ಕಣ್ಣಿನ ಸುತ್ತಾ ಕಪ್ಪು ಕಲೆ ಹೆಚ್ಚಾಗಿದ್ಯಾ..? ಹಾಗಾದ್ರೆ ಈ ಮನೆಮದ್ದನ್ನು ಬಳಸಿ

03 Jul 2018 3:50 PM | Health
1789 Report

ಕಣ್ಣಿನ ಸುತ್ತ ಸ್ವಲ್ಪಕಪ್ಪು ಕಲೆ ಇದ್ರೆ ಮುಖದ ಅಂದವೇ ಹಾಳಾಗಿ ಬಿಡುತ್ತದೆ. ನಿದ್ರಾಹೀನತೆಯು, ಯೋಚನೆ ಸೇರಿದಂತೆ ಹಲವಾರು ಕಾರಣಗಳಿಂದ ಕಣ್ಣಿನ ಸುತ್ತಾ ಕಪ್ಪು ಕಲೆಗಳು ಉಂಟಾಗುತ್ತವೆ. ಕಪ್ಪು ಕಲೆಗಳು ಬಂದರೆ ಅಷ್ಟು ಸುಲಭವಾಗಿ ಹೋಗುವುದಿಲ್ಲ. ಮನೆ ಮದ್ದುಗಳಿಂದಲೇ ಕಪ್ಪು ಕಲೆ ನಿವಾರಣೆ ಹೇಗೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ

1. ಟೀ ಪುಡಿ..

ಟೀ ಪುಡಿಯನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ ತಣ್ಣಗಾದ ಬಳಿಕ ಹತ್ತಿಯಿಂದ ಕಣ್ಣಿನ ಸುತ್ತಲೂ ಹಚ್ಚಬೇಕು. ಪ್ರತಿದಿನ ಹೀಗೆ ಮಾಡುತ್ತಾ ಬಂದರೆ ಕಣ್ಣಿನ ಸುತ್ತಲಿನ ಕಪ್ಪು ಕಲೆ ನಿವಾರಣೆಯಾಗುತ್ತದೆ.

2. ಸೌತೆಕಾಯಿ, ಟೊಮೇಟೊ ಮತ್ತು ಲಿಂಬೆಹಣ್ಣಿನ ರಸ..

ಒಂದೊಂದು ಸ್ಪೂನ್ ಸೌತೆಕಾಯಿ ಹಾಗೂ ಟೊಮೇಟೊ ರಸಕ್ಕೆ 4 ಹನಿ ನಿಂಬೆರಸವನ್ನು ಮಿಶ್ರಣ ಮಾಡಿ ಕಣ್ಣಿನ ಕೆಳಗಿನ ಕಪ್ಪು ಕಲೆಗಳಿಗೆ ಹಚ್ಚಿದರೆ 1/2 ಗಂಟೆಯ ಬಿಟ್ಟು ತೊಳೆಯಿರಿ ಹೀಗೆ ಪ್ರತಿ ದಿನ ಮಾಡಿದರೆ 15 ದಿನಗಳಲ್ಲಿ ಕಪ್ಪು ಕಲೆಗಳು ಕಡಿಮೆಯಾಗುತ್ತವೆ.

3. ಆಲೋವೆರಾ.. 

ಲೋಳೆಸರದ ರಸವನ್ನು ಕಣ್ಣಿನ ಸುತ್ತ ಹಚ್ಚಿಕೊಂಡು 30 ನಿಮಿಷ ಬಿಟ್ಟು ತಣ್ಣಿರಿನಲ್ಲಿ ಮುಖ ತೊಳೆದುಕೊಂಡರೆ ಕಪ್ಪು ಕಲೆಗಳು ಮಾಯವಾಗುತ್ತವೆ.

4. ಹಾಲಿನ ಕೆನೆ ಮತ್ತು ಮೊಸರು..

ಒಂದು ಚಮಚ ಮೊಸರಿನ ಜೊತೆಗೆ ಅರ್ಧ ಚಮಚ ಹಾಲಿನ ಕೆನೆಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಪೇಸ್ಟ್ ಮಾಡಿಕೊಂಡು ಈ ಪೇಸ್ಟ್‌ ನ್ನು ಕಪ್ಪು ಕಲೆಗಳ ಸುತ್ತ ಹಚ್ಚಿ ಸುಮಾರು 10-15 ನಿಮಿಷಗಳ ಕಾಲ ಬಿಟ್ಟು ತೊಳೆದರೆ ಕಪ್ಪು ಕಲೆಗಳು ಮಾಯವಾಗುತ್ತವೆ.

ಮನೆಯಲ್ಲಿಯೇ ಸಿಗುವ ಮದ್ದುಗಳನ್ನು ಬಳಸುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಸಹ ಇರುವುದಿಲ್ಲ.ಹಾಗಗಿ ಇವುಗಳನ್ನು ಬಳಸಿ ಕಪ್ಪುಕಲೆಯನ್ನು ಕಡಿಮೆ ಮಾಡಿಕೊಳ್ಳಿ.

Edited By

Manjula M

Reported By

Manjula M

Comments

Cancel
Done