A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ಮುಂಜಾನೆ ಮಿಸ್ ಮಾಡ್ದೆ ವಾಕ್ ಮಾಡಿ..ಇಲ್ಲವಾದರೆ ಈ ಪ್ರಯೋಜನಗಳು ಮಿಸ್ ಆಗೋದು ಗ್ಯಾರೆಂಟಿ..! | Civic News

ಮುಂಜಾನೆ ಮಿಸ್ ಮಾಡ್ದೆ ವಾಕ್ ಮಾಡಿ..ಇಲ್ಲವಾದರೆ ಈ ಪ್ರಯೋಜನಗಳು ಮಿಸ್ ಆಗೋದು ಗ್ಯಾರೆಂಟಿ..!

02 Jul 2018 3:53 PM | Health
2954 Report

ಇಂದಿನ ಆಧುನಿಕ ಯುಗದಲ್ಲಿ ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ಕೂಡ ತಿಳಿದೆ ಇದೆ. ದಿನ ನಿತ್ಯದ ಬಿಡುವಿಲ್ಲದ ಕೆಲಸ, ವಿಶ್ರಾಂತಿ ರಹಿತ ಜೀವನದಿಂದ ನಮ್ಮ ಆರೋಗ್ಯ ನಮ್ಮ ಕೈ ತಪ್ಪುತ್ತಿದೆ.. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯಂತೆ  ನಮ್ಮ ಜೀವನ ಶೈಲಿಯನ್ನು ನಾವಾಗಿಯೇ ಸುಧಾರಿಸಿಕೊಂಡರೆ ಮಾತ್ರ ಆರೋಗ್ಯಪೂರ್ಣ ಜೀವನವು ನಮ್ಮದಾಗುತ್ತದೆ. ಆರೋಗ್ಯದ ವಿಷಯದಲ್ಲಿ ಕೆಲವೊಂದು ನಿಯಮಗಳನ್ನು ಅನುಸರಿಸುತ್ತಿಲ್ಲ ಎಂದಾದರೆ ಕೊಬ್ಬು, ಸ್ಥೂಲಕಾಯತೆ, ಸ್ನಾಯು ಸಂಬಂಧಿ ರೋಗಗಳು, ಆಸಿಡಿಟಿ ಮೊದಲಾದ ತೊಂದರೆಗಳಿಗೆ ಒಳಗಾಗುವುದು ಖಂಡಿತ. ಹಾಗಾಗಿ ಈ ರೀತಿಯ  ತೊಂದರೆಗಳು ನಿಮ್ಮನ್ನು ಕಾಡದೇ ನೀವು ಆರೋಗ್ಯಕರವಾಗಿ ಜೀವನ ನಡೆಸಬೇಕು ಎಂದಾದಲ್ಲಿ ವ್ಯಾಯಮ, ನಡಿಗೆ, ಓಟ, ಯೋಗ ಮೊದಲಾದ ಆರೋಗ್ಯ ಸೂತ್ರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಬೆಳಿಗ್ಗೆ ಬೇಗ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಮುಂಜಾನೆಯ ಪ್ರಶಾಂತತೆಯ ಗಾಳಿಯು ದೇಹಕ್ಕೆ ಸೇರುವಂತೆ ಮಾಡಿದರೆ ಒಳ್ಳೆಯ ಆರೋಗ್ಯವನ್ನು ಪಡೆಯುವಿರಿ.

ಮುಂಜಾನೆಯ ವೇಳೆ ವಾಕ್ ಮಾಡಿದರೆ ನಮ್ಮ ಆರೋಗ್ಯವು ಸುಸ್ಥಿತಿಯಲ್ಲಿರುತ್ತದೆ...ಹಾಗಾಗಿ ಮುಂಜಾನೆ ವಾಕ್ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳೋಣ.

ಜ್ಞಾಪಕ ಶಕ್ತಿಯನ್ನು ವೃದ್ದಿಸುತ್ತದೆ..

ಜಪಾನಿನ ವಿಜ್ಞಾನಿಗಳು ಹೇಳುವ ಪ್ರಕಾರ ರೋಗಿಗಳನ್ನು ಸುಧಾರಿಸಲು ವಾಕಿಂಗ್ ನೆರವಾಗುತ್ತದೆ. ವಾಕಿಂಗ್ ಮಾಡುವುದರಿಂದ ಹಿಪೊಕ್ಯಾಂಪಸ್ ಗಾತ್ರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಾಕಿಂಗ್ ಮಾಡದೆ ಯಾವಾಗಲೂ ನಮ್ಮ ದೇಹವನ್ನು ಜಡ ಹಿಡಿಸಿಕೊಂಡರೆ ನಮ್ಮ ಜೀವನ ಶೈಲಿಯೇ ಹಿಪೊಕ್ಯಾಂಪಸ್ ಅನ್ನು ಕಡಿಮೆಮಾಡುತ್ತದೆ. ಅಷ್ಟೆ ಅಲ್ಲದೆ ಮೆಮೋರಿ ಕೂಡ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ನಮ್ಮ ದೇಹಕ್ಕೆ ವಾಕಿಂಗ್ ತುಂಬಾನೆ ಅಗತ್ಯ.

ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ..

ದೇಹದಲ್ಲಿ ಉಂಟಾಗುವ ಮತ್ತೊಂದು ಸಮಸ್ಯೆ ಎಂದರೆ ಅದು ಅಜೀರ್ಣತೆ. ಅಜೀರ್ಣತೆಯು ಉಂಟಾದರೆ ಮಲಬದ್ದತೆ,ಅತಿಸಾರ ಹಾಗೂ ಕೊಲೊನ್ ಕ್ಯಾನ್ಸರ್ ಗೆ ಕಾರಣವಾಗಬಹುದು. ಆದ್ದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು. ಉತ್ತಮವಾದ ಆಹಾರ ಸೇವನೆ ಮತ್ತು ಕುಡಿಯುವ ನೀರು ಎಲ್ಲವೂ ಕೂಡ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅದೇ ರೀತಿ ವಾಕಿಂಗ್ ಮಾಡುವುದರಿಂದ ಕೂಡ ದೇಹದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.

ವೃದ್ಯಾಪ್ಯವನ್ನು ತಡೆಗಟ್ಟುತ್ತದೆ..

17000 ಹಾರ್ವರ್ಡ್ ಪದವೀಧರರು ನಡೆಸಿದ ಅಧ್ಯಯನದ ಪ್ರಕಾರ ಪ್ರತಿ ದಿನ ಕನಿಷ್ಠ 30 ನಿಮಿಷಗಳ ಕಾಲ ವಾಕಿಂಗ್ ಮಾಡುವುದರಿಂದ ನಮ್ಮ ಡಿಎನ್ಎ ಸಮಗ್ರತೆಯನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಹಾಗಾಗಿ ನಮ್ಮ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಗಟ್ಟಲು ನೆರವಾಗುತ್ತದೆ.

ಒತ್ತಡದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ..

ವಾಕಿಂಗ್ ಮಾಡುವುದರಿಂದ ಒತ್ತಡವು ಕಡಿಮೆಯಾಗುತ್ತದೆ. ವಾಕಿಂಗ್ ಮಾಡುವುದರಿಂದ ದೇಹದಲ್ಲಿರುವ ಕೋಶಗಳಿಗೆ ಪೋಷಕಾಂಶಗಳು ಸಿಗುತ್ತವೆ. ವಾಕಿಂಗ್ ಮಾಡುವುದರಿಂದ  ನರಮಂಡಲವನ್ನು ಉತ್ತೆಜೀಸುತ್ತದೆ ಮತ್ತು ಒತ್ತಡದ ಹಾರ್ಮೋನ್ ಗಳನ್ನು ಕಡಿಮೆ ಮಾಡುತ್ತದೆ. ಅಷ್ಟೆ ಅಲ್ಲದೆ ವಾಕಿಂಗ್ ಮಾಡುವಾಗ ಉಸಿರಾಟದ ಒತ್ತಡವನ್ನು ಕಡಿಮೆ ಮಾಡಿ ಸರಾಗವಾಗಿ ಉಸಿರಾಡಲು ಸಹಕಾರಿಯಾಗುತ್ತದೆ.

ಹೃದಯ ಸಂಬಂಧಿ ತೊಂದರೆಗಳಿಗೆ ಒಳ್ಳೆಯದು..

ವಾಕಿಂಗ್ ಮಾಡುವುದರಿಂದ ಹೃದಯದ ಸಮಸ್ಯೆಯು ಕಡಿಮೆಯಾಗುತ್ತದೆ.  ಹೃದಯರಕ್ತನಾಳದ ಸಮಸ್ಯೆಗಳನ್ನು ನಿವಾರಿಸುತ್ತದೆ. ಅದರಲ್ಲೂ ವಯಸ್ಕರಿಗೆ ವಾಕಿಂಗ್ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ. ವಾಕ್ ಮಾಡುವುದರಿಂದ ರಕ್ತನಾಳಗಳಿಗೆ ರಕ್ತವು ಸರಾಗವಾಗಿ ಸಂಚಲಿಸಿ ಆರೋಗ್ಯ ಕಾಪಾಡುತ್ತದೆ.

