ಧ್ಯಾನ ಮಾಡಲು ಈಗ ತಾನೆ ಪ್ರಾರಂಭಿಸುತ್ತಿದ್ದೀರಾ..? ಹಾಗಾದ್ರೆ ಅದಕ್ಕೂ ಮೊದಲು ಇದನ್ನೊಮ್ಮೆ ಓದಿ…!

11 Jul 2018 4:05 PM | Health
3952 Report

ಮನಸ್ಸು ಶಾಂತಚಿತ್ತದಿಂದ ಇರಬೇಕು ಧ್ಯಾನ ಎನ್ನುವುದು ತುಂಬಾನೇ ಮುಖ್ಯ.  ದೇಹವನ್ನು ಸುಸ್ಥಿತಿಯಲ್ಲಿ ಇಡುವುದಕ್ಕೆ ಫಿಟ್ನೆಸ್ ತುಂಬಾನೇ ಮುಖ್ಯ. ಅದರಲ್ಲಿ ಧ್ಯಾನ ಕೂಡ ಒಂದು. ಮೊದಲು ನಾವು ಧ್ಯಾನವನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. “ ಯುಎಸ್ ನ ಬೌದ್ದ ಸಂಪ್ರದಾಯದಲ್ಲಿ ಧ್ಯಾನ ಎಂದರೆ ಕ್ರೀಡೆ ಎಂಬ ಅರ್ಥ ಬರುತ್ತದೆ. ಧ್ಯಾನ ಕೂಡ ದಿನದ ಚಟುವಟಿಕೆಗಳಲ್ಲಿ ಒಂದಾಗಿದೆ. ವಿಭಿನ್ನ ರೀತಿಯ ಧ್ಯಾನಗಳು ಮಾನಸಿಕ ಕೌಶಲ್ಯವನ್ನು ಉತ್ತಮಗೊಳಿಸುತ್ತವೆ ಎಂದು ವಿಸ್ಕಾನ್ಸಿನ್ ನರವಿಜ್ಞಾನ ಪ್ರಯೋಗಾಲಯದ ನಿರ್ದೇಶಕರಾದ  ರಿಚರ್ಡ್ ಜೆ. ಡೇವಿಡ್ಸನ್ ತಿಳಿಸಿದ್ದಾರೆ.ಹಾಗಾಗಿ ನಮ್ಮ ದೇಹಕ್ಕೆ ಪ್ರತಿದಿನ ಧ್ಯಾನದ ಅವಶ್ಯಕತೆ ಇರುತ್ತದೆ. ಮನಸ್ಸನ್ನ ನೆಮ್ಮದಿಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಮೊದಲ ಸಲ ಧ್ಯಾನ ಮಾಡುವವರಿಗೆ ಸ್ವಲ್ಪ ಕಷ್ಟವೆನಿಸುತ್ತದೆ. ಮನಸ್ಸನ್ನ ಏಕಾಗ್ರತೆಯಿಂದ ಇರಿಸುವುದು  ಸ್ವಲ್ಪ ಕಷ್ಟವೆ ಸರಿ. ಹಾಗಾಗಿ ಮೊದಲ ಬಾರಿಗೆ ಯೋಗ ಮಾಡುವವರು ಮೆದುಳಿಗೆ ಸಂವೇದನಾಶೀಲತೆಯನ್ನು ನೀಡುವ ಧ್ಯಾನದ ಡಿವಿಡಿಗಳನ್ನು ಬಳಸಬಹುದು. ಸಾಮಾನ್ಯವಾಗಿ ಧ್ಯಾನವನ್ನು ಪ್ರಾರಂಭಿಸಲು ಸುಲಭ ಮಾರ್ಗವೆಂದರೆ ಉಸಿರಾಟವನ್ನು ಕೇಂದ್ರಿಕರಿಸುವುದು. ಹೀಗೆ ಮಾಡುವುದರಿಂದ ಧ್ಯಾನ ಮಾಡುವವರಿಗೆ ಏಕಾಗ್ರತೆ ಹೆಚ್ಚುತ್ತದೆ.

