ತೂಕ ಕಡಿಮೆ ಮಾಡಿಕೊಳ್ಳಬೇಕಾ..? ಹಾಗಾದ್ರೆ ಈ ಪಾನೀಯಗಳನ್ನು ಸೇವಿಸಿ..!

26 Jul 2018 2:43 PM | Health
1844 Report

ತೂಕ ಕಡಿಮೆ ಮಾಡಿಕೊಳ್ಳಬೇಕು,ಅದರಲ್ಲೂ ಶ್ರಮವಿಲ್ಲದೆ ಕಡಿಮೆ ಮಾಡಿಕೊಳ್ಳಬೇಕು ಎಂಬುದು ತುಂಬಾ ಜನರ ಆಕಾಂಕ್ಷೆಯಾಗಿರುತ್ತದೆ. ತೂಕವನ್ನು ಕಡಿಮೆ ಮಾಡಿಕೊಂಡು ಫಿಟ್ ಆಗಿರುವುದು ಎಲ್ಲರಿಗೂ ಇಷ್ಟ.. ಆದರೆ ಕೆಲವೊಂದು ಕಾರಣಕ್ಕೆ ನಮ್ಮ ತೂಕ ಹೆಚ್ಚಾಗಿ ಬಿಡುತ್ತದೆ. ತೂಕವನ್ನು ಕಡಿಮೆ ಮಾಡಿಕೊಳ್ಳಲು ಒಂದಿಷ್ಟು ಪಾನೀಯಗಳು ಸಹಾಯ ಮಾಡುತ್ತವೆ.

ತೂಕ ಕಡಿಮೆ ಮಾಡಲು ಸಹಾಯ ಮಾಡುವ ಪಾನೀಯಗಳ ಪಟ್ಟಿ ಈ ಕೆಳಕಂಡಂತಿದೆ

ಎಳೆ ನೀರು

ನಮಗೆ ಇಷ್ಟವಾಗುವ ಜ್ಯೂಸ್‌ಗಳು ಬಿಡಬೇಕು ಎಂದರೆ ಸ್ವಲ್ಪ ಕಷ್ಟವಾಗಬಹುದು. ತೂಕ ಕಡಿಮೆ ಮಾಡಿಕೊಳ್ಳಲು ಎಳನೀರು ತುಂಬಾ ಸಹಾಯಕವಾಗುತ್ತದೆ. ಸ್ವಾಭಾವಿಕವಾದ ಸಿಹಿಯಿಂದ ಕೂಡಿರುವ ಈ ಪಾನೀಯವು ಆರೋಗ್ಯಕ್ಕೆ ಒಳ್ಳೆಯದು. ಸಕ್ಕರೆ ಇರುವ ಪಾನೀಯಗಳನ್ನು ಸೇವಿಸುವ ಬದಲಿಗೆ ಕಡಿಮೆ ಕ್ಯಾಲೊರಿ ಇರುವ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುವಂತಹ ಪಾನೀಯಗಳನ್ನುಕುಡಿಯುವುದು ಉತ್ತಮ.

ಗ್ರೀನ್ ಟೀ

ಕ್ಯಾಲೋರಿ ಇಲ್ಲದ ಪಾನೀಯ ಎಂದರೆ ಅದು ಗ್ರೀನ್ ಟೀ.. ಈಗ ಎಲ್ಲೆಲ್ಲೂ ಗ್ರೀನ್ ಟ್ರೆಂಡ್.. ಅಧ್ಯಯನಗಳ ಪ್ರಕಾರ ಯಾರು ಗ್ರೀನ್ ಟಿಯನ್ನು ಸೇವಿಸುತ್ತಾರೋ, ಅವರ ದೇಹದ ತೂಕವು ಇತರರಿಗಿಂತ ವೇಗವಾಗಿ ಕಡಿಮೆಯಾಗುತ್ತದೆ ಎಂದು ವರದಿಯಾಗಿದೆ.

ಗ್ರೀನ್ ವೇನಿಲ್ಲಾ ಆಲ್ಮಂಡ್ ಸ್ಮೂತೀ

ಇದರಲ್ಲಿ ಪ್ರೋಟಿನ್ ಅಂಶವು ಯಥೇಚ್ಛವಾಗಿರುತ್ತದೆ. ಪ್ರೋಟಿನ್ ಅಂಶವು ಕೊಬ್ಬನ್ನು ಕರಗಿಸುತ್ತದೆ.  ಈ ಪಾನೀಯವು ನಿಮ್ಮ ಸ್ನಾಯುಗಳನ್ನು ಕರಗಿಸುವ ಮೂಲಕ ತೂಕವನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಿ ಎಳೆನೀರು, ಸ್ಪೈನಚ್, ಬಾಳೆಹಣ್ಣು, ಬಾದಾಮಿ ಹಾಗೂ ಬೆಣ್ಣೆಯನ್ನು ಚೆನ್ನಾಗಿ ರುಬ್ಬಿಕೊಂಡು ಶೇಕ್  ಸಿದ್ದ ಪಡಿಸಿಕೊಳ್ಳಿ. ಆ ಶೇಕ್ ಗೆ ಒಂದು ಸ್ಪೂನ್ ಪ್ರೋಟಿನ್ ಪುಡಿ ಮತ್ತು 1 ಟೇ.ಸ್ಪೂ ವೇನಿಲ್ಲಾ ಎಕ್ಸ್‌ಟ್ರ್ಯಾಕ್ಟ್ ಅನ್ನು ಸೇರಿಸಿದರೆ  ಪಾನೀಯವು ಸಿದ್ದವಾಗುತ್ತದೆ. ಈ ಪಾನೀಯವು ರುಚಿಕರವು ಹೌದು ಮತ್ತು ಆರೋಗ್ಯಕರವು ಹೌದು.

ಆರೋಗ್ಯಕರವಾದ ಆಹಾರ ಸೇವನೆಯ ಜೊತೆಗೆ ನಿತ್ಯ ವ್ಯಾಯಾಮವನ್ನು ಮಾಡುವುದರಿಂದ ತೂಕವನ್ನು ಆರಾಮವಾಗಿ ಕಡಿಮೆ ಮಾಡಿಕೊಳ್ಳಬಹುದು. ಅದಕ್ಕಾಗಿಯೇ ಹೇಳುವುದು ದೇಹದ ತೂಕ ಕರಗಿಸಬೇಕು ಎಂದರೆ, “ದೇಹವನ್ನು ದಂಡಿಸಬೇಕು ಮತ್ತು ದೇಹಕ್ಕೆ ಬೇಕಾದ ಆರೈಕೆಯನ್ನು ನೀಡಬೇಕು” ಎಂದು. ಈ ಮಾಹಿತಿಯನ್ನು ನೀವು ತಿಳಿದುಕೊಂಡು ಇತರರಿಗೂ ಷೇರ್ ಮಾಡಿ.

Edited By

Manjula M

Reported By

Anand

Comments