ತೂಕವನ್ನು ಕಡಿಮೆ ಮಾಡಲು ಸಹಾಯಕಾರಿ..

ತೂಕವನ್ನು ಕಡಿಮೆ ಮಾಡಲು ಸಾಕಷ್ಟು ವ್ಯಾಯಾಮಗಳನ್ನು ಮಾಡುತ್ತಿರುತ್ತಾರೆ. ಆ ವ್ಯಾಯಾಮಗಳ ಜೊತೆ ಸ್ವಲ್ಪ ವಾಕಿಂಗ್ ಮಾಡುವುದರಿಂದ ತೂಕ ಕಡಿಮೆಯಾಗುತ್ತದೆ. ತೂಕ ಕಡಿಮೆಯಾದರೆ ದೇಹದಲ್ಲಿರುವ ಬೊಜ್ಜಿನ ಪ್ರಮಾಣ ಕೂಡ ಕಡಿಮೆಯಾಗುತ್ತದೆ. ಇದರಿಂದ ಆರೋಗ್ಯ ಉತ್ತವಾಗಿರುತ್ತದೆ.

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ..

ಶಾರೀರಿಕ ಚಟುವಟಿಕೆಯಂತೆ ರೋಗಿಗಳಲ್ಲಿ ಹೆಚ್ಚಿನ ರಕ್ತದೊತ್ತಡವನ್ನು ಕಡಿಮೆಮಾಡಲು ವಾಕಿಂಗ್ ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡ ತುಂಬಾ ಅಪಾಯಕಾರಿ. ಈ ಸಮಸ್ಯೆಯಿಂದ ದೂರವಿರಲು ನಿಯಮಿತವಾಗಿ ವಾಕಿಂಗ್ ಮಾಡಲೇ ಬೇಕಾಗುತ್ತದೆ. ವಾಕಿಂಗ್ ರಕ್ತಸಂಚಾರವನ್ನು ಉತ್ತಮಗೊಳಿಸಲು ಸಹಾಯಮಾಡುವುದಲ್ಲದೆ ಲಭ್ಯವಿರುವ ಆಮ್ಲಜನಕವನ್ನು ಸ್ನಾಯುಗಳಿಗೆ ಒದಗಿಸುವುದರಿಂದ ರಕ್ತನಾಳಗಳಿಗೆ ಹೆಚ್ಚು ವಿಶ್ರಾಂತಿ ದೊರೆಯುತ್ತದೆ. ಹಾಗೂ ರಕ್ತದೊತ್ತಡವು ಕೂಡ ಸುಧಾರಿಸುತ್ತದೆ.

ಮಧುಮೇಹಿಗಳಿಗೆ ಅತ್ಯುತ್ತಮವಾದ ವ್ಯಾಯಮ..

ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ನಡಿಗೆ ಮಧುಮೇಹಿಗಳಿಗೆ ಅತ್ಯುತ್ತಮವಾದ ವ್ಯಾಯಾಮವಾಗಿರುತ್ತದೆ. ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಸೂಕ್ತ ಮಿತಿಯಲ್ಲಿಡಲು ವಾಕಿಂಗ್ ಅತ್ಯುತ್ತಮವಾಗಿದೆ. ನಿಯಮಿತ ನಡಿಗೆಯಿಂದ ಮಧುಮೇಹ ನಿಯಂತ್ರಣದಲ್ಲಿರುವುದರಿಂದ ವೈದ್ಯರು ಮಧುಮೇಹಿಗಳಿಗೆ ನಡಿಗೆಯನ್ನೇ ಸಜೆಸ್ಟ್ ಮಾಡುತ್ತಾರೆ. ಆದರೆ ವಾಕಿಂಗ್ ಅನ್ನು ಬೆಳಗ್ಗಿನ ಹೊತ್ತಿನಲ್ಲಿ ಮಾಡಿದರೆ ಉತ್ತಮವಾಗಿರುತ್ತದೆ.

ಕ್ಯಾನ್ಸರ್ ವಿರುದ್ದ ಹೋರಾಡುತ್ತದೆ..

ಪ್ರತಿದಿನ ವಾಕಿಂಗ್ ಮಾಡುವುದರಿಂದ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು. ವಾಕಿಂಗ್ ಮಾಡುವುದರಿಂದ ತೂಕ ಕಡಿಮೆಯಾಗಿ ಕ್ಯಾನ್ಸರ್  ಜೀವಕೋಶಗಳನ್ನು ತಡೆಗಟ್ಟುತ್ತದೆ. ಇದರಿಂದಾಗಿ ಕ್ಯಾನ್ಸರ್ ಅಪಾಯದ ಪ್ರಮಾಣವು ಕಡಿಮೆಯಾಗುತ್ತದೆ. ವಾಕಿಂಗ್ ಮಾಡುವುದರಿಂದ ಸ್ತನ ಕ್ಯಾನ್ಸರ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ರಕ್ತಸಂಚಾರವನ್ನು ಹೆಚ್ಚಿಸುತ್ತದೆ ..