ಸಮಾಲೋಚನ  ಧ್ಯಾನ

ಏಕಾಗ್ರತೆಯು ಯಾವಾಗಲೂ ಧ್ಯಾನವು ಒಂದೇ ಹಂತದಲ್ಲಿ ಕೇಂದ್ರೀಕೃತವಾಗಿರುತ್ತದೆ. ಏಕಾಗ್ರತೆಯನ್ನು ಹೆಚ್ಚಿಸಲು ಕೆಲವರು ಮಂತ್ರವನ್ನು ಪುನರಾವರ್ತಿಸುತ್ತಾರೆ. ಮತ್ತೆ ಕೆಲವರು ಮೇಣದ ಬತ್ತಿಯ ಜ್ವಾಲೆಯನ್ನು ನೋಡುತ್ತಾ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಅಥವಾ ಮಾಲೆಯಲ್ಲಿರುವ ಮಣಿಗಳನ್ನು ಎಣಿಸುತ್ತಾ ಮನಸ್ಸನ್ನು ಕೇಂದ್ರಿಕರಿಸಬಹುದು. ದೀರ್ಘಕಾಲದವರೆಗೂ ಕೆಲಸ ಮಾಡಬಹುದು.

ಮನಸ್ಥಿತಿ ಮೆಡಿಟೇಷನ್

ಮನಸ್ಥಿತಿ ಮೆಡಿಟೇಶನ್ ಎನ್ನುವುದು  ಮನಸ್ಸಿನ ಮೂಲಕ ಬರುವಂತಹ ಆಲೋಚನೆಗಳನ್ನು ಹಿಡಿದಿಟ್ಟುಕೊಳ್ಳಲು ಸಹಾಯಕವಾಗುತ್ತದೆ.ನಾವು ನಿರ್ಣಯಿಸುವಂತಹ ಆಲೋಚನೆಗಳಲ್ಲಿ ಯಾವುದೇ ಒತ್ತಡ ಬರದಂತೆ ಮನಸ್ಥಿತಿ ಮೆಡಿಟೇಶನ್ ನೋಡಿಕೊಳ್ಳುತ್ತದೆ.ಮಾನಸಿಕ ಯೋಚನೆಗಳನ್ನು ಬರದಂತೆ ನೋಡಿಕೊಳ್ಳುತ್ತದೆ. ಧ್ಯಾನದಿಂದ ಸಾವಧಾನತೆ ಸಿಗುತ್ತದೆ ಹಾಗೂ ಭಾವನೆಗಳು ನಿರ್ಥಿಷ್ಟ ಮಾದರಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.ಮಾನವನ ಪ್ರವೃತ್ತಿಗೆ ಧ್ಯಾನ ಬಹಳ ಮುಖ್ಯವಾಗಿರುತ್ತದೆ. ಒಳ್ಳೆಯ ಆರೋಗ್ಯಕರ ಜೀವನ ನಡೆಸಲು ಧ್ಯಾನವು ಸಹಕಾರಿಯಾಗತ್ತದೆ. ಕೆಲವೊಂದು ಶಾಲೆಗಳಲ್ಲಿ ಏಕಾಗ್ರತೆ ಮತ್ತು ಸಾವಧಾನತೆಯ ಸಂಯೋಜನೆಯಲ್ಲಿ ಧ್ಯಾನ ಅಭ್ಯಾಸವನ್ನು ಮಾಡಿಸುತ್ತಾರೆ.

