ಆಪ್ಟರ್ ಲಂಚ್ ನಿದ್ದೆ ಯಾಕ್ ಬರುತ್ತೆ ಅನ್ನೋದ್ ಗೊತ್ತಾ?

06 Jul 2018 12:06 PM | Health
1161 Report

ಚಿಂತೆ ಇಲ್ಲದವನಿಗೆ ಸಂತೆಲೂ ನಿದ್ದೆ ಎನ್ನುವ ಗಾದೆ ಮಾತಿದೆ. ಆದರೆ ನಮ್ಮ ದೇಹಕ್ಕೆ ನಿದ್ದೆ ಅನ್ನೋದು ಬಹಳ ಮುಖ್ಯ. ಸರಿಯಾದ ವೇಳೆಗೆ ನಿದ್ದೆ ಮಾಡಿದರೆ ನಮ್ಮ ಆರೋಗ್ಯವು ಕೂಡ ಸಮತೋಲನ ಸ್ಥಿತಿಯಲ್ಲಿರುತ್ತದೆ. ಇಲ್ಲವಾದರೆ ಆರೋಗ್ಯ ಹಾಳಾಗುತ್ತದೆ.

ಹಾಗಾಗಿ ನಮ್ಮ ದೇಹಕ್ಕೆ ಏನಿಲ್ಲಾ ಅಂದರೂ ಕನಿಷ್ಟ 8 ಗಂಟೆಗಳ ನಿದ್ದೆ ಅವಶ್ಯಕ…ಅಯ್ಯೋ ನಿದ್ರೆ ನಿದ್ರೆ ನಿದ್ರೆ, ಕೂತ್ರು ನಿದ್ರೆ, ನಿಂತ್ರು ನಿದ್ರೆ, ಎಲ್ಲಿದ್ರೂ ನಿದ್ರೆ ಅನ್ನೋದು ಯಾಕೆ..? ಮನುಷ್ಯನಿಗೆ ಉಸಿರಾಡುವುದು, ನೀರು ಕುಡಿಯುವುದು, ಆಹಾರ ತಿನ್ನುವುದು ಎಷ್ಟು ಮುಖ್ಯವೋ ನಿದ್ರೆ ಮಾಡುವುದು ಸಹ ಅಷ್ಟೇ ಮುಖ್ಯ…ಆದರೆ ತುಂಬಾ ಜನರಿಗೆ ಆ ನಿದ್ರೆಯೇ ದೊಡ್ಡ ಸಮಸ್ಯೆಯಾಗಿದೆ, ರಾತ್ರಿಯೆಲ್ಲಾ ನಿದ್ರೆ ಬರುವುದಿಲ್ಲ ಹಗಲೆಲ್ಲಾ ಕಣ್ಣು ಮುಚ್ಚುತ್ತಲೇ ಇರುತ್ತಾರೆ, ಎಷ್ಟು ಪ್ರಯತ್ನ ಮಾಡಿದರೂ ಕೂಡ  ರಾತ್ರಿ ಸಮಯ ಬಾರದ ನಿದ್ರೆ ಮಧ್ಯಾಹ್ನ ಊಟ ಮಾಡಿದ ತಕ್ಷಣ ಬಂದು ಬಿಡುತ್ತದೆ. ಹಾಗೆ ಮಧ್ಯಾಹ್ನ ನಿದ್ರೆ ಮಾಡುವುದರಿಂದ ರಾತ್ರಿ ನಿದ್ರೆ ಬರುವುದಿಲ್ಲ…ಸಾಧಾರಣವಾಗಿ ನಾವು ಮಧ್ಯಾಹ್ನದ ವೇಳೆ ಆಹಾರವನ್ನು ಹೆಚ್ಚಾಗಿ ತಿನ್ನುವುದರಿಂದ ಶರೀರದಲ್ಲಿರುವ ಕ್ಲೋಮೋಗ್ರಂಥಿ ಇನ್ಸುಲಿನ್ ಅನ್ನು ಹೆಚ್ಚಾಗಿ ಬಿಡುಗಡೆಯಾಗಲು ಶುರುವಾಗುತ್ತದೆ, ಹಾಗೆ ಮಾಡುವುದರಿಂದ ಅವರ ಬ್ಲಡ್ ಷುಗರ್ ಕಂಟ್ರೋಲ್ ನಲ್ಲಿರುತ್ತದೆ, ಹಾಗೆ ಮಾಡುವ ಕ್ರಮದಲ್ಲಿ ಫಲಿತಾಂಶವಾಗಿ ಸೆರಟೋನಿನ್, ಮೆಲಟೌನಿನ್ ಎಂಬ ಎರಡು ಹಾರ್ಮೋನ್ಗಳನ್ನು ಮೆದುಳು ಉತ್ಪತ್ತಿ ಮಾಡುತ್ತದೆ. ನಿಜಕ್ಕೆ ಮೆಲಟೌನಿನ್ ಎನ್ನುವುದು ನಿದ್ರೆ ಹಾರ್ಮೋನ್. ಅದು ನಿದ್ರೆಯನ್ನು ಹೆಚ್ಚಿಸುತ್ತದೆ. ಅದಕ್ಕೆ ಮಧ್ಯಾಹ್ನದ ಲಂಚ್ ಹೆಚ್ಚಾಗಿ ತಿಂದರೆ ತುಂಬಾ ಜನರಿಗೆ ನಿದ್ರೆ ಬರುತ್ತದೆ. ಅದಕ್ಕಾಗಿ ಮಧ್ಯಾಹ್ನದ ಊಟ ಮಿತಿಯಾಗಿ ತಿನ್ನುವುದು ಅಭ್ಯಾಸ ಮಾಡಿಕೊಳ್ಳುವುದು ತುಂಬಾ ಅವಶ್ಯಕ

Edited By

Manjula M

Reported By

Manjula M

Comments