ಹಸ್ತಗಳ ಪಾಲನೆ ಪೋಷಣೆ ಹೇಗೆ ಮಾಡಬೇಕು ಅನ್ನೋದು ಗೊತ್ತಾ..!?

09 Aug 2018 2:26 PM | Health
634 Report

ಗೃಹಿಣಿಯರು ದಿನದಲ್ಲಿ ತುಂಬಾ ಹೊತ್ತು ಕೆಲಸದಲ್ಲಿಯೇ ತೊಡಗಿರುತ್ತಾರೆ..ತಮ್ಮ ಆರೋಗ್ಯದ ಕಾಳಜಿಯನ್ನು ಕೂಡ ಮಾಡಲು ಸಾಧ್ಯವಾಗುವುದಿಲ್ಲ…ಇದರಿಂದ ಆರೋಗ್ಯ ಏರುಪೇರಾಗುವ ಸಂಭವವಾಗಿರುತ್ತದೆ..ಹಗಲು ರಾತ್ರಿ ಎನ್ನದೆ ದುಡಿಯುವ ಹೆಂಗಸರು ಇದರಿಂದ ತುಂಬಾ ಕಷ್ಟ ಪಡಬೇಕಾಗುತ್ತದೆ. ಇದರಿಂದಾಗಿ ದೇಹದಲ್ಲಿ ಪೋಷಕಾಂಶದ ಕೊರತೆ ಕಾಣಸಿಗುತ್ತದೆ.

ತುಂಬಾ ಹೊತ್ತು ಕೆಲಸ ಮಾಡುವುದರಿಂದ ಕೈಗಳಿಗೆ ತುಂಬ ಆಯಾಸವಾಗುತ್ತದೆ. ತಮ್ಮ ಆರೋಗ್ಯದ ಬಗ್ಗೆ ಹೆಂಗಸರು ಸಮಯವನ್ನು ಮೀಸಲಿಡಬೇಕಾಗುತ್ತದೆ. ಆದ್ರೆ ಹೆಂಗಸರು ಇದರ ಬಗ್ಗೆ ಯೋಚನೆಯನ್ನೂ ಕೂಡ ಮಾಡುವುದಿಲ್ಲ.. ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ಮನೆ ಕ್ಲೀನ್ ಮಾಡುವುದು ಈ ರೀತಿಯ ಕೆಲಸ ಮಾಡುವುದರಿಂದ ಕೈಗಳ ಆರೈಕೆ ತುಂಬಾ ಕಷ್ಟವಾಗುತ್ತದೆ... ವಿಶೇಷವಾಗಿ ಕೈಗಳ ಚರ್ಮಕ್ಕೆ ಹೆಚ್ಚಿನ ಆದ್ಯತೆಯನ್ನು ನೋಡಿಕೊಳ್ಳಬೇಕಾಗುತ್ತದೆ... ಸತ್ತ ಜೀವಕೋಶಗಳನ್ನು ನಿವಾರಿಸುವುದು. ಕೊಳೆ ಮತ್ತು ಒಣಗಿದಸ ಬೆವರನ್ನು ನಿವಾರಿಸುವ ಮೂಲಕ ಕೈಗಳನ್ನು ಮೃದುವಾಗಿರಿಸಲು ಸಹಾಯವಾಗುತ್ತದೆ ಇದಕ್ಕೆ ಮನೆಯಲ್ಲೆ ಮಾಡಬಹುದಾದ ಕೊಬ್ಬರಿ ಎಣ್ಣೆಯನ್ನು ಎರಡೂ ಹಸ್ತಗಳಿಗೆ ಹಚ್ಚಿಕೊಂಡು ನಯವಾಗಿ ಮಸಾಜ್ ಮಾಡಿ ರಾತ್ರಿಪೂರ ಹಾಗೆ ಇರಲು ಬಿಡಿ.. ಇದರಲ್ಲಿರುವ ಕೊಬ್ಬಿನ ಆಮ್ಲದ ಅಂಶಗಳು ಆದ್ರತೆ ನೀಡುವ ಮೂಲಕ ಕೈಗಳು ಕೋಮಲವಾಗಿ ಇರುವಂತೆ ಮಾಡುತ್ತದೆ. ಕೊಬ್ಬರಿ ಎಣ್ಣೆಯು ಸೌಂದರ್ಯದ ವಿಷಯದಲ್ಲಿ ಎತ್ತಿದ ಕೈ .. ಹಾಲಿನ ಕೆನೆ ಅಥವಾ ಕ್ರೀಂ ಸಹ ನಮ್ಮ ಒಣಕೈಗಳಿಗೆ ಉತ್ತಮವಾದ ಪರಿಹಾರ ಒದಗಿಸುತ್ತದೆ.. ವಿಶೇಷವಾಗಿ ಕೈಗಳು ಹೆಚ್ಚು ಒಣಗಿದ್ದರೆ ಚರ್ಮ ಸುಲಿಯುವಂತಿದ್ದರೆ ಇದು ಸೂಕ್ತ ವಿಧಾನವಾಗಿದೆ.. ರಾತ್ರಿ ಮಲಗುವ ಮುನ್ನ ಅಥವಾ ಬೆಳಿಗ್ಗೆ ಎದ್ದ ಬಳಿಕ ಕೈಗಳಿಗೆ ಹಾಲಿನ ಕೆನೆ ಹಚ್ಚಿಕೊಂಡು ಸುಮಾರು ಅರ್ದ ಗಂಟೆ ಹಾಗೆಯೆ ಬಿಡಿ.. ಬಳಿಕ ಉಗುರುಬೆಚ್ಚಗುನ ನೀರಿನಲ್ಲಿ ತೊಳೆದುಕೊಳ್ಳಿ.. ಕೈಗಳು ಮೃದುವಾಗುವವರೆಗೂ ಸೋಪನ್ನು ಬಳಸಬೇಡಿ.. ಹಾಲಿನ ಕೆನೆಯಂತಹ ತ್ವಚೆ ನಿಮ್ಮದಾಗುತ್ತದೆ... ಲೋಳೆರಸದ ಲೇಪನವೂ ಕೂಡ ನಿಮ್ಮ ಕೈಗಳ ತ್ವಚೆಯನ್ನು ಸುಧಾರಿಸುವಲ್ಲಿ ಸಹಾಯಕಾರಿಯಾಗುತ್ತದೆ..ರಾತ್ರಿ ಮಲಗುವಾಗ ಈಗತಾನೆ ಮುರಿದ ಲೋಳೆರಸವನ್ನು ಕೈಗಳಿಗೆ ಹಚ್ಚಿ ನಯವಾಗಿ ಮಸಾಜ್ ಮಾಡಿ... ಇಡಿ ರಾತ್ರಿ ಹಾಗೆ ಬಿಡಿ.. ಬೆಳಿಗ್ಗೆ ಎದ್ದ ಬಳಿಕ ತಣ್ಣಿರೀನಿಂದ ತೊಳೆದುಕೊಳ್ಳಿ.. ಹೀಗೆ ಮಾಡುವುದರಿಂದ ನಿಮ್ಮ ಕೈಗಳು ಮೃದುವಾಗಿರುತ್ತದೆ..

Edited By

Manjula M

Reported By

Manjula M

Comments