ಇತರ ಧ್ಯಾನ ಮಾಡುವ ತಂತ್ರಗಳು

ಧ್ಯಾನಗಳಲ್ಲಿ ವಿವಿಧ ರೀತಿಯ ಧ್ಯಾನಗಳಿವೆ. ಉದಾಹರಣೆಗೆ ಬೌದ್ಧ ಸನ್ಯಾಸಿಗಳ ಮಧ್ಯೆ ದೈನಂದಿನ ಧ್ಯಾನ ಅಭ್ಯಾಸವು ತುಂಬಾ ಸಹಾನುಭೂತಿಯಿಂದ ಇರುತ್ತದೆ. ಧ್ಯಾನವು ನಕರಾತ್ಮಕ ಘಟನೆಗಳನ್ನು ನಮ್ಮ ಮನಸ್ಸಿನಲ್ಲಿ ಮೂಡಿಸುವಂತೆ ಮಾಡುತ್ತದೆ.ನಕರಾತ್ಮಕ ಘಟನೆಗಳು ಮನಸ್ಸಿನಿಂದ ಹೋದರೆ ಸಕರಾತ್ಮಕ ಚಿಂತನೆಗೆ ಎಡೆ ಮಾಡಿಕೊಡುತ್ತದೆ.

ಧ್ಯಾನ ಮಾಡುವುದರಿಂದ ಸಿಗುವ ಲಾಭಗಳು

ಧ್ಯಾನ ಮಾಡುವುದರಿಂದ ಸಾಕಷ್ಟು ಬದಲಾವಣೆಗಳು ನಮ್ಮ ದೇಹದಲ್ಲಿ ಆಗುತ್ತದೆ ಹಾಗೂ ಆರೋಗ್ಯದ ತೊಂದರೆಯಿಂದಲೂ ಕೂಡ ದೂರವಿರಬಹುದು. 1970ರ ದಶಕದಲ್ಲಿ ಹಾರ್ವರ್ಡ್ ಯೂನಿವರ್ಸಿಟಿ ಮೆಡಿಕಲ್ ಸ್ಕೂಲ್ ನ ಸಂಶೋಧನೆಯ ಪ್ರಕಾರ ಧ್ಯಾನ ಮಾಡುವುದರಿಂದ ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ ಎಂಬುದು ತಿಳಿದುಬಂದಿದೆ.

ನರ ವ್ಯವಸ್ಥೆಗೆ ಸಂಬಂಧ ಪಟ್ಟಂತೆ ವಿಶ್ರಾಂತಿ ಪ್ರತಿಕ್ರಿಯೆಯ ಮೇಲಿನ ಅಧ್ಯಯನದ ಪ್ರಕಾರ ಅಲ್ಫಾವಧಿಯ ಪ್ರಯೋಜನಗಳನ್ನು ನಾವು ಧ್ಯಾನದ ಮುಖಾಂತರ ಪಡೆಯಬಹುದು.

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ

ಹೃದಯದ ಬಡಿತವನ್ನು ಸುಧಾರಿಸುತ್ತದೆ

ಉಸಿರಾಟದ ಪ್ರಮಾಣವನ್ನು ಸರಿದೂಗಿಸುತ್ತದೆ

ರಕ್ತದಲ್ಲಿರುವ ಕಾರ್ಟಿಸೋಲ್ ಮಟ್ಟಗಳು ಸುಧಾರಿಸುತ್ತವೆ

ಒತ್ತಡವನ್ನು ಕಡಿಮೆ ಮಾಡುತ್ತದೆ.

ಧ್ಯಾನ ಮಾಡುವುದರಿಂದ ಧನಾತ್ಮಕ ಪ್ರತಿಕ್ರಿಯೆಯು ಉಂಟಾಗುತ್ತದೆ.

