ಪ್ರತಿ ದಿನ ಬೆಳಗ್ಗೆ ಒಂದು ಲೋಟ ನೀರಿಗೆ ಇದನ್ನು ಬೆರಸಿ ಕುಡಿದರೆ ಈ ರೋಗಗಳಿಂದ ದೂರವಿರಬಹುದು..!!

10 Jul 2018 4:45 PM | Health
3165 Report

ನಮ್ಮ ದೇಹದ ಆರೋಗ್ಯ ಹಾಗು ನಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರು ಬಹಳ ಅವಶ್ಯಕ. ಪ್ರತಿ ದಿನ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರನ್ನ ಕುಡಿಯುವುದರಿಂದ ನಮ್ಮ ಆರೋಗ್ಯವನ್ನ ಹೆಚ್ಚು ದಿನಗಳವರೆಗೆ ಕಾಪಾಡುವುದರ ಜೊತೆಗೆ ಖಾಯಿಲೆಗಳು ಬಂದು ನಮ್ಮ ದೇಹವನ್ನ ಸೇರುವುದನ್ನ ಸಹ ತಡೆಯಬಹುದು.

> ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ ಜೇನು ತುಪ್ಪ, ಒಂದು ಚಮಚ ನಿಂಬೆ ರಸವನ್ನ ಬೆರೆಸಿ ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದಿನವಿಡೀ ದೇಹವು ಆಕ್ಟಿವ್ ಆಗಿ ಇರುತ್ತದೆ, ದೇಹದ ತೂಕ ಕಡಿಮೆಮಾಡಲು ಇದು ಸಹಾಯಕವಾಗುತ್ತದೆ.

> ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರನ್ನ ಕುಡಿಯುವುದರಿಂದ ಸಕ್ಕರೆ ಖಾಯಿಲೆ, ಮಧುಮೇಹ, ಹೃದಯ ಸಂಬಂಧಿ ಖಾಯಿಲೆಗಳು, ಉದರ ಸಂಬಂಧಿ ಖಾಯಿಲೆಗಳು ಹಾಗು ಇತರೆ ಹಲವು ಖಾಯಿಲೆಗಳು ಹತ್ತಿರ ಸುಳಿಯುವುದನ್ನ ತಡೆಯ ಬಹುದು.

> ಬಿಸಿ ನೀರು ಕುಡಿಯುವುದರಿಂದ ಶರೀರ ಶುದ್ದಿಯಾಗುತ್ತದೆ. ಬಿಸಿ ನೀರನ್ನು ಕುಡಿದ ತಕ್ಷಣ ನಮ್ಮ ಶರೀರದಲ್ಲಿರುವ ಉಷ್ಣತೆಯು ಸ್ವಲ್ಪ ಹೆಚ್ಚಾಗುತ್ತದೆ. ಕೆಲವರಲ್ಲಿ ಬೆವರು ಸುರಿಯುತ್ತದೆ. ಹಾಗೆ ಬೆವರಿನ ಮೂಲಕ ಶರೀರದಲ್ಲಿರುವ ಮಲಿನವೆಲ್ಲವೂ ಹೊರಗೆ ಹೋಗುವುದರಿಂದ ಶರೀರ ಶುದ್ದಿಯಾಗುತ್ತದೆ

Edited By

Shruthi G

Reported By

Shruthi G

Comments