ರಾತ್ರಿ ನಿದ್ರೆಯ ಸಮಯದಲ್ಲಿ ನಮ್ಮ ದೇಹದ ಅನೈಚ್ಛಿಕ ಕಾರ್ಯಗಳು ಜರುಗುವುದರಿಂದ ಬಹಳಷ್ಟು ಐಚ್ಛಿಕ ರಕ್ತ ಪರಿಚಲನೆ ಅತಿ ಕಡಿಮೆ ಇರುತ್ತದೆ. ಬೆಳಗ್ಗೆದ್ದು ದ್ರವಾಹಾರವನ್ನು ಸೇವಿಸಿ ನಡೆಯುವುದರಿಂದ ದೇಹದ ಎಲ್ಲಾ ಅಂಗಗಳಿಗೆ ಪೂರ್ಣಪ್ರಮಾಣದ ರಕ್ತಸಂಚಾರ ಆಗುತ್ತದೆ. ನಿಯಮಿತ ನಡಿಗೆಯಿಂದ ದೇಹದ ಎಲ್ಲಾ ಭಾಗಗಳಿಗೆ ಸಮರ್ಪಕವಾದ ಪ್ರಮಾಣದಲ್ಲಿ ರಕ್ತಸಂಚಾರದ ಮೂಲಕ ಪೋಷಕಾಂಶಗಳು ಲಭ್ಯವಾಗುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಮುಖ್ಯವಾಗಿ ಹೃದಯವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಹಾಗಾಗಿ ವಾಕಿಂಗ್ ದೇಹಕ್ಕೆ ತುಂಬಾನೇ ಮುಖ್ಯ.

ಗರ್ಭಿಣಿಯರಿಗೆ ಒಳ್ಳೆಯದು..

ಗರ್ಭಾವಸ್ಥೆಯಲ್ಲಿ ವಾಕಿಂಗ್ ಮಾಡಿದರೆ ಆಯಾಸ ಹಾಗೂ ಗರ್ಭಿಣಿಯರಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಇದರಿಂದ ಸುಲಭವಾಗಿ ದೇಹದ ತೂಕವನ್ನು ಇಳಿಸಿಕೊಳ್ಳಬಹುದು ಮತ್ತು ಗರ್ಭವ್ಯವಸ್ಥೆಯ ಸಮಯದಲ್ಲಿ ಬರಬಹುದಾದ ಮಧುಮೇಹದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ವಾಕಿಂಗ್ ಮಾಡುವುದರಿಂದ ಗರ್ಭಪಾತ ಆಗುವುದನ್ನು ಕೂಡ ತಡೆಯಬಹುದು.

ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ..

ವಾಕಿಂಗ್‌ ಮಾಡುವುದರಿಂದ ಕೊಲೆಸ್ಟ್ರಾಲ್ ಮಟ್ಟವು ಕೂಡ ಕಡಿಮೆಯಾಗುತ್ತದೆ. ಇದರಿಂದ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ. ವಾಕಿಂಗ್ ಮಾಡುವುದರಿಂದ ದಿನಕ್ಕೆ ಸುಮಾರು 300 ಕ್ಯಾಲೋರಿ ಬರ್ನ್ ಆಗುವುದಲ್ಲದೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟವು ಗಮನಾರ್ಹವಾಗಿ ಕಡಿಮೆಯಾಗಲು ವಾಕಿಂಗ್  ಸಹಾಯಮಾಡುತ್ತದೆ.
ದಿನನಿತ್ಯ ವಾಕಿಂಗ್ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಂಡ್ರಿ ಅಲ್ವ. ಯಾರ್ ಯಾರ್ ವಾಕಿಂಗ್ ಮಾಡಲ್ವೋ ಅವರೆಲ್ಲರೂ ಕೂಡ ಇಂದಿನಿಂದಲೇ ವಾಕಿಂಗ್ ಮಾಡಲು ಶುರುಮಾಡಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಿ. ಈ ವಿಷಯವನ್ನು ನೀವು ತಿಳಿದುಕೊಂಡು ಇತರರಿಗೂ ಷೇರ್ ಮಾಡಿ.

Edited By

Manjula M

Reported By

Manjula M

Comments