ಸಮಕಾಲೀನ ಸಂಶೋಧಕರು ಸ್ಥಿರವಾದ ಧ್ಯಾನ ಅಭ್ಯಾಸವು ದೀರ್ಘಕಾಲೀನ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಧ್ಯಾನ ಮಾಡುವವರಲ್ಲಿ ಮೆದುಳು ಮತ್ತು ಪ್ರತಿರಕ್ಷಣಾ ಕ್ರಿಯೆಯ ಮೇಲೆ ಧನಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತದೆ. ಧ್ಯಾನದ ಉದ್ದೇಶವು ನಮ್ಮಲ್ಲಿ ಧನಾತ್ಮಕ ಕ್ರಿಯೆಯನ್ನು ಉಂಟು ಮಾಡುತ್ತದೆ. ಬೌದ್ಧ ತತ್ವ ಶಾಸ್ತ್ರದಲ್ಲಿ ಧ್ಯಾನಕ್ಕೆ ಮಹತ್ವಪೂರ್ಣ ಅರ್ಥವಿದೆ. ಮನಸ್ಸಿನ ಬಾಂಧ್ಯವನ್ನು ಹೆಚ್ಚಿಸುವಲ್ಲಿ ಧ್ಯಾನವು ಸಕರಾತ್ಮಕವಾಗಿ ಕಾರ್ಯ ನಿರ್ವಹಿಸುತ್ತದೆ.ಧ್ಯಾನವು ನಮ್ಮ ಆಂತರಿಕ ಭಾವನೆಗಳ ಜೊತೆ ಬೆರತು ನಮ್ಮನ್ನು ಪ್ರಬುದ್ದರನ್ನಾಗಿಸುತ್ತದೆ.

ಮೊದಲ ಬಾರಿಗೆ ಧ್ಯಾನ ಮಾಡುವವರಿಗೆ ಒಂದಿಷ್ಟು ಉಪಯುಕ್ತವಾದ ಮಾಹಿತಿಗಳನ್ನ ತಿಳಿದುಕೊಳ್ಳುವುದು ಅಗತ್ಯ...ಕುಷನ್ ಮೇಲೆ ಕುಳಿತುಕೊಂಡು ಧ್ಯಾನವನ್ನು ಮಾಡಬಹುದು, ಐ ಪಿಲ್ಲೋಗಳನ್ನು ಬಳಸಬಹುದು. ಮತ್ತು ಅದರ ಜೊತೆಗೆ ನೈಸರ್ಗಿಕವಾಗಿ ಉಸಿರಾಡಬೇಕು. ಉಸಿರಾಟವನ್ನು ಕೇಂದ್ರಿಕರಿಸಿಕೊಂಡಿರಬೇಕು. ದೇಹದಲ್ಲಿರುವ ಇನ್ಹಲೇಷನ್ ಹೇಗೆ ಹೊರಹೋಗುತ್ತದೆ ಎಂಬುದನ್ನು ಗಮನಿಸಬೇಕು. ಧ್ಯಾನದ ಸಮಯದಲ್ಲಿ ನಮ್ಮಲ್ಲಿ ಆಗುವ ಬದಲಾವಣೆಯನ್ನು ಗಮನಿಸಬೇಕು. ಧ್ಯಾನದ ಸಮಯದಲ್ಲಿ ಉಸಿರಾಟದ ಮೇಲೆಯೇ ನಮ್ಮ ಗಮನ ಕೇಂದ್ರಿಕೃತವಾಗಿರಬೇಕು.

ಇನ್ನೂ ಮುಂದೆ ಧ್ಯಾನ ಮಾಡಲು ಬಯಸುವವರು ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಧ್ಯಾನ ಮಾಡಿ.. ಧ್ಯಾನ ಎಂಬುದು ನಮ್ಮ ದೇಹಕ್ಕೆ ಬಹಳ ಮುಖ್ಯ. ಮನಸ್ಸನ್ನು ಶಾಂತಚಿತ್ತತೆಯಿಂದ ಇರುವಂತೆ ನೋಡಿಕೊಳ್ಳುತ್ತದೆ. ಈ ಮಾಹಿತಿಯನ್ನು ನೀವು ತಿಳಿದುಕೊಂಡು ಇತರರಿಗೂ ಶೇರ್ ಮಾಡಿ..

Edited By

Manjula M

Reported By

Manjula M

Comments