ಗೊತ್ತಾ..? ಗೊತ್ತಿಲ್ಲ ಅಂದ್ರೆ ಇದನ್ನೊಮ್ಮೆ ಓದಿ

21 Aug 2018 3:38 PM | Health
1078 Report

ಡ್ರೈ ಫ್ರೂಟ್ಸ್ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರೂ ಡ್ರೈ ಫ್ರೂಟ್ಸ್ ತಿನ್ನಿ ಎಂದು ಹೇಳುತ್ತಾರೆ. ಆದರೆ ಈ ಡ್ರೈ ಫ್ರೂಟ್ಸ್‍ನ ಒಂದೊಂದು ಹಣ್ಣಿನಲ್ಲು ಒಂದೊಂದು ಆರೋಗ್ಯ ವೃದ್ಧಿಯ ಅಂಶಗಳಿವೆ. ಆದ್ದರಿಂದಲೆ ಹಿರಿಯರು ಡ್ರೈ ಫ್ರೂಟ್ಸ್ ತಿನ್ನಲು ಸಲಹೆ ನೀಡುತ್ತಾರೆ. ಈಗ ಇದೆ ಡ್ರೈ ಫ್ರೂಟ್ಸ್‍ಗಳಲ್ಲಿ ಒಂದಾದ ಒಣದ್ರಾಕ್ಷಿಯಲ್ಲಿರುವ ಆರೋಗ್ಯ ಗುಣಗಳನ್ನು ತಿಳಿದುಕೊಳ್ಳೋಣ

ಒಣದ್ರಾಕ್ಷಿಯಲ್ಲಿ ಫೈಬರ್, ಮಿನರಲ್ಸ್, ವಿಟಮಿನ್ಸ್‍ಗಳು ಹೇರಳವಾಗಿದ್ದು, ಒಣದ್ರಾಕ್ಷಿ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಒಣದ್ರಾಕ್ಷಿಯಲ್ಲಿ ಸಿಹಿ ಮತ್ತು ಕ್ಯಾಲರಿ ಅಂಶವಿದೆ. ಈ ಅಂಶದಿಂದ ನಮ್ಮ ಆರೋಗ್ಯಕ್ಕೆ ತುಂಬಾ ರೀತಿಯ ಲಾಭಗಳಿವೆ

ಒಣದ್ರಾಕ್ಷಿಯಲ್ಲಿರುವ ಉತ್ತಮ ಆರೋಗ್ಯ ಗುಣಗಳು

1. ಜೀರ್ಣಕ್ರಿಯಗೆ ಉತ್ತಮ : ಪ್ರತಿದಿನ ಒಣದ್ರಾಕ್ಷಿ ತಿನ್ನುವುದರಿಂದ ಹೊಟ್ಟೆ ಸಮಸ್ಯೆ , ಮಲಬದ್ಧತೆ, ನಿವಾರಣೆಯಾಗುತ್ತದೆ. ಜತೆಗೆ ಒಣದ್ರಾಕ್ಷಿಯಲ್ಲಿರುವ ಫೈಬರ್ ಅಂಶ ದೇಹದಲ್ಲಿರುವ ಪದಾರ್ಥವನ್ನು ತೆಗೆಯಲು ಸಹಾಯ ಮಾಡುತ್ತದೆ.
2. ಅನೇಮಿಯಾ ಸಮಸ್ಯೆಗೆ ಸಹಕಾರಿ: ಒಣದ್ರಾಕ್ಷಿಯಲ್ಲಿ ಕಬ್ಬಿಣಾಂಶ ಮತ್ತು ವಿಟಮಿನ್ ಬಿ ಇರುವುದರಿಂದ ಅನೇಮಿಯಾ ಸಮಸ್ಯೆಯನ್ನು ಗುಣಪಡಿಸಬಹುದು. ಮತ್ತು ಒಣದ್ರಾಕ್ಷಿ ಸೇವನೆಯಿಂದ ಕೆಂಪು ರಕ್ತಕಣಗಳು ಹೆಚ್ಚಾಗುತ್ತದೆ.
3. ಆ್ಯಸಿಡಿಟಿಯಿಂದ ದೂರ ವಿರಬಹುದು: ಇದರಲ್ಲಿರುವ ಪೊಟ್ಯಾಶಿಯಂ, ಮ್ಯಾಗ್ನೇಶಿಯಮ್ ಅಂಶದಿಂದ ಆ್ಯಸಿಡಿಟಿಯನ್ನು ತಡೆಯಬಹುದು. ಒಣದ್ರಾಕ್ಷಿಯಿಂದ ಕಿಡ್ನಿ ಸಮಸ್ಯೆ, ಹೃದಯ ಸಮಸ್ಯೆ, ಆರ್ಥರೈಟಿಸ್ ಸಮಸ್ಯೆಗಳನ್ನು ಗುಣಪಡಿಸುವ ಅಂಶಗಳಿವೆ.
4. ತೂಕ ನಿಯಂತ್ರಿಸಬಹುದು: ಸಣ್ಣಗಿದ್ದವರು ತಮ್ಮ ತೂಕ ಹೆಚ್ಚಿಸಿಕೊಳ್ಳಬೇಕು ಎನ್ನುವವರಿಗೆ ಒಣದ್ರಾಕ್ಷಿ ಸಖತ್ ಸಹಾಯ ಮಾಡುತ್ತದೆ. ಒಣದ್ರಾಕ್ಷಿಯಲ್ಲಿ ಗ್ಲುಕೋಸ್, ಫುಕ್ಟೋಸ್ ಇರುವುದರಿಂದ ದೇಹದಲ್ಲಿ ಶಕ್ರಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್ ಹೆಚ್ಚಿಸದೆ ತೂಕವನ್ನು ಹೆಚ್ಚಿಸಿಕೊಳ್ಳಬಹುದು.

ಜೊತೆಗೆ ಒಳದ್ರಾಕ್ಷಿ ತ್ವಚೆಯು ಹಾನಿಯಾಗದಂತೆ ಒಳಗಿನಿಂದಲೇ ರಕ್ಷಿಸುತ್ತದೆ. ಇನ್ನೇಕೆ ತಡ ಇನ್ನೂ ಮುಂದೆ ಒಣದ್ರಾಕ್ಷಿಯನ್ನು ತಿನ್ನಲು ಶುರುಮಾಡಿ ಉತ್ತಮ ಆರೋಗ್ಯವನ್ನು ಪಡೆಯಿರಿ.

Edited By

Manjula M

Reported By

Manjula M

Comments